ಮನೆಯಲ್ಲಿ ಶಾಂತಿ ಕಾಪಾಡಲು ಪತಿ ಹೊರ ಹೋಗುವುದೇ ಉತ್ತಮ ಎಂದಾದರೆ, ಅದನ್ನೇ ಸೂಚಿಸಿ: ಮದ್ರಾಸ್‌ ಹೈಕೋರ್ಟ್

  • ಮಹಿಳೆಯರ ಬಗ್ಗೆ ನ್ಯಾಯಾಲಯಗಳು ನಿರ್ಲಕ್ಷ್ಯ ತೋರಬಾರದು‌
  • ಮಹಿಳೆಯರಿಗೆ ರಕ್ಷಣೆ ನೀಡುವ ಆದೇಶ ಪ್ರಾಯೋಗಿಕವಾಗಿರಬೇಕು

ಕಿರುಕುಳ ನೀಡುವ ಪತಿಯನ್ನು ಮನೆಯಿಂದ ಹೊರಹಾಕುವುದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎಂದಾದರೆ, ಆತನಿಗೆ ಪರ್ಯಾಯ ವಸತಿ ಇದೆಯೇ, ಇಲ್ಲವೇ ಎಂಬುದನ್ನೂ ನೋಡದೆ ಅವನನ್ನು ಹೊರಹಾಕುವ ಆದೇಶ ನೀಡಬೇಕು ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ. 

ಮನೆಯಲ್ಲಿ ಪತಿ ಇರುವುದರಿಂದ ಭೀತಿಗೊಳ್ಳುವ ಮಹಿಳೆಯರ ಬಗ್ಗೆ ನ್ಯಾಯಾಲಯಗಳು ನಿರ್ಲಕ್ಷ್ಯ ತೋರಬಾರದು ಎಂದು ನ್ಯಾಯಮೂರ್ತಿ ಆರ್ ಎನ್ ಮಂಜುಳಾ ತಿಳಿಸಿದ್ದಾರೆ. 

“ಗಂಡನನ್ನು ಮನೆಯಿಂದ ಹೊರಹಾಕಿದರೆ ಮಾತ್ರ ಆ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎನ್ನುವುದೇ ಆದರೆ ಆತನಿಗೆ ಇರಲು ಮನೆ ಇದೆಯೇ, ಇಲ್ಲವೋ ಎಂಬುದನ್ನೂ ನೋಡದೆ, ಆತನನ್ನು ಹೊರ ಹಾಕುವ ಆದೇಶ ನೀಡಬೇಕು. ಅವರಿಗೆ ಪರ್ಯಾಯ ವಸತಿ ವ್ಯವಸ್ಥೆ ಇದ್ದರೆ ಒಳ್ಳೆಯದು. ಅದಿಲ್ಲದಿದ್ದರೆ ಬೇರೆ ವ್ಯವಸ್ಥೆ ಮಾಡಿಕೊಳ್ಳುವುದು ಅವರಿಗೆ ಬಿಟ್ಟದ್ದು” ಎಂದು ನ್ಯಾಯಾಲಯ ಹೇಳಿತು.

ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಮಹಿಳೆಯರಿಗೆ ರಕ್ಷಣೆ ನೀಡುವ ಆದೇಶಗಳು ಪ್ರಾಯೋಗಿಕವಾಗಿರಬೇಕು. ಮನೆಯಲ್ಲಿ ಗಂಡನಿದ್ದರೆ, ಮಹಿಳೆ ಹೆದರುತ್ತಾಳೆ ಎನ್ನುವ ಸಂದರ್ಭದಲ್ಲಿ ನ್ಯಾಯಾಲಯಗಳು ಹೆಂಡತಿಗೆ ಕಿರುಕುಳ ಕೊಡದಂತೆ ಎಚ್ಚರಿಸಿದರಷ್ಟೇ ಸಾಲದು. ಜತೆಗೆ ಆತ ಮನೆಯಲ್ಲಿರಲು ಅವಕಾಶ ನೀಡಬಾರದು ಎಂದು ನ್ಯಾಯಮೂರ್ತಿ ಹೇಳಿದರು.  

ಈ ಸುದ್ದಿ ಓದಿದ್ದೀರಾ?: ಹಿಂದೂಗಳಿಗೆ ಮೀಸಲಿಟ್ಟ ನೀರು ಕುಡಿಯಲು ನನ್ನ ತಂದೆಗೂ ನಿಷೇಧವಿತ್ತು: ಮಾಜಿ ಸ್ಪೀಕರ್ ಮೀರಾ ಕುಮಾರ್

ಏನಿದು ಪ್ರಕರಣ?

ತನ್ನ ಹಾಗೂ ತನ್ನ ಕೆಲಸದ ಬಗ್ಗೆ ಪತಿ ಅಗೌರವ ಹೊಂದಿದ್ದಾರೆ. ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಹಾಗಾಗಿ ಅವರನ್ನು ಮನೆಯಿಂದ ಹೊರ ಹಾಕುವಂತೆ ಕೋರಿ ವಕೀಲೆಯೊಬ್ಬರು ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಜಿಲ್ಲಾ ನ್ಯಾಯಾಲಯವು ಆದೇಶ ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ವಕೀಲೆ ಮದ್ರಾಸ್‌ ಹೈಕೋರ್ಟ್‌ ಮೊರೆ ಹೋಗಿದ್ದರು.  

ನಿಮಗೆ ಏನು ಅನ್ನಿಸ್ತು?
0 ವೋಟ್