ಮುಂಗಾರು ಬಿತ್ತನೆ | ಅಮೆರಿಕದಿಂದ 47,000 ಟನ್ ಯೂರಿಯಾ ಆಮದು

urea-fertilizr
  • 2019-20 ರಲ್ಲಿ ವಾಷಿಂಗ್‌ಟನ್‌ನಿಂದ 1.47 ಟನ್ ತರಿಸಿಕೊಂಡ ಭಾರತ 
  • ಭಾರತದಿಂದ ಮೊದಲ ಬಾರಿಗೆ ಗಣನೀಯ ಪ್ರಮಾಣದ ಆಮದು

ಭಾರತ ಅಮೆರಿಕದಿಂದ ಮೊದಲ ಬಾರಿಗೆ ಗಣನೀಯ ಪ್ರಮಾಣದ ಅಂದರೆ ಅಂದಾಜು 47 ಸಾವಿರ ಟನ್‌ಗಳಷ್ಟು ಯೂರಿಯಾ ಗೊಬ್ಬರವನ್ನು ಆಮದು ಮಾಡಿಕೊಳ್ಳುತ್ತಿದೆ. ಆಮದು ಪ್ರಮಾಣ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ.

ಅಮೆರಿಕದ ನ್ಯೂ ಓರ್ಲಿಯನ್ಸ್ ಬಂದರಿನಿಂದ ಭಾರತದ ಪಶ್ಚಿಮ ಕರಾವಳಿ ಹೊಸ ಮಂಗಳೂರಿಗೆ ಸಾಗಿಸಲು ದಕ್ಷಿಣ ಕೊರಿಯಾದ  ಸ್ಯಾಮ್ಸಂಗ್ ಕಂಪನಿ ಹಡಗಿಗೆ ತುಂಬಿಸುತ್ತಿದೆ. ಸರಕು ಭರ್ತಿ ಕೆಲಸ ಈ ವಾರದ ಕೊನೆಯ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.

ಪ್ರತಿ ಟನ್ ಗೆ $ 716.5 (ಸಿಎಫ್ಆರ್) ದರವಿದ್ದು, ಇದರೊಂದಿಗೆ ಅಮೆರಿಕದಿಂದ ಭಾರತಕ್ಕೆ ಬರುವ ಸರಕು ಸಾಗಣೆ ವೆಚ್ಚ ಅಂದಾಜು $ 65 ತಗುಲುತ್ತದೆ. ತುಂಬಿಸಲು ಹೆಚ್ಚುವರಿ $ 10-15 ಭರಿಸಬೇಕಿದೆ. ಒಟ್ಟಾರೆ ಸಾಗಣೆ ವೆಚ್ಚದಲ್ಲಿ ರಿಯಾಯಿತಿ (FOB) ಲಭಿಸಿದಲ್ಲಿ ಮೂಲದ ಬೆಲೆ ಪ್ರತಿ ಟನ್‌ಗೆ $ 635-640 ನಡುವೆ ಇರುತ್ತದೆ ಎಂದು ಅಂದಾಜಿಸಲಾಗಿದೆ.

ಅಮೆರಿಕ ಯೂರಿಯಾ ರಫ್ತು ಮಾಡುವ ಪ್ರಮುಖ ದೇಶವಲ್ಲವಾದರೂ, 2020-21 ಮತ್ತು 2021-22ರಲ್ಲಿ ಭಾರತಕ್ಕೆ ಕ್ರಮವಾಗಿ 2.19 ಟನ್ ಮತ್ತು 43.71 ಟನ್‌ಗಳಷ್ಟು ರಫ್ತು ಮಾಡಿದೆ. ವಾಣಿಜ್ಯ ಸಚಿವಾಲಯದ ಅಂಕಿ-ಅಂಶದ ಪ್ರಕಾರ ಭಾರತ 2019-20ರಲ್ಲಿ ವಾಷಿಂಗ್ಟನ್‌ನಿಂದ ಕೇವಲ 1.47 ಟನ್ ಯೂರಿಯಾವನ್ನು ಭಾರತ ಆಮದು ಮಾಡಿಕೊಂಡಿದೆ.

ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಲಿಮಿಟೆಡ್‌ನಿಂದ ಅಮೆರಿಕ 47 ಸಾವಿರ ಟನ್ ಯೂರಿಯಾ ರಫ್ತು ಮಾಡುತ್ತಿದೆ. ಕಂಪನಿ ಪ್ರತಿ ಟನ್ ಸಿಎಫ್ಆರ್‌- $ 716-721 ದರದಂತೆ ವಿವಿಧ ಪೂರೈಕೆದಾರರಿಂದ 1.65 ಮಿಲಿಯನ್ ಟನ್ (mt) ಯೂರಿಯಾವನ್ನು ಟೆಂಡರ್ ಪಡೆದಿದೆ. 

ಈ ಸುದ್ದಿ ಓದಿದ್ದೀರಾ:? ಭಾರತದಿಂದ ಅತ್ಯಧಿಕ ಅಕ್ಕಿ ಆಮದು ಮಾಡಿಕೊಳ್ಳುತ್ತಿರುವ ಚೀನಾ

"ಮುಂದಿನ ತಿಂಗಳು ಅಮೆರಿಕದಿಂದ ಹಡಗು ತಲುಪುವ ಸಾಧ್ಯತೆ ಇದೆ. ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತಿರುವುದು ನಮ್ಮ ವಿವಿಧ ಆಮದು ಮೂಲದ ಬಗ್ಗೆ ಇತರ ಪೂರೈಕೆದಾರರಿಗೆ ಪೈಪೋಟಿಯ ಸಂದೇಶ ನೀಡುವುದಾಗಿದೆ." ಎಂದು ಉದ್ಯಮ ತಜ್ಞರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಎಫ್‌ ಫೈ- 22 ಅವಧಿಯಲ್ಲಿ ಭಾರತ ಮುಖ್ಯವಾಗಿ ಚೀನಾ, ಓಮನ್, ಯುಎಇ, ಈಜಿಫ್ಟ್‌ ಮತ್ತು ಉಕ್ರೇನ್‌ನಿಂದ $ 6.52 ಶತ ಕೋಟಿ ಮೌಲ್ಯದ 10.16 ಮಿಲಿಯನ್ ಟನ್ ಯೂರಿಯಾ ಆಮದು ಮಾಡಿಕೊಂಡಿದೆ.

ಗ್ರ್ಯಾನ್ಯುಲರ್ ಯೂರಿಯಾದ ಸಾಗಣೆ ವೆಚ್ಚದ ಮೇಲಿನ ರಿಯಾಯಿತಿ ಸೌಲಭ್ಯ (ಎಫ್ಒಬಿ) ದರಗಳು (ಯುಎಸ್- ಗಲ್ಫ್ ಫ್ಯೂಚರ್ಸ್) ಜೂನ್‌ಗೆ ಪ್ರತಿ ಟನ್‌ಗೆ $ 500 ಮತ್ತು ಜುಲೈ ವಿತರಣೆಗೆ $ 455, ಆದರೆ ಮಧ್ಯ ಪ್ರಾಚ್ಯದ ದೇಶದ ಸಾಗಣೆ ವೆಚ್ಚಕ್ಕೆ ಅನುಗುಣವಾಗಿ ಪ್ರತಿ ಟನ್‌ಗೆ $ 610 ಮತ್ತು $ 595 ವೆಚ್ಚವಾಗಲಿದೆ ಎನ್ನಲಾಗಿದೆ.

"ಮಧ್ಯ ಪ್ರಾಚ್ಯ ರಾಷ್ಟ್ರಗಳಿಂದ ಆಮದು ಮಾಡಿಕೊಂಡಲ್ಲಿ ಪ್ರತಿ ಟನ್‌ಗೆ $ 15-20 ರಷ್ಟು ಸರಕು ಸಾಗಣೆ ವೆಚ್ಚ ಕಡಿಮೆಯಾಗುತ್ತದೆ. ಅಮೆರಿಕದಿಂದ ಸಾಗಣೆಗೆ 35 ದಿನಗಳಷ್ಟು ಸಮಯ ಹಿಡಿಯುತ್ತದೆ ಅಥವಾ 5ರಿಂದ 10 ದಿನಗಳಲ್ಲಿ ತಲುಪಬೇಕಾದರೆ ಹೆಚ್ಚಿನ ದರ ನೀಡಬೇಕಾಗುತ್ತದೆ. ಸ್ವಲ್ಪ ದುಬಾರಿಯಾದರೂ ಸಾಗಣೆ ವೆಚ್ಚದ ರಿಯಾಯಿತಿ (ಎಫ್‌ಒಬಿ) ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆ ದರಗಳೊಂದಿಗೆ ಈ ಬೆಲೆಯನ್ನು ಸರಿದೂಗಿಸಬಹುದು" ಎಂದು ತಜ್ಞರು ಮಾಧ್ಯಮಕ್ಕೆ ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್