ಕೊರೊನಾಗೆ ಭಾರತದಲ್ಲಿ 47 ಲಕ್ಷ ಮಂದಿ ಬಲಿ | ವಿಶ್ವಸಂಸ್ಥೆ ವರದಿ

  • ಕೋವಿಡ್‌ ಮರಣ ಸಂಖ್ಯೆ ಬಿಡುಗಡೆ ಮಾಡಿದ ‘ಡಬ್ಲ್ಯೂ ಎಚ್‌ಒ'
  • ಭಾರತದಲ್ಲಿ ಅಧಿಕೃತ ಅಂಕಿಅಂಶಕ್ಕಿಂತ ಹತ್ತು ಪಟ್ಟು ಹೆಚ್ಚು ಸಾವು

 ಭಾರತದಲ್ಲಿ ಕೊರೊನಾ ಸೋಂಕಿಗೆ 47.4 ಲಕ್ಷ ಜನ ಬಲಿಯಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ವರದಿ ಪ್ರಕಟಿಸಿದೆ. ಈ ಸಂಖ್ಯೆಯು ಭಾರತ ಸರ್ಕಾರದ ಅಂಕಿಅಂಶಕ್ಕಿಂತ ಹತ್ತು ಪಟ್ಟು ಹೆಚ್ಚಾಗಿದೆ.

ವರದಿಯ ಪ್ರಕಾರ, 2020ರ ಜನವರಿಯಿಂದ ಡಿಸೆಂಬರ್ 2021 ತನಕ ಭಾರತದಲ್ಲಿ ಕೊರೊನಾದಿಂದ ಸುಮಾರು 47,40,894 ಮಂದಿ ಮೃತಪಟ್ಟಿದ್ದಾರೆ. ಈ ಸಂಖ್ಯೆಯು ಭಾರತ ಸರ್ಕಾರದ ಅಂಕಿಅಂಶಕ್ಕೆ (2021ರ ಅಂತ್ಯದ ವೇಳೆಗೆ 4,81,000. 2022ರ ಮೇ ಅಂತ್ಯದ ವೇಳೆಗೆ ಮೃತಪಟ್ಟವರ ಸಂಖ್ಯೆ 5,23,000) ತದ್ವಿರುದ್ಧವಾಗಿದ್ದು, 10 ಪಟ್ಟು ಅಧಿಕವಾಗಿದೆ. ವರದಿಯಂತೆ ಭಾರತವು ಜಗತ್ತಿನ ಒಟ್ಟು ಮರಣ ಸಂಖ್ಯೆಯಲ್ಲಿ ಮೂರನೆಯ ಒಂದರಷ್ಟು ಸಾವು ನೋವುಗಳನ್ನು ಎದುರಿಸಿದೆ. 

ವಿಶ್ವದಾದ್ಯಂತ 2021ರ ಅಂತ್ಯದ ವೇಳೆಗೆ ಕೋವಿಡ್‌ ಮತ್ತು ಸಂಬಂಧಿತ ಕಾಯಿಲೆಗಳಿಂದ ಅಂದಾಜು 14.9 ದಶಲಕ್ಷ (1.49 ಕೋಟಿ)ಗಿಂತ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿ ಹೇಳಿದೆ.

ಆದರೆ, ಎಲ್ಲ ರಾಷ್ಟ್ರಗಳ ಅಂಕಿಅಂಶಗಳ ಪ್ರಕಾರ, 60 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದ್ದು, ‘ಡಬ್ಲ್ಯೂ ಎಚ್‌ಒ’ದ ವರದಿಯು ಅಧಿಕೃತ ಘೋಷಣೆಯ ಮರಣ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚಾಗಿದೆ. 

ಇದನ್ನು ಓದಿದ್ದಿರಾ?: ಬುಡಕಟ್ಟು ಸಮುದಾಯದ ಇಬ್ಬರ ದೊಂಬಿಹತ್ಯೆ; ಕೇಸರಿ ಪಡೆ ಮೇಲೆ ದೂರು ದಾಖಲು

ಕೋವಿಡ್‌ ಸಾವುಗಳಿಗೆ ಸಂಬಂಧಿಸಿದ 'ಡಬ್ಲ್ಯೂ ಎಚ್‌ಒ'ದ ವರದಿಯನ್ನು ಭಾರತ ಸರ್ಕಾರ ನಿರಾಕರಿಸಿದೆ. “ಸಾವಿನ ಪ್ರಮಾಣವನ್ನು ಅಂದಾಜಿಸಲು ಡಬ್ಲ್ಯೂ ಎಚ್‌ಒ ಅನುಸರಿಸಿರುವ ಮಾದರಿ ಹಾಗೂ ಮಾಹಿತಿ ಸಂಗ್ರಹವು ಪ್ರಶ್ನಾರ್ಹವಾಗಿದೆ” ಎಂದು ಸರ್ಕಾರ ಹೇಳಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app