ಭಾರತ ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಲಿದೆ ಎಂದ ವಿಶ್ವಸಂಸ್ಥೆ ವರದಿ

  • 2023ರ ಜನಸಂಖ್ಯೆ ಸ್ಫೋಟದ ಬಗ್ಗೆ 10 ಸಂಶೋಧನೆಗಳು
  • 2022ರಲ್ಲಿ ಭಾರತದ 141.2 ಕೋಟಿಗೆ ಏರಲಿರುವ ಜನಸಂಖ್ಯೆ

ಭಾರತವು ಜನಸಂಖ್ಯೆಯಲ್ಲಿ ಮುಂದಿನ ವರ್ಷ ಚೀನಾವನ್ನು ಮೀರಿಸಲಿದೆ ಎಂದು ವಿಶ್ವ ಜನಸಂಖ್ಯಾ ದಿನದ ಸಂದರ್ಭದಲ್ಲಿ ವಿಶ್ವಸಂಸ್ಥೆ ವರದಿ ಮಾಡಿದೆ.

ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ವಿಭಾಗದ 2022ರ ಜನಸಂಖ್ಯಾ ವಿಭಾಗದ ಪ್ರಕಾರ, ಜಾಗತಿಕವಾಗಿ ನವೆಂಬರ್ ತಿಂಗಳಿನಲ್ಲಿ ಎಂಟು ಶತಕೋಟಿ ದಾಟಲಿದೆ ಎಂದು ನಿರೀಕ್ಷಿಸಿದೆ. ಜೊತೆಗೆ 2030ರಲ್ಲಿ ಸುಮಾರು 8.5 ಕೋಟಿ ಮತ್ತು 2050ರಷ್ಟರಲ್ಲಿ 9.7 ಶತಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ.

ವಿಶ್ವಸಂಸ್ಥೆಯ ವರದಿ ಪ್ರಕಾರ, 2022ರಲ್ಲಿ ಭಾರತದ ಜನಸಂಖ್ಯೆಯು 141.2 ಕೋಟಿಯಿದೆ ಮತ್ತು ಚೀನಾದ 142.6 ಕೋಟಿಯಿದೆ.

ಜಾಗತಿಕ ಜನಸಂಖ್ಯೆಯು ಎರಡನೇ ವಿಶ್ವ ಯುದ್ಧದ ನಂತರ ಜನಸಂಖ್ಯೆ ಬೆಳೆಯುತ್ತಿದ್ದು, 2080ರ ದಶಕದಲ್ಲಿ ಸುಮಾರು 1004 ಕೋಟಿಗೆ ಏರಿಕೆಯಾಗಲಿದೆ. ಜೊತೆಗೆ 2100ರಷ್ಟರಲ್ಲಿ ಅದೇ ಮಟ್ಟದಲ್ಲಿ ಉಳಿಯುತ್ತದೆ ಎಂದು ಅಂದಾಜಿಸಲಾಗಿದೆ.

“ಈ ವರ್ಷದ ವಿಶ್ವ ಜನಸಂಖ್ಯಾ ದಿನ (ಜುಲೈ 11) ಒಂದು ಮೈಲಿಗಲ್ಲು. ನಾವು ಎಂಟು ಶತಕೋಟಿ ಜನಸಂಖ್ಯೆಯನ್ನು ನಿರೀಕ್ಷಿಸಿದ್ದೇವೆ. ನಮ್ಮ ದೇಶದ ವೈವಿಧ್ಯತೆ, ಆರೋಗ್ಯದಲ್ಲಿನ ಪ್ರಗತಿ ವಿಸ್ತೃತಗೊಳಿಸಲು, ತಾಯಿಯ ಮತ್ತು ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡುವ ಸಂದರ್ಭ ಬಂದಿದೆ” ಎಂದು ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ.

"ಇದು ನಮ್ಮ  ಭೂಗ್ರಹವನ್ನು ಕಾಳಜಿ ವಹಿಸುವ ಜವಾಬ್ದಾರಿಯನ್ನು ಹಂಚಿಕೆ ಮಾಡುವುದನ್ನು ನೆನಪಿಸುತ್ತದೆ. ಒಬ್ಬರಿಗೊಬ್ಬರು ನಮ್ಮ ಬದ್ಧತೆಗಳನ್ನು ಎಲ್ಲಿ ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ಪ್ರತಿಬಿಂಬಿಸುವ ಕ್ಷಣವಾಗಿದೆ" ಎಂದು ಅವರು ಹೇಳಿದ್ದಾರೆ.

ವರದಿಯ ಕೆಲವು ಪ್ರಮುಖ ಸಂಶೋಧನೆಗಳ ಪ್ರಕಾರ 2023ರ ವೇಳೆಗೆ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದುವ ದೇಶವಾಗಿ ಹೊರಹೊಮ್ಮಲಿದೆ ಎಂದು ವರದಿ ಹೇಳಿದೆ.

ಇದನ್ನು ಓದಿದ್ದೀರಾ? ಭತ್ತ: ದಶಕದಲ್ಲೇ ಅತೀ ಕಡಿಮೆ ಬಿತ್ತನೆ. ದೇಶವನ್ನು ಕಾಡಲಿದೆ ಆಹಾರ ಭದ್ರತೆಯ ಆತಂಕ

2050ರಲ್ಲಿ ಜಾಗತಿಕವಾಗಿ ಜನಸಂಖ್ಯೆಯು ಹೆಚ್ಚಾಗಲಿದ್ದು, ಭಾರತ ಸೇರಿದಂತೆ ಎಂಟು ದೇಶಗಳಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಈಜಿಪ್ಟ್, ಇಥಿಯೋಪಿಯಾ, ನೈಜೀರಿಯಾ, ಪಾಕಿಸ್ತಾನ, ಫಿಲಿಪ್ಪೀನ್ಸ್ ಮತ್ತು ತಾಂಜಾನಿಯಾ ಕೇಂದ್ರೀಕೃತವಾಗಲಿದೆ.

ಆಸ್ಟ್ರೇಲಿಯ, ನ್ಯೂಜಿಲೆಂಡ್, ಉತ್ತರ ಆಫ್ರಿಕ, ಪಶ್ಚಿಮ ಏಷ್ಯಾ ಹಾಗೂ ಓಷಿಯಾನಿಯಾದ ಜನಸಂಖ್ಯೆಯು ಶತಮಾನದ ಅಂತ್ಯದ ವೇಳೆಗೆ ನಿಧಾನವಾಗಿ ಧನಾತ್ಮಕ ಬೆಳವಣಿಗೆಯಾಗಬಹುದು ಎಂಬ ನಿರೀಕ್ಷೆಯಿದೆ.

ಪೂರ್ವ ಮತ್ತು ಆಗ್ನೇಯ ಏಷ್ಯಾ, ಮಧ್ಯ ಮತ್ತು ದಕ್ಷಿಣ ಏಷ್ಯಾ, ಲ್ಯಾಟಿನ್ ಅಮೇರಿಕ ಮತ್ತು ಕೆರಿಬಿಯನ್, ಯುರೋಪ್ ಹಾಗೂ ಉತ್ತರ ಅಮೇರಿಕದಲ್ಲಿ ಜನ ಸಂಖ್ಯೆ ಹೆಚ್ಚಾಗಲಿದ್ದು, 2100ರಲ್ಲಿ ಅವನತಿಗೆ ಸಾಕ್ಷಿಯಾಗಲಿದೆ.

2010- 2021ರಿಂದ ವಲಸಿಗರ ನಿವ್ವಳ ಹೊರಹರಿವು ದಶಲಕ್ಷ ಮೀರಿರುವ ಹತ್ತು ದೇಶಗಳಲ್ಲಿ ಭಾರತವೂ ಒಂದಾಗಿದೆ. ಈ ಹಲವು ದೇಶಗಳಲ್ಲಿ, ಹೊರಹರಿವಿಗೆ ಕಾರ್ಮಿಕ ಚಳವಳಿಗಳು ಕಾರಣವಾಗಿತ್ತು. ವಲಸಿಗರ ಅತಿ ಹೆಚ್ಚು ನಿವ್ವಳ ಹೊರಹರಿವು ಪಾಕಿಸ್ತಾನದಿಂದ ವರದಿಯಾಗಿದೆ (-16.5 ಮಿಲಿಯನ್).

ಸಿರಿಯಾ, ವೆನೆಜುವೆಲಾ ಹಾಗೂ ಮ್ಯಾನ್ಮಾರ್‌ನಂತಹ ದೇಶಗಳು ಅಭದ್ರತೆ ಮತ್ತು ಸಂಘರ್ಷದ ಕಾರಣದಿಂದ ವಲಸಿಗರು ಬೇರೆ ದೇಶಗಳಿಗೆ ವಲಸೆ ಹೋಗಿದ್ದಾರೆ ಎಂದು ವರದಿ ಹೇಳಿದೆ.

ಕೋವಿಡ್ ಪ್ರಭಾವದಿಂದಾಗಿ 2019ರಲ್ಲಿ ಇದ್ದ ಜಾಗತಿಕ ಜೀವಿತಾವಧಿ 72.8 ವರ್ಷದಿಂದ, 2021ರಲ್ಲಿ 71.0 ವರ್ಷಗಳಿಗೆ ಇಳಿದಿದೆ. 

ಕಡಿಮೆ ಅಭಿವೃದ್ಧಿ ಹೊಂದಿದ 46 ದೇಶಗಳು ಜನಸಂಖ್ಯೆಯ ದೃಷ್ಟಿಯಿಂದ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶಗಳಾಗಿವೆ. ಜೊತೆಗೆ 2022 ಮತ್ತು 2050ರ ನಡುವೆ ಜನಸಂಖ್ಯೆಯಲ್ಲಿ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app