ಮಕ್ಕಳ ಇನ್‌ಸ್ಟಾಗ್ರಾಂ ಬಳಕೆಯ ಬಗ್ಗೆ ಪೋಷಕರ ಕಣ್ಗಾವಲು ವೈಶಿಷ್ಟ್ಯ ಪರಿಚಯಿಸಿದ ಮೆಟಾ

  • ಮಕ್ಕಳ ಸಾಮಾಜಿಕ ಜಾಲತಾಣದ ಬಗ್ಗೆ ʻಪೋಷಕರ ಕಣ್ಗಾವಲುʼ
  • ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದ ಇನ್‌ಸ್ಟಾಗ್ರಾಂ

ಮಕ್ಕಳಿಂದಿಡಿದು ಇಳಿವಯಸ್ಸಿನವರೆಗೂ ಎಲ್ಲ ವಯೋಮಾನದವರು ಇಷ್ಟಪಡುವ ಸಾಮಾಜಿಕ ಜಾಲತಾಣಗಳಲ್ಲಿ ಇನ್‌ಸ್ಟಾಗ್ರಾಂ ಪ್ರಮುಖವಾದುದು. ಫೋಟೋ, ರೀಲ್ಸ್‌, ಸ್ಟೋರಿ ಹೀಗೆ ನಾನಾ ವೈಶಿಷ್ಟ್ಯಗಳನ್ನು ಈ ವೇದಿಕೆಯಲ್ಲಿ ಹಂಚಿಕೊಳ್ಳಬಹುದು. ಅದಲ್ಲದೇ ಹಾಡು, ಡ್ಯಾನ್ಸ್‌, ಅನಿಮೇಶನ್‌ ಸೇರಿದಂತೆ ವಿಶ್ವದ ನಾನಾ ಬಗೆಯ ಜನರು ಹಂಚಿಕೊಳ್ಳುವ ರೀಲ್ಸ್‌ಗಳು ಮನರಂಜನೆಯ ತಾಣ.

ಈ ಜನಪ್ರಿಯ ಜಾಲತಾಣಗಳನ್ನು ಬಳಸುವ ಮಕ್ಕಳು, ಹದಿಹರೆಯದವರಿಗೆ ಸಂಬಂಧಿಸಿ ಪೋಷಕರು ಮೇಲ್ವಿಚಾರಣೆ ನಡೆಸುವ ಹೊಸ ವೈಶಿಷ್ಟ್ಯವನ್ನು ಇನ್‌ಸ್ಟಾಗ್ರಾಂ ಭಾರತದಲ್ಲಿ ಜಾರಿಗೆ ತಂದಿದೆ. ಈ ಹೊಸ ವೈಶಿಷ್ಟ್ಯವನ್ನು ಭಾರತದಲ್ಲಿಯೂ ಪರಿಚಯಿಸುವುದಾಗಿ ಮೆಟಾ ಒಡೆತನದ ಇನ್‌ಸ್ಟಾಗ್ರಾಂ 2022ರ ಮಾರ್ಚ್‌ನಲ್ಲಿಯೇ ಘೋಷಿಸಿತ್ತು.

Eedina App

ಮೆಟಾ ಹೊರತಂದಿರುವ ʻಪೋಷಕರ ಮೇಲ್ವಿಚಾರಣೆ ಸಾಧನ ಮತ್ತು ಕುಟುಂಬ ಕೇಂದ್ರʼದ ಮೂಲಕ ಮಕ್ಕಳು ಇನ್‌ಸ್ಟಾಗ್ರಾಂನಲ್ಲಿ ಎಷ್ಟು ಸಮಯ ಕಳೆಯುತ್ತಿದ್ದಾರೆ, ಯಾವ ಬಗೆಯ ವಿಷಯಗಳನ್ನು ನೋಡುತ್ತಿದ್ದಾರೆ ಎಂಬುದನ್ನು ಪೋಷಕರು ಪರಿಶೀಲಿಸಬಹುದಾಗಿದೆ. ಹಾಗೆಯೇ ಇನ್‌ಸ್ಟಾಗ್ರಾಂ ಬಳಕೆಗೆ ಮಕ್ಕಳಿಗೆ ಸಮಯದ ಮಿತಿ ವಿಧಿಸಲು ಅವಕಾಶ ಮಾಡಿಕೊಡುತ್ತದೆ.

ಈ ಸುದ್ದಿ ಓದಿದ್ದೀರಾ?: ಶಾಸಕ ಅಮಾನತುಲ್ಲಾ ಖಾನ್‌ ಆಪ್ತ ಸಹಾಯಕನ ಬಂಧನ:‌ ಕೇಂದ್ರದ ವಿರುದ್ಧ ಕಿಡಿಕಾರಿದ ಕೇಜ್ರಿವಾಲ್

AV Eye Hospital ad

ಸಾಮಾಜಿಕ ಮಾಧ್ಯಮವನ್ನು ಸಕ್ರಿಯವಾಗಿ ಬಳಸುವ ಮಕ್ಕಳನ್ನು ಅನಗತ್ಯ ಚಟುವಟಿಕೆಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಮೆಟಾ ಈ ಹೊಸ ಆಯ್ಕೆಯನ್ನು ಪರಿಚಯಿಸಿದೆ. ಈ ಹೊಸ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ತಜ್ಞರು, ಪೋಷಕರು ಹಾಗೂ ಹದಿಹರೆಯದವರೊಂದಿಗೆ ಮೆಟಾ ನಿಕಟವಾಗಿ ಕೆಲಸ ಮಾಡಿದೆ ಎಂದು ಅಮೆರಿಕನ್‌ ಕಂಪನಿ ಹೇಳಿದೆ.

ಮೆಟಾ ತಂತ್ರಜ್ಞಾನ ಬಳಸಿಕೊಂಡು, ಪೋಷಕರು ತಮ್ಮ ಹದಿಹರೆಯದ ಮಕ್ಕಳ ಖಾತೆಗಳನ್ನು ಮೇಲ್ವಿಚಾರಣೆ ಮಾಡಬಹುದಾಗಿದೆ. ಈ ಹೊಸ ವೈಶಿಷ್ಟ್ಯಕ್ಕೆ ಸಂಪನ್ಮೂಲ ವ್ಯಕ್ತಿಗಳು ತಮ್ಮ ಅಭಿಪ್ರಾಯ- ತಜ್ಞರ ಮಾರ್ಗದರ್ಶನ ನೀಡಲಾಗಿದೆ. ಪೋಷಕರು ತಮ್ಮ ಮಕ್ಕಳ ಇನ್‌ಸ್ಟಾಗ್ರಾಂ ಬಳಕೆಯಲ್ಲಿ ಸಮಸ್ಯೆಗಳು ಕಂಡು ಬಂದಾಗ ಈ ಸಂಪನ್ಮೂಲದಿಂದ ಮಾಹಿತಿ ಪಡೆಯಬಹುದಾಗಿದೆ.

ಆದರೆ, ಮಕ್ಕಳ ಇಂಟರ್‌ನೆಟ್‌ ಬಳಕೆಯ ಬಗ್ಗೆ ಕಣ್ಣಿಡಲು ಪೋಷಕರಿಗೆ, ಹದಿಹರೆಯದವರು ಒಪ್ಪಿಗೆ ನೀಡಬೇಕು. ಅಂದರೆ ತಮ್ಮ ಇನ್‌ಸ್ಟಾಗ್ರಾಂ ಖಾತೆ ಬಗ್ಗೆ ತಿಳಿಯಲು ಹದಿಹರೆಯದವರು ತಮ್ಮ ಖಾತೆಯಲ್ಲಿ ಒಪ್ಪಿಗೆ ನೀಡಬೇಕು. ಈ ವೈಶಿಷ್ಟ್ಯವು ಅಮೆರಿಕದಲ್ಲಿ ಮಾತ್ರ ಲಭ್ಯವಿತ್ತು. ಈಗ ಭಾರತದಲ್ಲಿಯೂ ಪೋಷಕರು ಇದನ್ನು ಬಳಸಬಹುದಾಗಿದೆ.

ಇನ್‌ಸ್ಟಾಗ್ರಾಂನಲ್ಲಿ ಈ ಮೇಲ್ವಿಚಾರಣೆ ಐಚ್ಛಿಕವಾಗಿರುತ್ತದೆ. ಪೋಷಕರು ಮತ್ತು ಹದಿಹರೆಯದವರು ಈ ಸಾಧನವನ್ನು ಬಳಸಲು ನಿಯಮಗಳನ್ನು ಒಪ್ಪಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ ಈ ವೈಶಿಷ್ಟ್ಯ ಬಳಸದಂತೆ ನಿರ್ಬಂಧಿಸಬಹುದಾಗಿದೆ. ಹಾಗೆ ಮಾಡಿದಾಗ, ಮೇಲ್ವಿಚಾರಣೆ ನಡೆಸುತ್ತಿದ್ದವರಿಗೆ, ಆ ಬಗ್ಗೆ ನೋಟಿಫೀಕೇಶನ್‌ ಕೂಡ ಸಿಗುತ್ತದೆ.

ಈ ಮೇಲ್ವಿಚಾರಣಾ ವೈಶಿಷ್ಟ್ಯವು ಪೋಷಕರು, ಮಕ್ಕಳ ಇನ್‌ಸ್ಟಾಗ್ರಾಂ ಬಳಕೆಗೆ ಸಮಯ ಮಿತಿ ಹೇರಲು, ಜಾಲತಾಣದಲ್ಲಿ ಕಳೆದ ಸಮಯ ನೋಡಲು, ಹದಿಹರೆಯದವರು ಅನುಸರಿಸುತ್ತಿರುವ ಖಾತೆಗಳನ್ನು ಗಮನಿಸಲು ಅನುಮತಿಸುತ್ತದೆ. ಹದಿಹರೆಯದವರು ತಮ್ಮ ಪೋಷಕರು ಮೇಲ್ವಿಚಾರಣೆ ಮಾಡಲು ಸಾಧ್ಯವಾಗುವ ವಿವರಗಳನ್ನೂ ಪಡೆಯುತ್ತಾರೆ ಎಂದು ಮೆಟಾ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app