
- ಇಸ್ರೊ ಸರಣಿಯ 200ನೇ ರಾಕೆಟ್ ಯಶಸ್ವಿ ಹಾರಾಟ
- ಥುಂಬ ಈಕ್ವಟೋರಿಯಲ್ ರಾಕೆಟ್ ಕೇಂದ್ರದಿಂದ ಉಡಾವಣೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ಬಹು ಸಾಮರ್ಥ್ಯದ ಆರ್ಎಚ್200 ರಾಕೆಟ್ ಅನ್ನು ತಿರುವನಂತಪುರದ ಉಡ್ಡಯನ ಕೇಂದ್ರದಿಂದ ಬುಧವಾರ (ನ.23) ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ಇದು ಈ ಸರಣಿಯಲ್ಲಿ ಸಂಸ್ಥೆಯ 200ನೇ ಉಡಾವಣೆಯಾಗಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದೆ ಎಂದು ಇಸ್ರೊ ತಿಳಿಸಿದೆ.
ರಾಕೆಟ್ ಉಡ್ಡಯನಕ್ಕೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಮತ್ತು ಇತರರು ಸಾಕ್ಷಿಯಾದರು ಎಂದು ಸಂಸ್ಥೆ ಹೇಳಿದೆ.
ಆರ್ಎಚ್200 ಥುಂಬ ಈಕ್ವಟೋರಿಯಲ್ ರಾಕೆಟ್ ಉಡಾವಣಾ ಕೇಂದ್ರದಿಂದ ಉಡಾವಣೆಯಾಗಿದೆ.
“ಬಹು ಸಾಮರ್ಥ್ಯವುಳ್ಳ ರಾಕೆಟ್ಗಳನ್ನು ಹವಾಮಾನ ವಿಜ್ಞಾನ, ಖಗೋಳ ವಿಜ್ಞಾನ ಮತ್ತು ಬಾಹ್ಯಾಕಾಶ ಭೌತಶಾಸ್ತ್ರದ ಸಂಶೋಧನೆಗೆ ಸಂಬಂಧಿಸಿದ ವಿಶೇಷ ಮಾಪನ ಸಾಧನಗಳಾಗಿ ಬಳಸಲಾಗುತ್ತದೆ” ಎಂದು ಇಸ್ರೊ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಚುನಾವಣಾ ಆಯುಕ್ತರ ನೇಮಕ | ಅರುಣ್ ಗೋಯೆಲ್ ನೇಮಕಾತಿ ಕಡತ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಕೇಂದ್ರ ಸರ್ಕಾರ
ರೋಹಿಣಿ ಬಹು ಸಾಮರ್ಥ್ಯದ ರಾಕೆಟ್ (ಆರ್ಎಸ್ಆರ್) ಸರಣಿಯು ಇಸ್ರೊದ ಭಾರವಾದ ಮತ್ತು ಹೆಚ್ಚು ಸಂಕೀರ್ಣವಾದ ಉಡಾವಣಾ ವಾಹನವಾಗಿದೆ. ವಾತಾವರಣ ಮತ್ತು ಹವಾಮಾನ ಅಧ್ಯಯನಗಳಿಗೆ ಇಂದಿಗೂ ನಿರಂತರ ಬಳಕೆಗೆ ಸೂಕ್ತವಾಗಿದೆ ಎಂದು ಇಸ್ರೊ ತಿಳಿಸಿದೆ.
“ಸತತ 200ನೇ ಯಶಸ್ವಿ ಉಡಾವಣೆಯು ಭಾರತೀಯ ರಾಕೆಟ್ ವಿಜ್ಞಾನಿಗಳ ಬದ್ಧತೆಗೆ ಸಾಕ್ಷಿಯಾಗಿದೆ” ಎಂದು ಅದು ಹೇಳಿದೆ.