ಇಟಲಿ ಪ್ರಧಾನಿ ಮಾರಿಯೊ ಡ್ರಾಗಿ ರಾಜೀನಾಮೆ

Mario Draghi
  • ವಿಶ್ವಾಸಮತಯಾಚನೆಯಲ್ಲಿ ಒಕ್ಕೂಟದಿಂದ ಬೆಂಬಲ ಹಿಂಪಡೆದ ಫೈವ್‌ಸ್ಟಾರ್‌
  • ಮಾರಿಯೊ ರಾಜೀನಾಮೆ ನಿರಾಕರಿಸಿದ ಅಧ್ಯಕ್ಷ ನೆರ್ಗಿಯೊ ಮ್ಯಾಟೆರೆಲ್ಲಾ

ಇಟಲಿ ಸರ್ಕಾರದ ಒಕ್ಕೂಟದ ಪಾಲುದಾರ ಪಕ್ಷ ಫೈವ್‌ ಸ್ಟಾರ್‌ ತನ್ನ ಬೆಂಬಲವನ್ನು ಹಿಂತೆಗೆದುಕೊಂಡ ನಂತರ ಪ್ರಧಾನಿ ಮಾರಿಯೊ ಡ್ರಾಗಿ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. 

ಯುರೋಪಿಯನ್‌ ಸೆಂಟ್ರಲ್‌ ಬ್ಯಾಂಕ್‌ನ ಮಾಜಿ ಮುಖ್ಯಸ್ಥ ಮಾರಿಯೊ 2021ರ ಫೆಬ್ರವರಿಯಿಂದ ಏಕತೆ ಸರ್ಕಾರ ರಚಿಸಿದ್ದರು. ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಫೈವ್‌ ಸ್ಟಾರ್‌ ತನ್ನ ಬೆಂಬಲ ಹಿಂಪಡೆದಿದ್ದರಿಂದ ಸರ್ಕಾರ ಪತನವಾಗಿದೆ ಎಂದು ಮಾರಿಯೊ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಆದರೆ ಅಧ್ಯಕ್ಷ ಸೆರ್ಗಿಯೊ ಮ್ಯಾಟೆರೆಲ್ಲಾ ಅವರು ಮಾರಿಯೊ ರಾಜೀನಾಮೆ ಅಂಗೀಕರಿಸಲು ನಿರಾಕರಿಸಿದರು.

ಅಧ್ಯಕ್ಷ ಸೆರ್ಗಿಯೊ ಅವರು ಇಟಲಿಯ ಕೋವಿಡ್‌ ಪರಿಸ್ಥಿತಿ ನಿರ್ವಹಿಸಲು ಮಾರಿಯೊ ಅವರನ್ನು ನೇಮಿಸಿದ್ದರು. ಅಧ್ಯಕ್ಷ ಸೆರ್ಗಿಯೊ ಅವರ ಹಸ್ತಕ್ಷೇಪದ ಬಗ್ಗೆ ಸ್ಪಷ್ಟತೆಯಿಲ್ಲ. ಆದರೆ ಸಂಸತ್ತಿನಲ್ಲಿ ಕೆಲವು ಕಾರ್ಯಗಳು ಬಾಕಿ ಇರುವುದರಿಂದ ಡ್ರಾಗಿ ಅವರು ಜುಲೈ 20ರಂದು ಸಂಸತ್ತಿಗೆ ತೆರಳುವ ನಿರೀಕ್ಷೆಯಿದೆ ಎನ್ನಲಾಗಿದೆ. 

ಈ ಸುದ್ದಿ  ಓದಿದ್ದೀರಾ? ಬ್ರಿಟನ್‌ ರಾಜಕಾರಣ | ಪ್ರಧಾನಿ ಹುದ್ದೆಗೆ ನಾನು ಸಮರ್ಥ: ಬಿಬಿಸಿ ಸಂದರ್ಶನದಲ್ಲಿ ರಿಷಿ ಸುನಕ್‌ ಸಮರ್ಥನೆ

ಫೈವ್ ಸ್ಟಾರ್ ನಾಯಕ ಗೈಸೆಪ್ಪೆ ಕಾಂಟೆ ಸರ್ಕಾರದ ಕುಟುಂಬಗಳು ಮತ್ತು ವ್ಯವಹಾರಗಳಿಗೆ ಆರ್ಥಿಕ ಸಹಾಯ 19500 ಕೋಟಿ ಡಾಲರ್‌ ನೀಡಲು ನಿರಾಕರಿಸಿದಾಗ ಶೀತಲ ಸಮರ ಆರಂಭವಾಗಿತ್ತು. ಡ್ರಾಗಿ ಅವರು ಹಣಕಾಸಿನ ವೆಚ್ಚ ನಿಭಾಯಿಸಲು ಶಕ್ಯರಾಗಿಲ್ಲ ಎಂದು ವಾದಿಸುತ್ತಿದ್ದರು.   

ಇತರ ಪಕ್ಷಗಳ ಸಹಾಯದಿಂದ ಸರ್ಕಾರವು ಸಂಸತ್‌ನಲ್ಲಿ ಗುರುವಾರದ ಮತವನ್ನು ಸುಲಭವಾಗಿ ಗೆದ್ದಿತು. ಆದರೆ ಮಾರಿಯೊ ಅವರು ಫೈವ್ ಸ್ಟಾರ್‌ ಪಕ್ಷದ ಬೆಂಬಲವಿಲ್ಲದೆ ಸರ್ಕಾರವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಲಾಗಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app