ಭಾರತದ 14ನೇ ಉಪರಾಷ್ಟ್ರಪತಿಯಾಗಿ ಜಗದೀಪ್‌ ಧನಕರ್ ಪ್ರಮಾಣ

Jagadeep Dhankhar
  • ಪ್ರತಿಜ್ಞಾವಿಧಿ ಬೋಧಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
  • ಪಶ್ಚಿಮಬಂಗಾಳದ ರಾಜ್ಯಪಾಲರಾಗಿದ್ದ ಜಗದೀಪ್‌ ಧನಕರ್

ದೇಶದ 14ನೇ ಉಪರಾಷ್ಟ್ರಪತಿಯಾಗಿ ಜಗದೀಪ್‌ ಧನಕರ್(71) ಗುರುವಾರ (ಆಗಸ್ಟ್‌ 11) ಪ್ರಮಾಣ ವಚನ ಸ್ವೀಕರಿಸಿದ್ದಾರೆ. 

ಪಶ್ಚಿಮಬಂಗಾಳದ ಮಾಜಿ ರಾಜ್ಯಪಾಲರಾಗಿರುವ ಧನಕರ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಸರಳ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಿದರು. ದೇವರ ಹೆಸರಿನಲ್ಲಿ ಧನಕರ್ ಪ್ರಮಾಣ ಸ್ವೀಕರಿಸಿದರು. 

ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ನಿರ್ಗಮಿತ ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಸೇರಿ ಹಲವು ಗಣ್ಯರು ಭಾಗವಹಿಸಿದ್ದರು. 

ಈ ಸುದ್ದಿ ಓದಿದ್ದೀರಾ? ಜಮ್ಮು-ಕಾಶ್ಮೀರ | ಸೇನಾ ನೆಲೆ ಮೇಲೆ ಉಗ್ರರ ದಾಳಿ; ಮೂವರು ಯೋಧರು ಹುತಾತ್ಮ

ದೇಶದ ಎರಡನೇ ಅತ್ಯುನ್ನತ ಸ್ಥಾನವಾದ ಉಪರಾಷ್ಟ್ರಪತಿ ಹುದ್ದೆಯು ಸಾಂವಿಧಾನಿಕ ಸ್ಥಾನಮಾನ ಪಡೆದಿದೆ. ರಾಷ್ಟ್ರಪತಿ ಸ್ಥಾನ ತೆರವಾದರೆ ಹೊಸ ರಾಷ್ಟ್ರಪತಿಯ ಆಗಮನದ ವರೆಗೂ ಆ ಸ್ಥಾನವನ್ನು ತಾತ್ಕಾಲಿಕವಾಗಿ ಉಪರಾಷ್ಟ್ರಪತಿಗಳು ನಿರ್ವಹಿಸುತ್ತಾರೆ. ಅಲ್ಲದೆ ಇವರು ರಾಜ್ಯಸಭೆಯ ಸಭಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಾರೆ. 

2019ರಲ್ಲಿ ಪಶ್ಚಿಮಬಂಗಾಳದ ರಾಜ್ಯಪಾಲರಾಗಿ ಧನಕರ್ ನೇಮಕವಾಗಿದ್ದರು. ಅಧಿಕಾರ ವಹಿಸಿಕೊಂಡ ನಂತರ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗಿನ ರಾಜಕೀಯ ತಿಕ್ಕಾಟದಿಂದ ಹೆಚ್ಚು ಚರ್ಚೆಯಲ್ಲಿದ್ದರು. 

ಉಪರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಜಗದೀಪ್‌ ಧನಕರ್ ಸ್ಪರ್ಧಿಸಿದ್ದರು. ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವಾ ಅವರು ಕಣಕ್ಕಿಳಿದಿದ್ದರು. ಆಗಸ್ಟ್‌ 6ರಂದು ಚುನಾವಣೆ ನಡೆದಿತ್ತು. ಅಂದು ಸಂಜೆಯೇ ಫಲಿತಾಂಶ ಹೊರಬಿದ್ದಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್