
- ಮಹಿಳೆಯರೇಕೆ ಪಾಶ್ಚಿಮಾತ್ಯ ಬಟ್ಟೆ ಧರಿಸುತ್ತಾರೆ; ಜಯಾ ಬಚ್ಚನ್
- ಮಗಳು ಮತ್ತು ಮೊಮ್ಮಗಳನ್ನು ಪ್ರಶ್ನಿಸಿದ ನಟಿ
ಭಾರತೀಯ ಮಹಿಳೆಯರು ಪಾಶ್ಚಾತ್ಯ ಉಡುಪುಗಳನ್ನೇ ಹೆಚ್ಚಾಗಿ ಧರಿಸುತ್ತಿರುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ ಹಿರಿಯ ನಟಿ, ಮಾಜಿ ಸಂಸದೆ ಜಯಾ ಬಚ್ಚನ್. ಇತ್ತೀಚೆಗೆ ಪಾಡ್ಕಾಸ್ಟ್ ಒಂದರಲ್ಲಿ ಮಾತನಾಡುತ್ತಾ, ಜಯಾ ಅವರು ತಮ್ಮ ಮಗಳು ಶ್ವೇತಾ ಬಚ್ಚನ್ ಮತ್ತು ಮೊಮ್ಮಗಳು ನವ್ಯಾ ನವೇಲಿ ನಂದಾ ಅವರನ್ನು ಈ ಕುರಿತು ಪ್ರಶ್ನಿಸಿದ್ದಾರೆ.
ಪಾಡ್ಕಾಸ್ಟ್ ಸಂಭಾಷಣೆಯ ಸಮಯದಲ್ಲಿ ಜಯಾ ಅವರು, “ಭಾರತೀಯ ಮಹಿಳೆಯರು ಪಾಶ್ಚಾತ್ಯ ಬಟ್ಟೆಗಳನ್ನೇ ಹೆಚ್ಚಾಗಿ ಧರಿಸುವುದೇಕೆ ಎಂದು ಶ್ವೇತಾ ಮತ್ತು ನವ್ಯಾ ಇಬ್ಬರನ್ನೂ ಕೇಳಿದರು. ಅದಕ್ಕೆ ನವ್ಯಾ ‘ಗೊತ್ತಿಲ್ಲ’ ಎಂದು ಪ್ರತಿಕ್ರಿಯಿಸಿದರೆ, ಜಯಾ ಅವರು ಸುಮ್ಮನೆ ಕೇಳಿದೆ ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಎಚ್ಡಿಕೆ ಜತೆ ಸಂಪರ್ಕದಲ್ಲಿರುವುದು ನಿಜ; ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ: ರಮೇಶ್ ಜಾರಕಿಹೊಳಿ ಸ್ಪಷ್ಟನೆ
ಜಯಾ ಅವರ ಪ್ರಶ್ನೆಗೆ ಉತ್ತರಿಸಿದ ಶ್ವೇತಾ, “ಈ ಬಟ್ಟೆಗಳನ್ನು ಧರಿಸುವುದರಿಂದ ಓಡಾಡುವುದು ಸುಲಭ ಎನ್ನಿಸುತ್ತಿದೆ. ಅಷ್ಟೇ ಅಲ್ಲದೇ ಮಹಿಳೆಯರು ಕೆಲಸದ ಮೇಲೆ ಮನೆಯಿಂದ ಹೊರಗೆ ಓಡಾಡುವ ಪ್ರವೃತ್ತಿ ಹೆಚ್ಚಾಗಿದೆ. ಅಂತಹ ಸಂದರ್ಭಗಳಲ್ಲಿ ಸೀರೆ ಉಡುವುದಕ್ಕಿಂತ ಒಂದು ಜೊತೆ ಪ್ಯಾಂಟ್, ಟೀ-ಶರ್ಟ್ ಧರಿಸುವುದು ಹೆಚ್ಚು ಸರಳ” ಎಂದಿದ್ದಾರೆ.
ಪಾಶ್ಚಿಮಾತ್ಯ ಉಡುಪುಗಳನ್ನು ನಾವು ಹೆಚ್ಚು ಒಪ್ಪಿಕೊಂಡು, ಬಳಸುತ್ತಿದ್ದೇವೆ. ಈ ಬಟ್ಟೆಗಳನ್ನು ಧರಿಸುವುದರಿಂದ ‘ಪೌರುಷ’ ಹೆಚ್ಚಾಗುತ್ತದೆ. ಆದರೆ, ನಾನು ಸ್ತ್ರೀ ಶಕ್ತಿಯಲ್ಲಿ ಮಹಿಳೆಯನ್ನು ನೋಡಲು ಇಷ್ಟಪಡುತ್ತೇನೆ. ಅದರರ್ಥ ಸೀರೆ ಧರಿಸಬೇಕು ಎಂದು ಹೇಳುತ್ತಿಲ್ಲ” ಎಂದು ಜಯಾ ಬಚ್ಚನ್ ಪ್ರತಿಕ್ರಿಯಿಸಿದ್ದಾರೆ.
“ಕೈಗಾರಿಕಾ ಕ್ರಾಂತಿಯ ನಂತರ ಮಹಿಳೆಯರು ಹೆಚ್ಚಾಗಿ ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಆರಂಭಿಸಿದರು. ಭಾರೀ ಯಂತ್ರಗಳನ್ನು ಬಳಸಿ ಕೆಲಸ ಮಾಡುವುದರಿಂದ, ಅವರು ಪ್ಯಾಂಟ್ ಧರಿಸುವುದು ಹೆಚ್ಚು ಸರಳ ಮತ್ತು ಸುಲಭವಾಯಿತು” ಎಂದು ಜಯಾ ಅವರಿಗೆ ವಿವರಿಸಿದ್ದಾರೆ ಶ್ವೇತಾ.