ಉದ್ಯಮಿಗೆ ಹಣಕ್ಕಾಗಿ ಬೆದರಿಕೆ ಒಡ್ಡಿದ ಆರೋಪ: ಸ್ಯಾಂಡಲ್‌ವುಡ್ ಯುವ ನಟ ಸಹಿತ ನಾಲ್ವರ ಬಂಧನ

  • ಕನ್ನಡದ ಯುವ ನಟ ಯುವರಾಜ್ ಮತ್ತು ಆತನ ಸ್ನೇಹಿತರ ಬಂಧನ
  • ಬಿಡುಗಡೆಯಾಗದ ಕನ್ನಡದ ಸಿನಿಮಾದಲ್ಲಿ ನಟಿಸಿರುವ ನಟ

ಹನಿಟ್ರ್ಯಾಪ್ ಮೂಲಕ ಹಣಕ್ಕಾಗಿ 73 ವರ್ಷದ ಕೈಗಾರಿಕೋದ್ಯಮಿಗೆ ಬೆದರಿಕೆ ಹಾಕಿರುವ ಆರೋಪದ ಮೇಲೆ ಬೆಂಗಳೂರಿನ ಹಲಸೂರು ಪೊಲೀಸರು ಕನ್ನಡದ ಯುವ ನಟ ಮತ್ತು ಆತನ ನಾಲ್ವರು ಸ್ನೇಹಿತರನ್ನು ಬಂಧಿಸಿದ್ದಾರೆ. ಬಿಡುಗಡೆಯಾಗದ ಕನ್ನಡ ಸಿನಿಮಾವೊಂದರಲ್ಲಿ ನಟ ಯುವರಾಜ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ನಟನ ಸ್ನೇಹಿತರು ಎಂದು ಹೇಳಿರುವ ಆತನ ಇಬ್ಬರು ಮಹಿಳೆಯರು ಸೇರಿದಂತೆ ಇತರ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಟ ಜೆ ಪಿ ನಗರದ ನಿವಾಸಿ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ನಿಧಿ ಮತ್ತು ಕವನಾ ಎಂಬ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ. ಉದ್ಯಮಿಗೆ ಕೆಲ ದಿನಗಳ ಹಿಂದೆ ಕವನ ಪರಿಚಯವಾಗಿದ್ದು, ಬಳಿಕ ಆಕೆ ತನ್ನ ಸ್ನೇಹಿತೆ ನಿಧಿಯನ್ನು ಕೂಡ ಆತನಿಗೆ ಪರಿಚಯಿಸಿದ್ದಳು.

ಉದ್ಯಮಿ, ಕವನ ಹಾಗೂ ನಿಧಿ ವಾಟ್ಸಾಪ್‌ನಲ್ಲಿ ಕಳಿಸುತ್ತಿದ್ದ ಸಂದೇಶಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಿದ್ದರು ಎಂದು ಪೊಲೀಸರಿಂದ ತಿಳಿದು ಬಂದಿದೆ.

ಈ ಸುದ್ದಿ ಓದಿದ್ದೀರಾ? ವೀಕೆಂಡ್ ಟೆಂಟ್ | ಈ ವಾರ ನೋಡಬಹುದಾದ ಸಿನಿಮಾ ಮತ್ತು ವೆಬ್ ಸರಣಿಗಳು

ಬಂಧಿತ ಮಹಿಳೆಯರಿಬ್ಬರು ಉದ್ಯಮಿಗೆ ತಮ್ಮ ಅಶ್ಲೀಲ ಚಿತ್ರಗಳನ್ನು ಕಳುಹಿಸುವ ಮೂಲಕ ಆಮಿಷ ಒಡ್ಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಆಗಸ್ಟ್ ಮೂರರಂದು ಭೇಟಿಯಾಗುವಂತೆ ನಿಧಿ ಎಂಬುವವರು ಉದ್ಯಮಿಯನ್ನು ಕೇಳಿದ್ದಾರೆ. ಉದ್ಯಮಿ ಆಕೆಯನ್ನು ಭೇಟಿಯಾಗಲು ಹೋದಾಗ, ಪೊಲೀಸರು ಎಂದು ಹೇಳಿಕೊಂಡು ಬಂದ ಇಬ್ಬರು ಯುವಕರು, ಕವನಾ ಮತ್ತು ನಿಧಿಗೆ ಕಳಿಸುತ್ತಿದ್ದ ಸಂದೇಶದ ಮೇಲೆ ನಿಮ್ಮ ಮೇಲೆ ದೂರು ನೀಡಿದ್ದಾರೆ ಎಂದು ಹೆದರಿಸಿದ್ದಾರೆ. ಹಣ ನೀಡಿದರೆ ನಿಮ್ಮ ಮೇಲಿನ ಪ್ರಕರಣವನ್ನು ಮುಚ್ಚಿ ಹಾಕುವುದಾಗಿ ಆಮಿಷ ಒಡ್ಡಿದ್ದಾರೆ ಎಂದು ತಿಳಿದುಬಂದಿದೆ.

“ವಾಟ್ಸಾಪ್ ಸಂದೇಶಗಳನ್ನು ತನ್ನ ಮನೆಯವರಿಗೆ ತೋರಿಸಬಾರದು ಎಂದು ಆರೋಪಿಗಳಿಗೆ ಮೊದಲ ಬಾರಿ ₹3.4 ಲಕ್ಷ  ಸಾರಿ, ಮಗದೊಮ್ಮೆ ₹6 ಲಕ್ಷ ನೀಡಿದ್ದಾರೆ. ಆದರೂ, ಉದ್ಯಮಿಯನ್ನು ಬಿಡದ ಆರೋಪಿಗಳು ಮತ್ತೆ ಹಣ ಕೊಡಬೇಕು ಎಂದು ಕೇಳಿದಾಗ ದೂರು ನೀಡಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ. 

ಪೊಲೀಸರ ವಿಚಾರಣೆ ವೇಳೆ ಈ ಇಬ್ಬರು ಮಹಿಳೆಯರು ತಾವು ನಟ ಯುವರಾಜ್‌ನ ಸ್ನೇಹಿತೆಯರು ಎಂದು ಹೇಳಿದ್ದಾರೆ. ಜೊತೆಗೆ ಯುವರಾಜ್ ಸಹ ಬೇರೆ ಮೊಬೈಲ್ ಸಂಖ್ಯೆಯಿಂದ ನಿಧಿ ಹೆಸರಲ್ಲಿ ಆಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್