ಗದಗ | ಕನ್ನಡ ಕೇವಲ ಪದವಲ್ಲ, ಜನರ ನಾಡಿಮಿಡಿತ

  • ‘ಕನ್ನಡವೆಂದರೆ ಬರಿ ನುಡಿಯಲ್ಲ’ ಉಪನ್ಯಾಸ ಕಾರ್ಯಕ್ರಮ
  • ಕಸಾಪ ಕಾರ್ಯಕ್ರಮಗಳಲ್ಲಿ ಭಾಗವಿಸಲು ಯುವಕರಿಗೆ ಕರೆ

ಕನ್ನಡವೆಂಬುದು ಕೇವಲ ಪದವಲ್ಲ, ನಮ್ಮ ಜನರ ಬದುಕಿನ ರೀತಿ, ನಾಡಿಮಿಡಿತ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಬಸವರಾಜ ಕೋಡಗುಂಟಿ ಅಭಿಪ್ರಾಯಿಸಿದ್ದಾರೆ.

ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕೆಎಲ್‌ಇ ಸಂಸ್ಥೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಜಂಟಿಯಾಗಿ ಆಯೋಜಿಸಿದ್ದ ‘ಕನ್ನಡವೆಂದರೆ ಬರಿ ನುಡಿಯಲ್ಲ’ ಉಪನ್ಯಾಸ ಕಾರ್ಯಕ್ರಮ ಅವರು ಮಾತನಾಡಿದರು. "ಕವಿರಾಜಮಾರ್ಗದಲ್ಲಿ ಹೇಳುವಂತೆ ‘ಕಾವೇರಿಯಿಂದ ಗೋದಾವರಿಯವರೆಗೂ’ ಇದ್ದ ಕನ್ನಡ ಸೀಮೆಯು ಇವತ್ತಿನ ಮಹಾರಾಷ್ಟ್ರದ ಬಹುಭಾಗ ಕನ್ನಡ ಪ್ರದೇಶವನ್ನೂ ಒಳಗೊಂಡಿತ್ತು" ಎಂದು ವಿವರಿಸಿದರು.

ಕನ್ನಡದ ಬಗೆಗಿನ ಕುವೆಂಪು, ದ.ರಾ. ಬೇಂದ್ರೆ, ಆನಂದಕಂದರ ಕಾವ್ಯದ ಸಾಲುಗಳನ್ನು ಉದಾಹರಣೆ ಸಹಿತ ವಿವರಿಸಿದ ಅವರು, ಲಿಖಿತ ಪರಂಪರೆಗೆ ಪರ್ಯಾಯವಾಗಿ ಜನಪದರು ಕಟ್ಟಿಕೊಂಡ ಕನ್ನಡದ ಸ್ವರೂಪವನ್ನೂ ಪ್ರಸ್ತಾಪಿಸಿದರು. 

ಕಾರ್ಯಕ್ರಮದಲ್ಲಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ್‌, "ಯುವಕರು ಕನ್ನಡದ ಕಟ್ಟಾಳುಗಳಾಗಬೇಕು. ‌ಅಲ್ಲದೆ, ಸಾಹಿತ್ಯ ಪರಿಷತ್ ಹಮ್ಮಿಕೊಳ್ಳುವ ಎಲ್ಲ ಕಾರ್ಯಕ್ರಮಗಳಲ್ಲಿ ಯುವಕರು ಪಾಲ್ಗೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಸಾಹಿತ್ಯಿಕ ಆಸಕ್ತಿಯನ್ನು ಮೂಡಿಸುವ ಇಂತಹ ಕಾರ್ಯಕ್ರಮಗಳು ಉಪಯುಕ್ತವಾಗಿವೆ" ಎಂದರು. 

AV Eye Hospital ad

ಕಾರ್ಯಕ್ರಮದಲ್ಲಿ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎ.ವಿ ದೇವಾಂಗಮಠ, ಡಾ. ಏ.ಕೆ.ಮಠ, ಪ್ರೊ. ಕೆ. ಬಿ. ಜಂಬಗಿ, ಡಾ. ವೀಣಾ ಈ, ಪ್ರೊ.ವೀಣಾ ತಿರ್ಲಾಪುರ, ಪ್ರೊ. ಸುಮಾ ಅರಬೆಂಚಿ, ಪ್ರೊ. ಪವಿತ್ರಾ. ಪ್ರೊ. ಹರ್ಷ ನಿಲೋಗಲ್, ಡಾ. ಅಂದಯ್ಯ ಅರವಟಗಿಮಠ, ಪೂಜಾ ಯಲ್ಲಪ್ಪನಗೌಡರ ಮತ್ತು ಹಲವಾರು ವಿದ್ಯಾರ್ಥಿಗಳು ಭಾವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app