ಸಲಿಂಗ ಪ್ರೇಮ | ವೆಡ್ಡಿಂಗ್‌ ಫೋಟೋ ಶೂಟ್‌ನಲ್ಲಿ ಮಿಂಚಿದ ಕೇರಳದ 'ಲೆಸ್ಬಿಯನ್‌ ಜೋಡಿ’

  • ಸಲಿಂಗ ಪ್ರೇಮಿಗಳನ್ನು ಬೇರ್ಪಡಿಸಿದ್ದ ಕುಟುಂಬ
  • ನ್ಯಾಯಕ್ಕಾಗಿ ಕೋರ್ಟ್‌ ಮೆಟ್ಟಿಲೇರಿದ್ದ ಪ್ರೇಮಿಗಳು

'ಸಲಿಂಗ ವಿವಾಹ ಮಾನ್ಯತೆ'ಯ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ವಿಶೇಷ ವಿವಾಹ ಕಾಯ್ದೆಯಡಿ ತಮ್ಮ ವಿವಾಹವನ್ನು ಅಂಗೀಕರಿಸುವಂತೆ ನಿರ್ದೇಶನ ಕೋರಿ ಸಲಿಂಗ ದಂಪತಿ ಸುಪ್ರೀಂ ಕೋರ್ಟ್‌‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗೆ ಸಂಬಂಧಿಸಿ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರಿಗೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಸಲಿಂಗಪ್ರೇಮಕ್ಕೆ ಕಾನೂನುಬದ್ಧ ಹೋರಾಟ ಒಂದು ಕಡೆ ನಡೆಯುತ್ತಿದ್ದರೆ, ಸಮಾಜದಲ್ಲಿ, ಕುಟುಂಬಗಳಲ್ಲಿ ಇದರ ಬಗ್ಗೆ ಅರಿವು ಮೂಡಿಸುವುದು ಸಾಮಾಜಿಕ ಹೋರಾಟವೇ ಆಗಿದೆ. ಈ ನಿಟ್ಟಿನಲ್ಲಿ ಎಲ್‌ಜಿಬಿಟಿಕ್ಯೂಎಐ+ ಸಮುದಾಯದವರು ತಮ್ಮ ಕುಟುಂಬದೊಂದಿಗೆ ಹಲವಾರು ವರ್ಷಗಳಿಂದ ಚರ್ಚೆ, ವಾದ-ವಿವಾದಗಳನ್ನು ನಡೆಸುತ್ತಲೇ ಬಂದಿದ್ದಾರೆ.

Eedina App

ಈ ವರ್ಷದ ಆರಂಭದಲ್ಲಿ ಕೇರಳದಲ್ಲಿ ಸಲಿಂಗಪ್ರೇಮ ಪ್ರಕರಣವೊಂದು ಸುದ್ದಿಯಾಗಿತ್ತು. ಆದಿಲಾ ನಸ್ರೀನ್‌ ಮತ್ತು ಫಾತಿಮಾ ನೂರಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಅವರ ಪ್ರೀತಿಗೆ ಕುಟುಂಬಗಳು ವಿರೋಧ ವ್ಯಕ್ತಪಡಿಸಿದ್ದವು ಅಷ್ಟೇ ಅಲ್ಲದೇ, ಇಬ್ಬರನ್ನೂ ಬಲವಂತವಾಗಿ ದೂರ ಮಾಡಿದ್ದರು.

ಕುಟುಂಬದವರ ವರ್ತನೆಯಿಂದ ಬೇಸತ್ತ ಜೋಡಿಯು ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯವು ಇಬ್ಬರನ್ನು ಮತ್ತೆ ಜೊತೆಯಾಗಿ ಇರಲು ಅನುವು ಮಾಡಿಕೊಟ್ಟಿತ್ತು.

AV Eye Hospital ad

ಪ್ರಸ್ತುತ ಜೊತೆಯಾಗಿ ಬದುಕುತ್ತಿರುವ ಜೋಡಿ, ವಿವಾಹ ಪೂರ್ವ ಫೋಟೋಶೂಟ್‌ ಮಾಡಿಸಿಕೊಳ್ಳುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಇಬ್ಬರೂ ಯುವತಿಯರು ಮದುಮಕ್ಕಳಂತೆ ಮಿಂಚಿದ್ದಾರೆ. ಈ ಬಗ್ಗೆ 23 ವರ್ಷದ ನೂರಾ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮುಕ್ತವಾಗಿ ಮಾತಾಡಿದ್ದು, ’ಎಂದೆಂದಿಗೂ ಜೊತೆಯಾಗಿ’ ಶೀರ್ಷಿಕೆಯ ಜೊತೆಯಲ್ಲಿ ಸಂಗಾತಿಗಳಿಬ್ಬರ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

‘‘ನಾವಿನ್ನು ಮದುವೆಯಾಗಿಲ್ಲ. ಆದರೆ, ವಿವಾಹವಾಗಿ ದಂಪತಿಯಾಗಿ ಸಂಸಾರ ನಡೆಸುವ ಇಚ್ಛೆ ಇದೆ” ಎಂದು ನಸ್ರೀನ್‌ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಕುಟುಂಬಗಳಿಂದ ಹೊರಬಂದು ಜೊತೆಯಾಗಿ ವಾಸ ಮಾಡುತ್ತಿರುವ ನೂರಾ ಮತ್ತು ನಸ್ರೀನ್‌ ಈಗಲೂ ಕುಟುಂಬದವರಿಂದ ಬೆದರಿಕೆ ಕರೆಗಳನ್ನು ಎದುರಿಸುತ್ತಿದ್ದಾರೆ. ನೂರಾ ನಸ್ರೀನ್‌ ಒಟ್ಟಿಗೆ ಇರಲು ಕೇರಳ ಹೈಕೋರ್ಟ್‌‌ನಿಂದ ಅನುಮತಿ ಪಡೆದಿದ್ದಾರೆ. ಆದರೆ, ಸಾಮಾನ್ಯ ವಿವಾಹಿತ ದಂಪತಿಗಿರುವ ಸೌಲಭ್ಯ ಮತ್ತು ಹಕ್ಕುಗಳು ಅವರಿಗಿಲ್ಲ.

ಈ ಸುದ್ದಿ ಓದಿದ್ದೀರಾ?: ವಿದ್ಯಾರ್ಥಿಗಳಿಗೆ ಸಿಇಟಿ ಅರ್ಜಿ ಭರ್ತಿ ಮಾಡಲು ತರಬೇತಿಗೆ ಸಹಾಯ ಕೇಂದ್ರ

“ಯಾವುದೇ ಅರ್ಜಿಯನ್ನು ಭರ್ತಿ ಮಾಡುವಾಗ ಪತ್ನಿ, ಪತಿ ಅಥವಾ ತಂದೆಯ ಹೆಸರನ್ನು ಬರೆಯಬೇಕಿರುತ್ತದೆ. ಕೆಲಸದ ಸ್ಥಳ ಸೇರಿದಂತೆ ಹಲವು ಕಡೆ ಈಗಲೂ ನಾನು ನನ್ನ ತಂದೆಯ ಹೆಸರನ್ನೇ ಬರೆಯುತ್ತಿದ್ದೇನೆ. ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದಾಗಲೂ ಇಷ್ಟವಿಲ್ಲದಿದ್ದರೂ, ತಂದೆಯ ಹೆಸರನ್ನೇ ಕೊಡಬೇಕಾಯಿತು” ಎಂದು ಬೇಸರ ವ್ಯಕ್ತಪಡಿಸುತ್ತಾರೆ ನಸ್ರೀನ್‌.

“ಐಪಿಸಿ ಸೆಕ್ಷನ್ 377ರ ಅಡಿಯಲ್ಲಿ ಅನೈಸರ್ಗಿಕ ಲೈಂಗಿಕತೆ ಅಪರಾಧ ಎಂದು ಹೇಳಿದ್ದ 158 ವರ್ಷಗಳ ಬ್ರಿಟಿಷ್ ಕಾನೂನನ್ನು 2018ರಲ್ಲಿ ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು. ಈ ಮೂಲಕ ಸಲಿಂಗಪ್ರೇಮಕ್ಕೆ ಸಮ್ಮತಿ ಸೂಚಿಸಿದ್ದ ಐತಿಹಾಸಿಕ ತೀರ್ಪು ಇದಾಗಿತ್ತು. ಈ ತೀರ್ಪಿನ ನಂತರ ಸಮುದಾಯದೊಳಗೆ ಈ ಬಗ್ಗೆ ಅರಿವು ಮೂಡಿತ್ತು. ಆದರೆ, ಸಮಾಜ ಸಮುದಾಯದವರನ್ನು ಎಲ್ಲರಂತೆ ಅವರು ಎಂದು ನೋಡುವಲ್ಲಿ ಹಿಂದಿದೆ” ಎಂದು ವಿವರಿಸುತ್ತಾರೆ ಕೇರಳದ ಈ ಜೋಡಿ. 

ನಿಮಗೆ ಏನು ಅನ್ನಿಸ್ತು?
6 ವೋಟ್
eedina app