ಒಂದು ನಿಮಿಷದ ಓದು | ಮೂರು ಕೋಟಿ ಮಹಿಳೆಯರ ಆರೋಗ್ಯ ತಪಾಸಣೆ ನಡೆಸಲು ಮುಂದಾದ ಮಹಾರಾಷ್ಟ್ರ

ಮುಂಬರುವ ನವರಾತ್ರಿ ಉತ್ಸವದಲ್ಲಿ ಮೂರು ಕೋಟಿ ಮಹಿಳೆಯರ ಆರೋಗ್ಯ ತಪಾಸಣೆ ನಡೆಸುವುದಾಗಿ ಮಹಾರಾಷ್ಟ್ರದ ಸಾರ್ವಜನಿಕ ಆರೋಗ್ಯ ಇಲಾಖೆಯು ತಿಳಿಸಿದೆ.

“ಮಹಿಳೆಯರ ಆರೋಗ್ಯದ ಸುರಕ್ಷತೆಗಾಗಿ ನಾವು ವಿಶೇಷ ಅಭಿಯಾನವನಡೆಸಲಿದ್ದೇವೆ. ಈ ಅಭಿಯಾನದಡಿಯಲ್ಲಿ ಮಹಿಳೆಯರಿಗೆ ವಿವಿಧ ಆರೋಗ್ಯ ಸಂಬಂಧಿತ ಪರೀಕ್ಷೆಗಳನ್ನು ನಡೆಸಲಾಗುವುದು. ಈ ಮೂಲಕ ಮೂರು ಕೋಟಿ ಮಹಿಳೆಯರನ್ನು ತಲುಪುವ ಗುರಿ ಹೊಂದಿದ್ದೇವೆʼʼ ಎಂದು ರಾಜ್ಯದ ಸಾರ್ವಜನಿಕ ಆರೋಗ್ಯ ಇಲಾಖೆ ಸಚಿವ ತಾನಾಜಿ ಸಾವಂತ್ ಹೇಳಿದ್ದಾರೆ.

ಈ ಅಭಿಯಾನದಲ್ಲಿ ಮುನ್ಸಿಪಾಲ್ ಕಾರ್ಪೊರೇಷನ್‌ಗಳು, ಬುಡಕಟ್ಟು ಅಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಭಾಗವಹಿಸಲಿದೆ.

ಈ ಅಭಿಯಾನವು ಪ್ರತಿದಿನ ನಡೆಯಲಿದ್ದು, ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಇರುತ್ತದೆ. ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿಶೇಷ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುವುದು. ಅಲ್ಲಿ ತೂಕ, ಎತ್ತರ, ಹಿಮೋಗ್ಲೋಬಿನ್ ಮತ್ತು ರಕ್ತದಲ್ಲಿನ ಸಕ್ಕರೆ ಸೇರಿದಂತೆ ಇತರ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಸಾವಂತ್‌ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್