ಮಹಾರಾಷ್ಟ್ರ| ಪ್ರಯಾಣಿಕ ರೈಲಿನ ಬೋಗಿ ಹಳಿ ತಪ್ಪಿ 50ಕ್ಕೂ ಹೆಚ್ಚು ಮಂದಿಗೆ ಗಾಯ

Maharashtra Train Accident
  • ಎರಡೂ ರೈಲು ಒಂದೇ ದಿಕ್ಕಿನಲ್ಲಿ ಸಂಚರಿಸುತ್ತಿದ್ದ ಕಾರಣ ದುರಂತ
  • ಬೆಳಗ್ಗೆ 4.30ಕ್ಕೆ ರೈಲು ಹಳಿ  ಮರು ಜೋಡಣೆ ಪ್ರಕ್ರಿಯೆ ಪೂರ್ಣ 

ಮಹಾರಾಷ್ಟ್ರದ ಗೊಂದಿಯಾ ನಗರದಲ್ಲಿ ಬುಧವಾರ (ಆಗಸ್ಟ್‌ 17) ನಸುಕಿನ ಜಾವ ಭಗತ್‌ ಕಿ ಕೋಥಿ ಎಂಬ ಪ್ರಯಾಣಿಕ ರೈಲಿನ ಬೋಗಿಯೊಂದು ಹಳಿತಪ್ಪಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಬುಧವಾರ ನಸುಕಿನ ಜಾವ 2.30ರ ಸುಮಾರಿಗೆ ಘಟನೆ ಸಂಭವಿಸಿದ್ದು, ಒಟ್ಟು ಮೂರು ಬೋಗಿಗಳು ಹಳಿ ತಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಈ ಸುದ್ದಿ ಓದಿದ್ದೀರಾ? ಒಂದು ನಿಮಿಷದ ಓದು| ಜಮ್ಮು; ಮನೆಯೊಂದರಲ್ಲಿ ಒಂದೇ ಕುಟುಂಬದ 6 ಮೃತ ದೇಹ ಪತ್ತೆ

ಪ್ರಯಾಣಿಕ ರೈಲು ರಾಯ್‌ಪುರದಿಂದ ನಾಗ್ಪುರಕ್ಕೆ ಸಂಚರಿಸುತ್ತಿತ್ತು. ಗಾಯಗೊಂಡ ಪ್ರಯಾಣಿಕರು ಚಿಕಿತ್ಸೆ ಪಡೆದು ಅದೇ ರೈಲಿನಲ್ಲಿ ತೆರಳಿದರು. ಎರಡೂ ರೈಲುಗಳು ಒಂದೇ ದಿಕ್ಕಿನಲ್ಲಿ ಅಂದರೆ ನಾಗ್ಪುರ ಕಡೆಗೆ ಹೋಗುತ್ತಿದ್ದ ಕಾರಣ ಈ ಘಟನೆ ಸಂಭವಿಸಿದೆ.

ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಪ್ರಯಾಣಿಕ ರೈಲಿನ ಚಾಲಕ ತುರ್ತು ಬ್ರೇಕ್ ಹಾಕಲು ಶ್ರಮಿಸಿದರೂ ಗೂಡ್ಸ್ ರೈಲಿಗೆ ಡಿಕ್ಕಿಯಾಗಿತ್ತು ಎಂದು ಮೂಲಗಳು ಹೇಳಿವೆ. 

ಬೆಳಗ್ಗೆ 4.30ಕ್ಕೆ ಮರು ಹಳಿ ಜೋಡಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ರೈಲು ಬೆಳಗ್ಗೆ 5.24ಕ್ಕೆ ಸ್ಥಳದಿಂದ ನಿರ್ಗಮಿಸಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. ಬೆಳಗ್ಗೆ 5.44ಕ್ಕೆ ಗೊಂದಿಯಾ ತಲುಪಿದೆ. ಮಾರ್ಗವನ್ನು ತೆರವುಗೊಳಿಸಲಾಗಿದೆ ಮತ್ತು 5.45 ರ ಸುಮಾರಿಗೆ ಸಂಚಾರ ಪುನರಾರಂಭಿಸಲಾಗಿದೆ ಎಂದು ಮೂಲಗಳು ಹೇಳಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್