ಕೇರಳದ ಸಿರುವಣಿ ಜಲಾಶಯ ಭರ್ತಿಗೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಒತ್ತಾಯ

STALINE
  • ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ತಮಿಳುನಾಡು ಸಿಎಂ ಸ್ಟಾಲಿನ್ ಪತ್ರ
  • ನೀರು ಸಂಗ್ರಹದಲ್ಲಿ 1.5 ಮೀ ಕಡಿಮೆ - ಬೇಸಿಗೆಯಲ್ಲಿ ಪೂರೈಕೆ ಅಭಾವದ ಆತಂಕ 

ಕೊಯಮತ್ತೂರು ಮತ್ತು ಚೆನ್ನೈ ಉಪ ನಗರಗಳಿಗೆ ನೀರು ಪೂರೈಸುವ ಕೇರಳದ ಪ್ರಮುಖ ಸಿರುವಣಿ ಅಣೆಕಟ್ಟೆಯಲ್ಲಿ ಸಂಪೂರ್ಣ ನೀರು ಸಂಗ್ರಹಿಸುವಂತೆ ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಭಾನುವಾರ ಒತ್ತಾಯಿಸಿದ್ದಾರೆ.

ಕೇರಳ ನೀರಾವರಿ ಇಲಾಖೆ ಸಿರುವಣಿ ಜಲಾಶಯದಲ್ಲಿ 878.50 ಮೀ ಪೂರ್ಣ ಭರ್ತಿ ಮಾಡುವ (ಎಫ್ಆರ್‌ಎಲ್) ಬದಲು ಗರಿಷ್ಠ ನೀರಿನ ಮಟ್ಟ 877.00 ಮೀ ಪ್ರಮಾಣವನ್ನು ನಿರ್ವಹಿಸುತ್ತಿದೆ.

ಆದರೆ ಅಂತಾರಾಜ್ಯ ಒಪ್ಪಂದದಲ್ಲಿ ಸೂಚಿಸಿದಂತೆ ಸಿರುವಣಿ ಜಲಾಶಯದಲ್ಲಿ ನೀರು ಭರ್ತಿ ಕಾಯ್ದುಕೊಳ್ಳುವಂತೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಕೇರಳದ ಮುಖ್ಯಂಮಂತ್ರಿ ವಿಜಯನ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಜಲಾಶಯದಲ್ಲಿ 1.5 ಮೀಟರ್‌ನಷ್ಟು ನೀರಿನ ಮಟ್ಟ ಕಡಿಮೆ ಇದೆ. ಇದರಿಂದ 122.05 ಮಿಲಿಯನ್ ಘನ ಅಡಿ (ಎಂಸಿಎಫ್‌ಟಿ) ನೀರಿನ ಕೊರತೆಯಾಗುತ್ತದೆ. ಅಂದರೆ ಒಟ್ಟು ಸಂಗ್ರಹಣೆಯ ಶೇ.19ರಷ್ಟು ಕೊರತೆಯಾಗಲಿದೆ. 

ಈ ಸುದ್ದಿಯನ್ನು ಓದಿದ್ದೀರಾ:? ಮುಂಗಾರು ಬಿತ್ತನೆ | ಅಮೆರಿಕದಿಂದ 47,000 ಟನ್ ಯೂರಿಯಾ ಆಮದು

ಸಿರುವಣಿ ಜಲಾಶಯದ ನೀರು ಕೊಯಮತ್ತೂರು ಸೇರಿದಂತೆ ಹಲವು ನಗರಗಳಿಗೆ ಪೂರೈಕೆಯಾಗುತ್ತದೆ. ಈ ಕಾರಣಕ್ಕೆ ಜಲಾಶಯದಲ್ಲಿ ನೀರಿನ ಕೊರತೆ ಕಂಡುಬಂದರೆ ಬೇಸಿಗೆ ಕಾಲದಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಕಳೆದ ಆರು ವರ್ಷಗಳಿಂದ ರಾಜ್ಯಕ್ಕೆ ಸಿರುವಣಿ ಜಲಾಶಯದಿಂದ 0.484 ಟಿಎಂಸಿಯಿಂದ 1.128 ಟಿಎಂಸಿ ನೀರು ಹರಿದು ಬರುತ್ತಿದೆ. ಆದರೆ ಒಪ್ಪಂದದ ಪ್ರಕಾರ 1.30 ಟಿಎಂಸಿಯಷ್ಟು ನೀರು ಹಂಚಿಕೆಗೆ ನಿಗದಿಪಡಿಸಲಾಗಿದೆ.

ಜಲಾಶಯದಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು (ಎಫ್ಆರ್‌ಎಲ್) ಸಂಗ್ರಹಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಸರ್ಕಾರ, ಕೇರಳವನ್ನು ನಿರಂತರವಾಗಿ ವಿನಂತಿಸುತ್ತಿದೆ. ಈ ಬಗ್ಗೆ ಫೆಬ್ರವರಿಯಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದರು. ಆದರೂ, ಜಲಾಶಯದಲ್ಲಿ ಎಫ್ಆರ್‌ಎಲ್‌ ಮಟ್ಟಕ್ಕೆ ನೀರು ಸಂಗ್ರಹಿಸಲು ಇದುವರೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸ್ಟಾಲಿನ್ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್