ಅತ್ಯಾಚಾರ ಪ್ರಕರಣ | ದೂರು ದಾಖಲಿಸದ ಪೊಲೀಸರು, ನ್ಯಾಯಕ್ಕಾಗಿ ಕೋರ್ಟ್‌ ಮೆಟ್ಟಿಲೇರಿದ ಸಂತ್ರಸ್ತೆ

  • ಎಂಟು ದಿನಗಳ ಕಾಲ ಬಂಧನದಲ್ಲಿರಿಸಿ ಅತ್ಯಾಚಾರ
  • ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರು, ನ್ಯಾಯಕ್ಕಾಗಿ ಕೋರ್ಟ್‌ ಮೊರೆಹೋದ ಸಂತ್ರಸ್ತೆ

ಪರಿಚಿತ ವ್ಯಕ್ತಿಯೊಬ್ಬ ತನ್ನನ್ನು ಎಂಟು ದಿನಗಳ ಕಾಲ ಬಂಧನದಲ್ಲಿಟ್ಟು, ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲು ಪ್ರಯತ್ನಿಸಿದ್ದಾರೆ. ಆದರೆ, ಪೊಲೀಸರಿಂದ ನ್ಯಾಯ ಸಿಗದ ಕಾರಣ ನೊಂದ ಮಹಿಳೆ,   ನ್ಯಾಯಾಲಯದ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್‌ 15ರಂದು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ʼಆರೋಪಿಯು ಜೂನ್‌ 15ರಂದು ತನ್ನ ಮನೆಗೆ ಬರುವಂತೆ ಆಕೆಯನ್ನು ʻಪ್ರಲೋಭನೆʼ ಮಾಡಿದ್ದಾನೆʼ ಎಂದು ಮಹಿಳೆಯು ಆರೋಪಿಸಿದ್ದಾಗಿ ಸಂಗಾರಿ ಪೊಲೀಸ್‌ ಠಾಣಾಧಿಕಾರಿ ಮದನ್‌ ಮೋಹನ್‌ ಚತುರ್ವೇದಿ ಗುರುವಾರ ತಿಳಿಸಿದರು. 

ಆರೋಪಿ ಅಜಯ್‌ಪಾಲ್ ವರ್ಮಾ, ಭೇಟಿಯಾದಾಗ ತಾನು ತರಕಾರಿ ಖರೀದಿಸಲು ಗೌಹಾನಿಯಾ ರೈಲ್ವೆ ಕ್ರಾಸಿಂಗ್‌ಗೆ ಹೋಗಿದ್ದೆ. ಕಾಟಯ್ಯ ಗ್ರಾಮದ ನಿವಾಸಿಯಾದ ವರ್ಮಾ, ತನ್ನನ್ನು ಬೈಕ್‌ನಲ್ಲಿ ಆತನ ಮನೆಗೆ ಕರೆದೊಯ್ದು ಎಂಟು ದಿನಗಳ ಕಾಲ ಸೆರೆಯಲ್ಲಿಟ್ಟು ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿರುವುದಾಗಿ ಪೊಲೀಸರು ವಿವರಿಸಿದರು.

ಈ ಸುದ್ದಿ ಓದಿದ್ದೀರಾ?: ತಮಿಳುನಾಡು | ಹಾಸ್ಟೆಲ್ ಕೊಠಡಿಯಲ್ಲಿ ಐಐಟಿ ಮದ್ರಾಸ್ ವಿದ್ಯಾರ್ಥಿ ಶವ ಪತ್ತೆ; ಆತ್ಮಹತ್ಯೆ ಶಂಕೆ

ಆಕೆ ವಿರೋಧಿಸಿದಾಗ ಆರೋಪಿ ಕೊಲೆ ಬೆದರಿಕೆಯನ್ನೂ ಹಾಕಿದ್ದಾನೆ. ಆರೋಪಿ ಹಾಗೂ ಮಹಿಳೆ ಪರಸ್ಪರ ಪರಿಚಯವಿದ್ದರು ಎಂದು ಮೂಲಗಳು ತಿಳಿಸಿರುವುದಾಗಿ ಪೊಲೀಸರು ಹೇಳಿದರು.

ಸಂತ್ರಸ್ತೆಯನ್ನು ಆಕೆಯ ತಾಯಿ ರಕ್ಷಿಸಿದ್ದು, ಆ ಮನೆಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾರೆ. ಆದರೆ, ಮಹಿಳೆಯು ನಾಪತ್ತೆಯಾಗಿರುವ ಬಗ್ಗೆ ಆಕೆಯ ಕುಟುಂಬದವರು ದೂರು ನೀಡಿಲ್ಲ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಘಟನೆಯ ಕುರಿತು ಈ ಹಿಂದೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ನ್ಯಾಯಾಲಯದ ಮೊರೆ ಹೋಗಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಆರೋಪಿಗಳ ವಿರುದ್ಧ ಅಪಹರಣ ಮತ್ತು ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್