ಹೆಸರು ಕಾಳು ಬೆಳೆಗೆ ಕನಿಷ್ಟ ಬೆಂಬಲ ಬೆಲೆ | ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್

  • ಕನಿಷ್ಟ 50,000 ಎಕರೆಯಲ್ಲಿ ಹೆಸರು ಕಾಳು ಬೆಳೆಯಲು ಸರ್ಕಾರ ಮನವಿ
  • ವಿಡಿಯೋ ಸಂದೇಶದಲ್ಲಿ ಭಗವಂತ್ ಮಾನ್ ಘೋಷಣೆ

ಪಂಜಾಬ್‌ನಲ್ಲಿ ಹೆಸರು ಕಾಳುಗಳನ್ನು ಕನಿಷ್ಟ ಬೆಂಬಲ ಬೆಲೆಯೊಂದಿಗೆ ಕೊಂಡುಕೊಳ್ಳುವುದಾಗಿ ಪಂಜಾಬ್‌ ಮುಖ್ಯಮಂತ್ರಿ ಭಗವಂತ್ ಮಾನ್ ಘೋಷಿಸಿದ್ದಾರೆ.  ಹೆಸರು ಧಾನ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳಯಬೇಕೆಂದು ರೈತರಲ್ಲಿ ಮನವಿ ಮಾಡಿದ್ದಾರೆ.

ವಿಡಿಯೋ ಸಂದೇಶಯೊಂದರಲ್ಲಿ ಮಾತನಾಡಿದ ಭಗವಂತ್ ಮಾನ್, “ಹೆಸರು ಬೆಳೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ. ರೈತರು ಮೇ 10ರಿಂದ ಮೇ 20ರೊಳಗೆ ಹೆಸರು ಕಾಳನ್ನು ಬಿತ್ತಿದರೆ, ಜುಲೈ 10 ರಿಂದ ಜುಲೈ 20ರ ನಡುವೆ ಬೆಳೆ ಮಾರಟಕ್ಕೆ ಸಿದ್ಧವಾಗಲಿದೆ. ನಾವು ಅದನ್ನು ಕನಿಷ್ಟ ಬೆಂಬಲ ಬೆಲೆಗೆ ಖರೀದಿಸುತ್ತೇವೆ" ಎಂದು ಘೋಷಿಸಿದ್ದಾರೆ. 

"ಬೆಳೆಗೆ ಹೆಸರು ಧಾನ್ಯವನ್ನು ಆಯ್ಕೆ ಮಾಡದ ರೈತರು, ಭತ್ತದ ತಳಿ ಪಿಆರ್126 ಅಥವಾ ಬಾಸ್ಮತಿಯನ್ನು ಬೆಳೆಯಬಹುದು” ಎಂದು ಅವರು ಸೂಚಿಸಿದ್ದಾರೆ. 

"ಹೆಸರು ಬೆಳೆಯು ಎಕರೆಗೆ ನಾಲ್ಕೈದು ಕ್ವಿಂಟಲ್ ಇಳುವರಿ ಬರುತ್ತದೆ. ಹಾಗಾಗಿ, ಕನಿಷ್ಟ 50,000 ಎಕರೆಯಲ್ಲಿ ಹೆಸರು ಬೆಳೆಯುವಂತೆ ಸರ್ಕಾರವು ರೈತರ ಮನವೊಲಿಸುತ್ತದೆ" ಎಂದು ಮಾನ್ ಹೇಳಿದ್ದಾರೆ. 

ಈ ಸುದ್ದಿಯನ್ನು ಓದಿದ್ದೀರಾ ? ಸಾಮಾನ್ಯ ಆಡಳಿತ ಇಲಾಖೆ ಮಾಹಿತಿ ಹಕ್ಕುಕಾಯ್ದೆ ಅಡಿಯಲ್ಲಿ ಬರುತ್ತದೆ | ಒಡಿಶಾ ಹೈಕೋರ್ಟ್‌

ಹೆಸರು ಧಾನ್ಯದ ಕೃಷಿಯು ರೈತರಿಗೆ ಒಂದು ವರ್ಷದಲ್ಲಿ ಮೂರು ಬೆಳೆಗಳನ್ನು ಪಡೆಯಲು ಅವಕಾಶವನ್ನು ಒದಗಿಸುತ್ತದೆ. ಇದೊಂದು ದ್ವಿದಳ ಧಾನ್ಯವಾಗಿದ್ದು, ಮಣ್ಣಿಗೆ ಪ್ರಯೋಜನಕಾರಿಯಾಗಿದೆ. ಮಣ್ಣಿನ ಫಲವತ್ತತೆಯನ್ನು ಸುಧಾರಿಸುತ್ತದೆ.

ಈ ವರ್ಷ ಏಪ್ರಿಲ್ 2ರ ತನಕ ಪಂಜಾಬ್‌ನಲ್ಲಿ 3,000 ಹೆಕ್ಟೇರ್‌ನಲ್ಲಿ ಹೆಸರು ಧಾನ್ಯ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಸಮಯದಲ್ಲಿ 5,000 ಹೆಕ್ಟರ್‍‌ನಲ್ಲಿ ಹೆಸರು ಬೆಳೆಯಲಾಗಿತ್ತು. ಕೇಂದ್ರ ಸರ್ಕಾರವು ಕಳೆದ ವರ್ಷ ಹೆಸರು ಬೆಳೆಗೆ ಪ್ರತಿ ಕ್ವಿಂಟಲ್‌ಗೆ ₹7,250 ಘೋಷಿಸಿತ್ತು. ಆದರೆ, ₹7,500ಕ್ಕಿಂತ ಹೆಚ್ಚಿನ ಬೆಲೆಗೆ ಬೆಳೆ ಮಾರಟವಾಗಿತ್ತು. ಪ್ರತಿ ಎಕರೆಗೆ ಬಿತ್ತನೆ ಬೀಜ, ಕೂಲಿ ಮತ್ತು ಇತರ ಖರ್ಚು ಸೇರಿದಂತೆ ತಗುಲುವ ವೆಚ್ಚ ಸುಮಾರು 8,000 ರಿಂದ 9,000 ರೂ.ಗಳಿದೆ.

ಮೂಲಗಳು ಹೇಳುವಂತೆ, ಪಂಜಾಬ್‌ನಲ್ಲಿ ಆರು ಲಕ್ಷ ಟನ್‌ಗಳ ಹೆಸರು ಬೇಳೆಯ ಅವಶ್ಯಕತೆಯಿದೆ. ಆದರೆ, ಆ ರಾಜ್ಯವು ವರ್ಷಕ್ಕೆ 50,000 ರಿಂದ 60,000 ಟನ್ ಹೆಸರು ಕಾಳುಗಳನ್ನು ಬೆಳೆಯುತ್ತಿದೆ. ಬೆಳೆಯು ಒಟ್ಟು ಬಳಕೆಯ ಶೇ.10 ರಷ್ಟಿದೆ. ಉಳಿದ ಶೇ.90ರಷ್ಟು ಕಾಳುಗಳನ್ನು ಬೇರೆ ರಾಜ್ಯಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.   

ಈ ಬಾರಿ, ರೈತರು ಭತ್ತದ ಬೆಳೆ ಪಿಆರ್‌126 ತಳಿಯ ಬೀಜವನ್ನು ಆರಿಸಿಕೊಳ್ಳುತ್ತಿದ್ದಾರೆ. ಏಕೆಂದರೆ, ಈ ತಳಿಯನ್ನು ಲುಧಿಯಾನದ ಪಂಜಾಬ್ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದೆ. ಕೆಜಿಗೆ 65 ರಿಂದ 140 ರೂ.ಗೆ ಮಾರಾಟವಾಗುತ್ತಿದೆ. ತಡವಾಗಿ ಭತ್ತದ ತಳಿಗಳನ್ನು ಬಿತ್ತನೆ ಮಾಡುವುದರಿಂದ ಶೇ.15 ರಿಂದ 20 ರಷ್ಟು ಕಡಿಮೆ ನೀರು ಬಳಕೆಯಾಗುತ್ತದೆ.

ರಾಜ್ಯ ಸರ್ಕಾರ ಕೃಷಿ ರಂಗಕ್ಕೆ ಕೊಟ್ಟ ಎರಡನೇಯ ಮಹತ್ವದ ಘೋಷಣೆ ಇದಾಗಿದೆ. ಭತ್ತದ ಬಿತ್ತನೆಗೆ ಮುಂದಾಗುವವರಿಗೆ ಪ್ರತಿ ಎಕರೆಗೆ 1,500 ರೂ.ಗಳನ್ನು ‘ಸಬ್ಸಿಡಿ’ ನೀಡುವುದಾಗಿ ಕಳೆದ ವಾರ ಮುಖ್ಯಮಂತ್ರಿ ಮಾನ್ ಘೋಷಿಸಿದ್ದರು. 

ನಿಮಗೆ ಏನು ಅನ್ನಿಸ್ತು?
0 ವೋಟ್