ಪೊಲೀಸರ ರಕ್ಷಣೆಯ ನಡುವೆ ದಲಿತರ ಮದುವೆ ಮೆರವಣಿಗೆ ಮೇಲೆ ಕಲ್ಲು ತೂರಾಟ

horse_used_in_dalit_wedding
  • ಮೆರವಣಿಗೆ ತಡೆಯಲು ದಾಳಿ ನಡೆಸಿದ ಗುಂಪು 
  • ರಸ್ತೆಗೆ ಕಲ್ಲು ಹಾಕಿ ನಿರ್ಬಂಧಿಸಿದ ಗ್ರಾಮಸ್ಥರು 

ದಲಿತರ ಮದುವೆ ಮೆರವಣಿಗೆ ಮೇಲೆ ಗುಂಪೊಂದು ದಾಳಿ ಮಾಡಿರುವ ಘಟನೆ ಮಧ್ಯಪ್ರದೇಶದ ರಾಜ್ಗಢ ಜಿಲ್ಲೆಯ ಪಿಪಲ್ಯಕಲನ್ ಗ್ರಾಮದಲ್ಲಿ ಭಾನುವಾರ ರಾತ್ರಿ ಜರುಗಿದೆ.  ಪೊಲೀಸ್ ಭದ್ರತೆ ಇದ್ದಾಗ್ಯೂ ಈ ದಾಳಿ ನಡೆಸಲಾಗಿದೆ. 
ತಮ್ಮ ಸಹೋದರಿಯ ಮದುವೆ ಮೆರವಣಿಗೆ ನೆರೆಯ ಛಪೇಡಾ ಗ್ರಾಮದಿಂದ ಆಗಮಿಸಿದ ಸಂದರ್ಭದಲ್ಲಿ ಗುಂಪು ಕಲ್ಲುಗಳನ್ನು ಎಸೆದು ಅತಿಥಿಗಳಿಗಾಗಿ ನಿರ್ಮಿಸಿದ್ದ ಟೆಂಟ್ಗಳನ್ನು ಕಿತ್ತುಹಾಕಿದೆ ಎಂದು ದೀಪಕ್ ಮೇಘವಾಲ್  ಹೇಳಿದ್ದಾರೆ.
ಗುಂಪು ಚದುರಿಸಲು ಮತ್ತು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್ಗಳನ್ನು ಬಳಸಿದ್ದರು. ಟೆಂಟ್ ಮಾಲೀಕರು ನಷ್ಟದಿಂದ ಪಾರಾಗಲು ಟೆಂಟ್ಗಳನ್ನುತೆಗೆದುಹಾಕಿದರು. ನಂತರ ಪೊಲೀಸರ ರಕ್ಷಣೆ ಭರವಸೆ ನೀಡಿದ ಬಳಿಕ ಡೇರೆಗಳನ್ನು ಮತ್ತೆ ಸ್ಥಾಪಿಸಿದರೆಂದು ಅವರು ವಿವರಿಸಿದರು. 

ರಾಜ್‌ಗಢ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಶರ್ಮಾ ಮಾತನಾಡಿ, ಮೆರವಣಿಗೆ ಅಲ್ಲಿಗೆ ತಲುಪುವುದನ್ನು ತಡೆಯಲು ಜನಸಮೂಹ ಮದುವೆ ಸ್ಥಳಕ್ಕೆ ಹೋಗುವ ರಸ್ತೆಯಲ್ಲಿ ಕಲ್ಲುಗಳನ್ನು ಹಾಕುವ ಮೂಲಕ ನಿರ್ಬಂಧಿಸಿದೆ."  ನಂತರ ಪೊಲೀಸ್ ರಕ್ಷಣೆಯಲ್ಲಿ ಮದುವೆಯನ್ನು ನಡೆಸಲಾಯಿತು."

ಡಂಗಿ ಸಮುದಾಯದ 35 ಆರೋಪಿಗಳ ಪೈಕಿ ಐವರನ್ನು ಬಂಧಿಸಿ ಗಲಭೆ, ಕ್ರಿಮಿನಲ್ ಬೆದರಿಕೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ:? ಮದುವೆಗೆ ಕುದುರೆ ಮೇಲೆ ಮೆರವಣಿಗೆ ಹೋದ ಮೇಘವಾಲ್ ಸಮುದಾಯಕ್ಕೆ ಬಹಿಷ್ಕಾರ 

ಎರಡು ದಿನಗಳ ಹಿಂದೆ ನಡೆದ ಇನ್ನೊಂದು ದಲಿತ ಕುಟುಂಬವೊಂದರ ವಿವಾಹ ಮೆರವಣಿಗೆಗೆ ಯಾರೊಬ್ಬರೂ ವಿರೋಧ ವ್ಯಕ್ತಪಡಿಸಿರಲಿಲ್ಲವೆಂದು  ಡಂಗಿ ಸಮುದಾಯದ ಸದಸ್ಯರೊಬ್ಬರು ಹೇಳಿದರು. “ಆದರೆ ಛಪೇಡಾ ಗ್ರಾಮದ ವರ ರಾಹುಲ್ ಮೇಘವಾಲ್, ತಾರತಮ್ಯದ ನಕಲಿ ಪ್ರಚಾರಕ್ಕಾಗಿ ಗ್ರಾಮಸ್ಥರ ವಿರುದ್ಧ ಸಾಮಾಜಿಕ ಮಾಧ್ಯಮ ಅಭಿಯಾನ ನಡೆಸುತ್ತಿದ್ದರು. ಇದರಿಂದ ಮನನೊಂದ ಗ್ರಾಮಸ್ಥರು ಅವರ ಮದುವೆ ಮೆರವಣಿಗೆ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಿದ್ದಾರೆ. 

ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಹುಲ್ ಮೇಘವಾಲ್ “ತನಗೆ ಬೆದರಿಕೆಗಳು ಬರುತ್ತಿವೆ ಮತ್ತು ಅದಕ್ಕಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ರಕ್ಷಣೆ ಕೋರಿರುವುದಾಗಿ” ಹೇಳಿದ್ದಾರೆ.
ಜಾತಿ ನಿಯಮಗಳನ್ನು ಧಿಕ್ಕರಿಸಿ ಕುದುರೆ ಮೇಲೆ ಮದುವೆ ಮೆರವಣಿಗೆ ನಡೆಸಿದ್ದಕ್ಕಾಗಿ ದಲಿತರ ಮೇಲೆ ಮೇಲ್ಜಾತಿಯವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮಧ್ಯಪ್ರದೇಶ ಸೇರಿದಂತೆ ದಲಿತರ ವಿವಾಹ ಮೆರವಣಿಗೆಗಳಿಗೆ ಭದ್ರತೆ ಒದಗಿಸುವಂತೆ ಅಥವಾ ಅವರಿಗೆ ಪರ್ಯಾಯ ಮಾರ್ಗ ಬಳಸಲು ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ. 

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗ್ರಾಮದಲ್ಲಿ ಉಳಿದುಕೊಂಡು ಬುಡಕಟ್ಟು ಮಹಿಳೆ ನೀಡಿದ ಹಣ್ಣುಗಳನ್ನು ತಿನ್ನುವ ಮೂಲಕ ಸಮಾನತೆಯ ಕಲ್ಪನೆ ಬೆಳೆಸಿಕೊಳ್ಳುವ ಸಂದೇಶ ಸಾರಿದ್ದರು. ಇದಾದ  ಮೂರು ತಿಂಗಳಲ್ಲಿ ಇದೇ ಗ್ರಾಮದಿಂದ ಈ ವರದಿಯಾಗಿದೆ.  

ದಲಿತರ ಪಾಲಿಗೆ ಸಮಸ್ಯೆಯಾಗಿ ಪರಿಣಮಿಸಿದ ಕುದುರೆ ಮೆರವಣಿಗೆ

ಗುಜರಾತ್‌ನ ಪಾಟ್ನಾ ಜಿಲ್ಲೆಯ ಬಸ್ತಾನ್‌ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ಇಂಥದ್ದೇ ಪ್ರಸಂಗ ನಡೆದಿದ್ದು, ಕುದುರೆ ಮೇಲೆ ಮದುವೆ ಮೆರವಣಿಗೆ ನಡೆಸಿದ ದಲಿತರ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದರು. ರಾಜಸ್ಥಾನದ ಚಿತ್ತೋರ್‌ಗಢ್‌ ಜಿಲ್ಲೆಯ ಡುಗ್ಲಾದ ಅಲೋಡ್‌ ಗ್ರಾಮದಲ್ಲಿ ದಲಿತ ಕುಟುಂಬವೊಂದು ಕುದುರೆಯಲ್ಲಿ ಮದುವೆ ಮೆರವಣಿಗೆ ಮಾಡಿದ್ದಕ್ಕೆ ಗ್ರಾಮಸ್ಥರು ಮೇಘವಾಲ್‌ ಸಮುದಾಯಕ್ಕೆ  ಬಹಿಷ್ಕಾರ ಹಾಕಿದ್ದರು. ನಂತರ ಅಧಿಕಾರಿಗಳ ಮಧ್ಯಸ್ಥಿಕೆವಹಿಸಿದ ನಂತರ ಗ್ರಾಮದಲ್ಲಿ ಸಮಸ್ಯೆ ಬಗೆಹರಿದಿತ್ತು. ಇದೇ ರೀತಿ ೧೦ ದಿನಗಳ ಹಿಂದಷ್ಟೇ ಉತ್ತರಖಂಡದ ಗ್ರಾಮವೊಂದರಲ್ಲಿ ದಲಿತ ವರನನ್ನು ಕುದುರೆಯಿಂದ ಕೆಳಗಿಳಿಸಿದ ಪ್ರಕರಣ ವರದಿಯಾಗಿತ್ತು. 

ನಿಮಗೆ ಏನು ಅನ್ನಿಸ್ತು?
1 ವೋಟ್