ಮೊಹಾಲಿ | ಜಲ ವಿವಾದಗಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹ; ಡಿ.2ರಿಂದ ದೆಹಲಿ ಮಾದರಿ ರೈತ ಹೋರಾಟಕ್ಕೆ ಕರೆ

farmers
  • ʼಪಂಜಾಬ್‌ ನೀರಾವರಿ ಬಿಕ್ಕಟ್ಟು ರಾಜಕೀಯ ಹಿತಾಸಕ್ತಿಗಾಗಿ ಬಳಕೆʼ
  • ʼರಾಜ್ಯದ ನದಿ ನೀರಿನ ಮೇಲೆ ಹಕ್ಕಿರುವುದು ಪಂಜಾಬ್‌ಗೆ ಮಾತ್ರʼ

ಪಂಜಾಬ್‌ನಲ್ಲಿ ತೀವ್ರವಾಗಿರುವ ಜಲ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಡಿ.2-15 ವರೆಗೆ ಚಂಡೀಗಢದಲ್ಲಿ ರೈತ ಹೋರಾಟ ಸಂಘಟಿಸಲು ರೈತ ಸಂಘಟನೆಗಳು ಕರೆ ನೀಡಿವೆ.

ಈ ಕುರಿತು ಸೋಮವಾರ ಐದು ರೈತ ಸಂಘಟನೆಗಳು ಮೊಹಾಲಿಯ ಕಿಸಾನ್ ಭವನದಲ್ಲಿ ಸಭೆ ನಡೆಸಿ, ನೀರಿನ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ, ಪರಿಸರ ಮಾಲಿನ್ಯ ಮತ್ತು ರಾಜ್ಯದ ಒಕ್ಕೂಟ ರಚನೆಯ ಮೇಲಿನ ಕೇಂದ್ರದ ದಾಳಿ ಖಂಡಿಸಿ ರೈತರನ್ನು ಜಾಗೃತಗೊಳಿಸಲು ದೆಹಲಿ ಮಾದರಿಯಲ್ಲಿ ಹೋರಾಟ ನಡೆಸಲು ನಿರ್ಧರಿಸಿವೆ.

ಭಾರತೀಯ ಕಿಸಾನ್ ಯೂನಿಯನ್ (ರಾಜೇವಾಲ್), ಅಖಿಲ ಭಾರತ ಕಿಸಾನ್ ಫೆಡರೇಶನ್, ಕಿಸಾನ್ ಸಂಘರ್ಷ ಸಮಿತಿ ಪಂಜಾಬ್, ಭಾರತೀಯ ಕಿಸಾನ್ ಯೂನಿಯನ್-ಮಾನಸ ಮತ್ತು ಆಜಾದ್ ಕಿಸಾನ್ ಸಂಘರ್ಷ ಸಮಿತಿಗಳು, ಬಲ್ಬೀರ್ ಸಿಂಗ್ ರಾಜೇವಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ರೈತ ಸಂಘಟನೆಗಳಾಗಿವೆ.

ಈ ಕುರಿತು ರಾಜೇವಾಲ್ ಮಾತನಾಡಿ, "ಪಂಜಾಬ್‌ನ ನದಿಗಳಿಂದ ಪಾಕಿಸ್ತಾನ ಮತ್ತು ಇತರ ರಾಜ್ಯಗಳಿಗೆ ಹೆಚ್ಚಿನ ನೀರನ್ನು ಬಿಡಲಾಗುತ್ತಿದೆ. ಕೇವಲ ಶೇ.27ರಷ್ಟು ಭೂಮಿಯಲ್ಲಿ ಮಾತ್ರ ಕಾಲುವೆಗಳಿಂದ ನೀರು ಪಡೆದು ವ್ಯವಸಾಯ ಮಾಡಲಾಗುತ್ತಿದ್ದು, ಪಂಜಾಬ್ ನದಿ ನೀರಿನಿಂದ ವಂಚಿತವಾಗಿದೆ. ಇದಕ್ಕೆ ಕೇಂದ್ರ ಸರ್ಕಾರದ ತಪ್ಪು ನೀತಿಗಳು, ನಿರ್ಧಾರಗಳೇ ಕಾರಣ. ಹಾಗಾಗಿ, ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬದಲು ವಿವಾದವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ" ಎಂದು ಆರೋಪಿಸಿದರು.

AV Eye Hospital ad

ಈ ಸುದ್ದಿ ಓದಿದ್ದೀರಾ? ಜಲಂಧರ್‌ | ನ.24ರಂದು ರೈಲು ತಡೆಗೆ ಬಿಕೆಯು ನಿರ್ಧಾರ; ಗುರ್ನಾಮ್ ಸಿಂಗ್ ಚದುನಿ

"ಪಂಜಾಬ್‌ ಜಲ ವಿವಾದ ರಾಜ್ಯದ ವಿಷಯವಾಗಿದೆ (ರಾಜ್ಯ ಪಟ್ಟಿಯ ನಮೂದು 17). ಆದರೆ ಈ ವಿಷಯದಲ್ಲಿ ಕೇಂದ್ರ ಸರ್ಕಾರ ಕಾನೂನುಬಾಹಿರವಾಗಿ ಮತ್ತು ಅಸಾಂವಿಧಾನಿಕವಾಗಿ ಹಸ್ತಕ್ಷೇಪ ಮಾಡುತ್ತಿದೆ. ನದಿ ನೀರಿನ ಮೇಲೆ ಹಕ್ಕಿರುವುದು ಪಂಜಾಬ್‌ ರಾಜ್ಯಕ್ಕೆ ಮಾತ್ರ. ಹೀಗಾಗಿ, ರಾಜ್ಯದ ಪ್ರತಿಯೊಂದು ಕ್ಷೇತ್ರಕ್ಕೂ ನೀರು ತಲುಪಬೇಕು" ಎಂದು ಸಭೆಯಲ್ಲಿ ಭಾಗವಹಿಸಿದ್ದ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app