ಮುಂಬೈ | ಉದ್ಯಮಿ ಮುಕೇಶ್‌ ಅಂಬಾನಿಗೆ ಮೂರು ಬಾರಿ ಬೆದರಿಕೆ ಕರೆ; ಓರ್ವನ ಬಂಧನ

ambani family
  • ಮುಕೇಶ್‌ ಅಂಬಾನಿಗೆ ಮೂರಕ್ಕೂ ಅಧಿಕ ಬಾರಿ ಬೆದರಿಕೆ ಕರೆ
  • ಹೇಳಿಕೆ ದಾಖಲಿಸಿರುವ ಅಧಿಕಾರಿಗಳು, ಆಸ್ಪತ್ರೆಯ ಸಿಬ್ಬಂದಿ

ಉದ್ಯಮಿ ಮುಕೇಶ್‌ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಸೋಮವಾರ ಮೂರು ಬೆದರಿಕೆ ಕರೆಗಳು ಬಂದಿವೆ. ರಿಲಯನ್ಸ್ ಫೌಂಡೇಶನ್‌ನ ಹರ್ಸ್ಕಿಸಂದಾಸ್ ಆಸ್ಪತ್ರೆಯ ದೂರವಾಣಿಗೆ ಬೆಳಗ್ಗೆ 10:30 ರ ಸುಮಾರಿಗೆ ಕರೆಗಳು ಬಂದಿವೆ ಎನ್ನಲಾಗಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಕರೆಗಳು ಬಂದಿರುವ ಬಗ್ಗೆ ರಿಲಯನ್ಸ್‌ ಫೌಂಡೇಶನ್‌ ದೂರು ದಾಖಲಿಸಿದೆ. ಆಸ್ಪತ್ರೆಗೆ ಮೂರಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದಿವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಪ್ರಕರಣ ಸಂಬಂಧ ಮುಂಬೈನ ಪಶ್ಚಿಮ ಉಪನಗರದಲ್ಲಿರುವ ದಹಿಸರ್‌ ಪ್ರದೇಶದಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಅಧಿಕಾರಿಗಳು ಮತ್ತು ಆಸ್ಪತ್ರೆಯ ಹಿರಿಯ ವೈದ್ಯರು ಡಿಬಿ ಮಾರ್ಗ್‌ ಪೊಲೀಸ್‌ ಠಾಣೆಯಲ್ಲಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು | ಹಲೊ ಬದಲಿಗೆ ವಂದೇ ಮಾತರಂ ಹೇಳಿ; ಮಹಾರಾಷ್ಟ್ರ ಸಚಿವ ಆದೇಶ

ಕಳೆದ ವರ್ಷ ಮುಕೇಶ್ ಅಂಬಾನಿ ಅವರ ಮುಂಬೈ ನಿವಾಸ ‘ಆಂಟಿಲಿಯಾ’ದ ಹೊರಗೆ ಜಿಲೆಟಿನ್ ಸ್ಫೋಟಕ ತುಂಬಿದ ವಾಹನ ಮತ್ತು ಬೆದರಿಕೆ ಪತ್ರವಿರುವ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು.  

ನಿಮಗೆ ಏನು ಅನ್ನಿಸ್ತು?
0 ವೋಟ್