ಚಂದ್ರನ ಮೇಲೆ ಪರಮಾಣು ಸ್ಥಾವರ ಸ್ಥಾಪಿಸಲು ಮುಂದಾದ ನಾಸಾ!

  • ಚಂದ್ರನ ಮೇಲ್ಮೈಯಲ್ಲಿ ಪರಮಾಣು ಸ್ಥಾವರ ನಿರ್ಮಾಣಕ್ಕೆ ಸಿದ್ಧತೆ
  • ಸ್ಥಾವರ ವಿನ್ಯಾಸ ಮಾಡಿಸುತ್ತಿರುವ ಅಮೆರಿಕ ಇಂಧನ ಇಲಾಖೆ

ಚಂದ್ರನ ಮೇಲೆ ಪರಮಾಣು ಸ್ಥಾವರ ನಿರ್ಮಿಸಲು ನಾಸಾ ಮುಂದಾಗಿದೆ. ಈ ನಿಟ್ಟಿನಲ್ಲಿ ಅಮೆರಿಕದ ಇಂಧನ ಇಲಾಖೆಯು (ಡಿಒಇ) ಚಂದ್ರನ ಮೇಲಿನ ಅಣುಸ್ಥಾವರದ ವಿನ್ಯಾಸಕ್ಕಾಗಿ ಮೂರು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದವು ಸುಮಾರು 5 ಮಿಲಿಯನ್‌ ಡಾಲರ್‌ ಮೌಲ್ಯದ್ದಾಗಿದೆ.

ಈ ದಶಕದ ಅಂತ್ಯಕ್ಕೆ ಹೊಸ ತಂತ್ರಜ್ಞಾನವನ್ನು ಚಂದ್ರನಲ್ಲಿ ನಿರ್ಮಿಸುವ ಉದ್ದೇಶವನ್ನು ನಾಸಾ ಹೊಂದಿದೆ. 

40 ಕಿಲೋವ್ಯಾಟ್‌ ವಿದಳನ ಶಕ್ತಿ ಹೊಂದಿರುವಂತಹ ವಿನ್ಯಾಸ ಪರಿಕಲ್ಪನೆಯನ್ನು ಆರಂಭದಲ್ಲಿ ಬಳಸುವಂತಿರಬೇಕು ಮತ್ತು ಚಂದ್ರನ ಭೂಮೇಲೈಗೆ ಹಾಗೂ ಅಲ್ಲಿನ ಪರಿಸರದಲ್ಲಿ ಕನಿಷ್ಠ 10 ವರ್ಷಗಳ ಕಾಲ ಉಳಿಯುವಂತೆ ಅಣುಸ್ಥಾವರ ವಿನ್ಯಾಸ ಮಾಡಬೇಕು ಎಂದು ನಾಸಾ ಒಪ್ಪಂದ ಮಾಡಿಕೊಂಡ ಕಂಪನಿಗಳಿಗೆ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ?: ಭ್ರಷ್ಟಾಚಾರದ ಬಗ್ಗೆ ಯಾರ ಜತೆ ಚರ್ಚಿಸಬೇಕೆಂದು ನಾನು ತೀರ್ಮಾನಿಸುತ್ತೇನೆ: ಸಿ ಟಿ ರವಿಗೆ ಡಿ ಕೆ ಶಿವಕುಮಾರ್ ತಿರುಗೇಟು

ಲಾಕ್‌ಹೀಡ್‌ ಮಾರ್ಟಿನ್‌, ವೇಸ್ಟಿಂಗ್‌ಹೌಸ್‌ ಮತ್ತು ಐಎಸ್‌ ಚಂದ್ರನಲ್ಲಿ ಅಣುಸ್ಥಾವರದ ವಿನ್ಯಾಸ ಹೊಣೆಯನ್ನು ಹೊತ್ತುಕೊಂಡಿವೆ.

ನ್ಯೂಕ್ಲಿಯರ್‌ ಫ್ಯೂಷನ್‌ ಸಿಸ್ಟಮ್‌ (ಪರಮಾಣು ವಿದಳನ ವ್ಯವಸ್ಥೆ) ಸಾಮಾನ್ಯವಾಗಿ ಸಣ್ಣದಾಗಿದ್ದು, ಹಗುರವಾಗಿರುತ್ತದೆ. ಹೀಗಾಗಿ ಚಂದ್ರನಂತಹ ಉಪಗ್ರಹದ ಪರಿಸರಕ್ಕೆ ಸೂಕ್ತವಾಗಿರುತ್ತವೆ. ಸೂರ್ಯನ ಬೆಳಕು, ಸಮತಟ್ಟಾದ ಭೂಮಿ ಹೀಗೆ ನೈಸರ್ಗಿಕ ಸಂಪನ್ಮೂಲಗಳ ಅವಲಂಬನೆ ಇಲ್ಲದೇ ವಿದ್ಯುತ್‌ ಉತ್ಪಾದಿಸಬಹುದು. ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದರೆ ಚಂದ್ರನಿಂದಾಚೆಗೆ ಮಂಗಳ ಹಾಗೂ ಅದರಾಚೆಗಿನ ಬಾಹ್ಯಾಕಾಶ ಕಾರ್ಯಾಚರಣೆಗೆ ಈ ತಂತ್ರಜ್ಞಾನ ಅನುಕೂಲಕರವಾಗಲಿದೆ ಎಂದು ನಾಸಾ ಹೇಳಿದೆ.

ಯುರೇನಿಯಂನಂತಹ ಪರಮಾಣುಗಳನ್ನು ವಿಭಜಿಸುವುದರಿಂದ ಬಿಡುಗಡೆಯಾಗುವ ಶಕ್ತಿಯನ್ನು ಫ್ಯೂಜನ್‌ ಸರ್‌ಫೇಸ್‌ ಪವರ್‌ ಬಳಸಿಕೊಳ್ಳುತ್ತದೆ. ಈ ರಿಯಾಕ್ಟರ್‌ಗಳು ನಿರಂತರ ಶಕ್ತಿಯನ್ನು ಒದಗಿಸಬಲ್ಲವು. ಮಾತ್ರವಲ್ಲದೇ ಸೂರ್ಯನ ಬೆಳಕೇ ಇರದ ಚಂದ್ರನ ಮೇಲ್ಮೈಯ ತಂಪಾದ ಮೂಲೆಗಳಲ್ಲಿಯೂ ಇರಿಸಬಹುದು. ಆರಂಭದಲ್ಲಿ ಚಂದ್ರನಲ್ಲಿ 40 ಕಿಲೋವ್ಯಾಟ್‌ ವಿದ್ಯುತ್‌ ಅಗತ್ಯವಿದೆ ಎನ್ನುವ ನಾಸಾ, ಕಳೆದ ವರ್ಷ, ಏಜೆನ್ಸಿ, ಮತ್ತು ಇಂಧನ ಇಲಾಖೆಯೊಂದಿಗೆ, ಅಂತಹ ವ್ಯವಸ್ಥೆಯನ್ನು ಹೇಗೆ ನಿರ್ಮಿಸುವುದು ಎಂಬ ಪ್ರಸ್ತಾಪಗಳನ್ನು ಕಳುಹಿಸಲು ಕಂಪನಿಗಳನ್ನು ಆಹ್ವಾನಿಸಿತ್ತು.

ನಿಮಗೆ ಏನು ಅನ್ನಿಸ್ತು?
1 ವೋಟ್