ನೈಸರ್ಗಿಕ ಅನಿಲ ಬೆಲೆ ಏರಿಕೆ; ಚಹಾ ಉದ್ಯಮಕ್ಕೆ ಹೊಡೆತ

  • ಚಹಾ ಉದ್ಯಮವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಮನವಿ
  • ಒಟ್ಟು ಉತ್ಪಾದನೆಯ ಶೇ. 50 ಉತ್ಪಾದಿಸುವ ಅಸ್ಸಾಂ

ನೈಸರ್ಗಿಕ ಅನಿಲದ ಬೆಲೆಯಲ್ಲಿನ ಅಸಹಜ ಏರಿಕೆಯು ಚಹಾ ಉದ್ಯಮಕ್ಕೆ ಭಾರೀ ಹೊಡೆತ ನೀಡಿದೆ. ಇಂಧನ ಬೆಲೆಯಲ್ಲಿನ ತೀವ್ರ ಹೆಚ್ಚಳದಿಂದ ಚಹಾ ಉದ್ಯಮಕ್ಕೆ ಏಟು ಬಿದ್ದಿದೆ ಎಂದು ನಾರ್ತ್ ಈಸ್ಟರ್ನ್ ಟೀ ಅಸೋಸಿಯೇಷನ್ (ಈಶಾನ್ಯ ರಾಜ್ಯಗಳ ಚಹಾ ಸಂಘಟನೆ) ​​ಹೇಳಿದೆ.

ದೇಶದ ವಾರ್ಷಿಕ ಚಹಾ ಉತ್ಪಾದನೆಯಲ್ಲಿ ಈಶಾನ್ಯ ರಾಜ್ಯ ಅಸ್ಸಾಂ 50 ಪ್ರತಿಶತವನ್ನು ಉತ್ಪಾದಿಸುತ್ತದೆ. ಜುಲೈ 2021ರಿಂದ ಏಪ್ರಿಲ್ 2022ರವರೆಗೆ ನೈಸರ್ಗಿಕ ಅನಿಲದ ಬೆಲೆ ₹5,085.00 ರಿಂದ ₹21,119.57 ರವರೆಗೆ ಪ್ರತೀ 1000 ಸ್ಕಮ್‌ಗೆ ಏರಿಕೆಯಾಗಿದೆ ಎಂದು ಅಸೋಸಿಯೇಷನ್ ​ತಿಳಿಸಿದೆ. ಕಳೆದ ಹತ್ತು ತಿಂಗಳ ಅವಧಿಯಲ್ಲಿ ನೈಸರ್ಗಿಕ ಅನಿಲದ ಸ್ಕಮ್ ಬೆಲೆ ನಾಲ್ಕು ಪಟ್ಟು ಹೆಚ್ಚಾಗಿದೆ.

"ನೈಸರ್ಗಿಕ ಅನಿಲದ ಬೆಲೆಯ ಈ ವಿಪರೀತ ಏರಿಕೆಯಿಂದಾಗಿ ಚಹಾದ ಉತ್ಪಾದನಾ ವೆಚ್ಚ ಕೆಜಿಗೆ ₹6ರಿಂದ ₹8  ಕಡಿಮೆಯಿಲ್ಲದಂತೆ ಏರಿದೆ" ಎಂದು ಸಂಸ್ಥೆಯು ಹೇಳಿದೆ.

ಚಹಾಗೂ ನೈಸರ್ಗಿಕ ಅನಿಲಕ್ಕೂ ಏನು ಸಂಬಂಧ?

ಸಂಸ್ಕರಣೆಯ ಸಮಯದಲ್ಲಿ ಚಹಾ ಎಲೆಗಳು ಒಣಗಲು ಮತ್ತು ಒಣಗಿಸಲು ನೈಸರ್ಗಿಕ ಅನಿಲವನ್ನು ಇಂಧನವಾಗಿ ಬಳಸಲಾಗುತ್ತದೆ. ಭಾರತೀಯ ಚಹಾ ಉದ್ಯಮವು ಕಳೆದ ಹಲವಾರು ವರ್ಷಗಳಿಂದ ಸ್ಪರ್ಧಾತ್ಮಕ ಬೆಲೆ, ಗುಣಮಟ್ಟದ ಬೆಳೆಗಳ ಕೊರತೆ, ಹೆಚ್ಚುತ್ತಿರುವ ಕಾರ್ಮಿಕ ವೆಚ್ಚಗಳು ಹಾಗೂ ಕಡಿಮೆಯಾದ ರಫ್ತು, ಬೇಡಿಕೆಯಂತಹ ಸಮಸ್ಯೆಗಳಿಂದ ದೊಡ್ಡ ಬಿರುಗಾಳಿಯನ್ನೇ ಎದುರಿಸಿದೆ.

ಈ ಸುದ್ದಿಯನ್ನು ಓದಿದ್ದೀರಾ ? ಸುದ್ದಿ ವಿವರ | ಗೋಧಿ ರಫ್ತು ಮಾಡಲು ಹೊರಟ ಕೇಂದ್ರ ಸರ್ಕಾರ ತೆಪ್ಪಗಾಗಿದ್ದು ಏಕೆ?

"ಅನಿಲ ವೆಚ್ಚದಲ್ಲಿ ಇಂತಹ ಹೆಚ್ಚಳವಾಗುತ್ತಿದ್ದು, ಮಾರುಕಟ್ಟೆಯಲ್ಲಿ ಚಹಾದ ಬೆಲೆ ಹೆಚ್ಚಾಗದಿದ್ದರೆ, ಚಹಾ ಉದ್ಯಮ ಉಳಿಯುವುದು ಅನುಮಾನ. ನೈಸರ್ಗಿಕ ಅನಿಲದ ಬೆಲೆ ನಿಗ್ರಹಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು" ಎಂದು ಸಂಘ ಸರ್ಕಾರಕ್ಕೆ ಮನವಿ ಮಾಡಿದೆ.

ಚಹಾ ಉದ್ಯಮದಲ್ಲಿ ದೀರ್ಘಾವಧಿಯ ಸುಸ್ಥಿರತೆ ತರಲು ನೈಸರ್ಗಿಕ ಅನಿಲವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂದು ಉದ್ಯಮ ಸಂಘವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್