ನೀಟ್‌ 2023ರ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ

  • ರಾಷ್ಟ್ರೀಯ ನಿರ್ಗಮನ ಪರೀಕ್ಷೆ ಒಂದು ವರ್ಷ ವಿಳಂಬ
  • ಡಿಸೆಂಬರ್‌ನಲ್ಲಿ ವಿವಿಧ ವೈದ್ಯಕೀಯ ಪರೀಕ್ಷೆಗಳ ದಿನಾಂಕ ನಿಗದಿ

ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಯು (ಎನ್‌ಬಿಇಎಂಎಸ್) ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ಸ್ನಾತಕೋತ್ತರ (ನೀಟ್‌ ಪಿಜಿ) 2023ರ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದೆ. ವೈದ್ಯಕೀಯ ಆಕಾಂಕ್ಷಿಗಳು nbe.edu.in ಅಥವಾ natboard.edu.in ಈ ಅಧಿಕೃತ ವೆಬ್‌ಸೈಟ್‌ಗಳಲ್ಲಿ ವಿವರವಾದ ವೇಳಾಪಟ್ಟಿ ಪರಿಶೀಲಿಸಿಕೊಳ್ಳಬಹುದು.

ಬಿಡುಗಡೆಯಾದ ವೇಳಾಪಟ್ಟಿ ಪ್ರಕಾರ, ನೀಟ್‌ ಸ್ನಾತಕೋತ್ತರ 2023ರ ಪರೀಕ್ಷೆಯನ್ನು ಮಾರ್ಚ್ ಐದು 2023ರಂದು ನಡೆಸಲು ನಿರ್ಧರಿಸಲಾಗಿದೆ. ಆದರೂ, ಈ ವೇಳಾಪಟ್ಟಿಯಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇರುವುದರಿಂದ ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ನಿಯಮಿತವಾಗಿ ಪರಿಶೀಲಿಸಿಕೊಳ್ಳಬೇಕಾಗಿದೆ.

ಪರೀಕ್ಷಾ ದಿನಾಂಕ ಬದಲಾದರೆ, ಹಳೆಯ ವೇಳಾಪಟ್ಟಿ ಪರಿಗಣಿಸಲಾಗುವುದಿಲ್ಲ ಎಂಬುದನ್ನು ಅಭ್ಯರ್ಥಿಗಳು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. 

ಈಗ, natboard.edu.in ವೆಬ್‌ಸೈಟ್‌ನಲ್ಲಿ ಬಿಡುಗಡೆಯಾಗಿರುವ ಹೊಸ ವೇಳಾಪಟ್ಟಿಯ ಪ್ರಕಾರ, ರಾಷ್ಟ್ರೀಯ ವೈದ್ಯಕೀಯ ಮಂಡಳಿಯು (ಡಿಎನ್‌ಬಿ) ಅಂತಿಮ ಪ್ರಾಯೋಗಿಕ ಪರೀಕ್ಷೆಯನ್ನು ಈ ವರ್ಷ ಅಕ್ಟೋಬರ್ ಅಥವಾ ನವಂಬರ್ ತಿಂಗಳಲ್ಲಿ ನಡೆಸಲಿದೆ. ಡಿಎನ್‌ಬಿ ಅಂತಿಮ ಥಿಯರಿ ಪರೀಕ್ಷೆಯು ಡಿಸೆಂಬರ್ 21, 22, 23 ಹಾಗೂ 24ರಂದು ನಡೆಯಲಿದೆ.

ಈ ಸುದ್ದಿ ಓದಿದ್ದೀರಾ? ಮಹಾರಾಷ್ಟ್ರ | ಅಗ್ನಿವೀರರ ನೇಮಕಾತಿ ರ್‍ಯಾಲಿಯಲ್ಲಿ 60,000 ಅಭ್ಯರ್ಥಿಗಳ ನೋಂದಣಿ

ವಿದೇಶಿ ವೈದ್ಯಕೀಯ ಪದವೀಧರರ ಪರೀಕ್ಷೆಯ (ಎಫ್‌ಎಂಜಿಇ) ವಿದೇಶಿ ದಂತ ಸ್ಕ್ರೀನಿಂಗ್ ಪರೀಕ್ಷೆಯನ್ನು (ಎಫ್‌ಡಿಎಸ್‌ಟಿ) 2022 ಡಿಸೆಂಬರ್ 4ರಂದು ನಡೆಸಲಾಗುತ್ತದೆ. ರಚನಾತ್ಮಕ ಮೌಲ್ಯಮಾಪನ ಪರೀಕ್ಷೆಯನ್ನು (ಎಫ್‌ಎಟಿ) ಡಿಸೆಂಬರ್ 10ರಂದು ನಿಗದಿಪಡಿಸಲಾಗಿದೆ.

ನೀಟ್ ದಂತ ಶಸ್ತ್ರಚಿಕಿತ್ಸೆಯ ಸ್ನಾತಕೋತ್ತರ (ಎಂಡಿಎಸ್) ಪರೀಕ್ಷೆಯನ್ನು ಜನವರಿ 8, 2023ರಂದು ನಡೆಸಲಾಗುವುದು. ನಂತರ ಫೆಲೋಶಿಪ್ ಪ್ರವೇಶ ಪರೀಕ್ಷೆಯನ್ನು (ಎಫ್‌ಇಟಿ-2022) ಜನವರಿ 23, 2023ರಂದು ನಡೆಸಲಾಗುವುದು. ರಾಷ್ಟ್ರೀಯ ಮಂಡಳಿಯ ಫೆಲೋಶಿಪ್ (ಎಫ್‌ಎನ್‌ಬಿ) ನಿರ್ಗಮನ ಪರೀಕ್ಷೆಯನ್ನು ಸಹ 2023ರ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಡಿಎನ್‌ಬಿ ಅಂತಿಮ ಪ್ರಾಯೋಗಿಕ ಪರೀಕ್ಷೆಯೊಂದಿಗೆ ಡಿಸೆಂಬರ್ 2022ರಂದು ನಿಗದಿಪಡಿಸಲಾಗಿದೆ.

2023ರಲ್ಲಿ ಆರಂಭವಾಗಬೇಕಿದ್ದ, ರಾಷ್ಟ್ರೀಯ ಮಟ್ಟದ ವೈದ್ಯಕೀಯ ಪರೀಕ್ಷೆಯಾದ ರಾಷ್ಟ್ರೀಯ ನಿರ್ಗಮನ ಪರೀಕ್ಷೆಯನ್ನು (ನೆಕ್ಟ್) ಒಂದು ವರ್ಷ ವಿಳಂಬವಾಗಲಿದ್ದು, 2024ರಲ್ಲಿ ತಾತ್ಕಾಲಿಕ ವೇಳಾಪಟ್ಟಿ ಬಿಡಲಾಗುತ್ತದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್