ನೀಟ್‌ ವಿವಾದ | ನಿಮಗೆ ಭವಿಷ್ಯ ಮುಖ್ಯವೋ ಅಥವಾ ಉಡುಗೆ ಮುಖ್ಯವೋ

  • ನೀಟ್‌ ಪರೀಕ್ಷೆಯ ಅವಹೇಳನ ಕುರಿತು ಹೊರಬಂದ ಮತ್ತಷ್ಟು ಆಘಾತಕಾರಿ ವಿಷಯ
  • ಪಾರದರ್ಶಕ ಉಡುಗೆಯಲ್ಲಿ ಒಳಉಡುಪು ಧರಿಸದೆ ಮುಂದೆ ಕೂರುವಂತೆ ಒತ್ತಾಯ

ವಿದ್ಯಾರ್ಥಿನಿಯರಿಗೆ ಪಾರದರ್ಶಕ ಉಡುಗೆಗಳಲ್ಲಿ ಒಳಉಡುಪು ಧರಿಸದೆ, ಹುಡುಗರು ಮತ್ತು ಪರೀಕ್ಷಾ ಮೇಲ್ವಿಚಾರಕಾರ ಎದುರು ಕೂರುವಂತೆ ಒತ್ತಾಯಿಸಿದರು ಎಂದು ಅರೋಪಿಸಿರುವ ಮತ್ತಷ್ಟು ವಿಷಯಗಳು ಹೊರಬಂದಿವೆ.

ಕೇರಳದ ಕೊಲ್ಲಂನಲ್ಲಿ ನಡೆದ ವಿವಾದಾತ್ಮಕ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ (ನೀಟ್‌) ನಡೆದಿರುವ ಇಂತಹ ಘಟನೆಗಳ ಬಗ್ಗೆ ಆಗಸ್ಟ್‌ 5ರಂದು ಕೊಲ್ಲಂ ಜಿಲ್ಲಾ ಪೊಲೀಸ್ ಮುಖ್ಯಸ್ಥರು, ಕೇರಳ ಹೈಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಈ ವಿವರಗಳನ್ನು ನೀಡಲಾಗಿದೆ.

ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿಯೊಬ್ಬರು ವಿದ್ಯಾರ್ಥಿನಿಯರಿಗೆ, “ನಿಮಗೆ ನಿಮ್ಮ ಭವಿಷ್ಯ ಮುಖ್ಯವೇ ಅಥವಾ ನಿಮ್ಮ ಉಡುಗೆ ಮುಖ್ಯವೇ, ಯಾವುದಕ್ಕೆ ಆದ್ಯತೆ ನೀಡುತ್ತೀರಿ” ಎಂದು ಕೇಳಿರುವ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ. 

ಈ ಸುದ್ದಿ ಓದಿದ್ದೀರಾ? ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

“’ಟಿ-ಶರ್ಟ್' ಧರಿಸಿದ್ದರಿಂದ ಒಳಉಡುಪು ಇಲ್ಲದೆ ಹುಡುಗರ ಎದುರುಗಡೆ ಕೂರಲು ಮುಜುಗರವಾಗುತ್ತಿತ್ತು. ಆ ಕಾರಣಕ್ಕೆ ಒಳಉಡುಪು ತೆಗೆಯಲು ನಿರಾಕರಿಸಿರುವುದಾಗಿ ದೂರುದಾರರು ತಿಳಿಸಿದ್ದಾರೆ” ಎಂದು ಪೊಲೀಸ್ ಹೇಳಿಕೆ ಬಗ್ಗೆ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

"ಒಳಉಡುಪು ತೆಗೆದುಹಾಕಿ, ಪರೀಕ್ಷೆಗೆ ಹಾಜರಾಗುವಂತೆ ತಪಾಸಣಾ ಸಿಬ್ಬಂದಿಗಳು ಒತ್ತಾಯಿಸಿದ್ದಾರೆ. ಕೆಲವರಿಗೆ ಒಳ ಉಡುಪಿನಲ್ಲಿ ಇರುವ ಲೋಹದ ಹುಕ್‌ಗಳನ್ನು ತೆಗೆದುಬರುವಂತೆ, ಸಿಬ್ಬಂದಿಗಳು ಬಳಸುವ ಕೊಠಡಿಗೆ ಕಳುಹಿಸಲಾಗಿದೆ” ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

“ಸರ್ಕಾರ ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಂಡಿದೆ” ಎಂದು ಹಿರಿಯ ಸರ್ಕಾರಿ ವಕೀಲ ಕೆ ಪಿ ಹರೀಶ್ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್