ಜೂನ್‌ ತಿಂಗಳನ್ನು ವಿಶ್ವಾದ್ಯಂತ ಹೆಮ್ಮೆಯ ತಿಂಗಳಾಗಿ ಆಚರಣೆ

  • ಹೆಮ್ಮೆಯ ಮೆರವಣಿಗೆ ಆಚರಿಸಿದ ಎಲ್‌ಜಿಬಿಟಿಕ್ಯೂ ಪ್ಲಸ್‌ ಸಮುದಾಯ
  • ಕಾಮನ ಬಿಲ್ಲಿನ ಧ್ವಜಗಳನ್ನು ಹಿಡಿದು ವೈವಿಧ್ಯತೆಯ ಸಂಭ್ರಮ

ಎಲ್‌ಜಿಬಿಟಿಕ್ಯೂಪ್ಲಸ್‌ ಸಮುದಾಯವು ಪ್ರತಿ ವರ್ಷ ಜೂನ್ ತಿಂಗಳನ್ನು ವಿಶ್ವಾದ್ಯಂತ ಹೆಮ್ಮೆಯ ತಿಂಗಳು (ಪ್ರೈಡ್‌ ಮಂತ್) ಎಂದು ಆಚರಿಸುತ್ತಾರೆ. 

ದೆಹಲಿಯ ಶೇಖ್ ಸರಾಯ್‌ನಲ್ಲಿ ಗುರುವಾರ ಬೆಳಿಗ್ಗೆ ಈ ಸಮುದಾಯವು ಕಾಮನ ಬಿಲ್ಲಿನ ಬಣ್ಣದ ಧ್ವಜಗಳನ್ನು ಹಿಡಿದು ಮೆರವಣಿಗೆ ನಡೆಸಿದರು. ಪ್ರತಿ ಹೆಜ್ಜೆಯಲ್ಲೂ ವೈವಿಧ್ಯತೆ  ಅಳವಡಿಸಿಕೊಳ್ಳಬೇಕು ಎಂಬ ನಿಲುವಿನೊಂದಿಗೆ ಈ ಮೆರವಣಿಗೆ ನಡೆಸಲಾಗುತ್ತದೆ. 

ಸಲಿಂಗಿಗಳು, ದ್ವಿಲಿಂಗಿಗಳು, ಉಭಯ ಲಿಂಗಿಗಳು, ಲಿಂಗತ್ವ ಅಲ್ಪ ಸಂಖ್ಯಾತರು ಹಾಗೂ ಲೈಂಗಿಕ ಅಲ್ಪಸಂಖ್ಯಾತರನ್ನು ಎಲ್‌ಜಿಬಿಟಿಕ್ಯೂಪ್ಲಸ್ ಸಮುದಾಯ ಎಂದು ಕರೆಯಲಾಗುತ್ತದೆ. ಈ ಸಮುದಾಯದವರು ತಮ್ಮ ಹಕ್ಕುಗಳಿಗಾಗಿ, ತಮ್ಮ ಸ್ವತಂತ್ರ ಬದುಕಾಗಿ ಈ ತಿಂಗಳು ಮೆರವಣಿಗೆ ಮೂಲಕ ಪ್ರತಿಭಟಿಸುತ್ತಾರೆ. ಜೊತೆಗೆ ತಮ್ಮ ವಿಶಿಷ್ಟ ವ್ಯಕ್ತಿತ್ವವನ್ನು ಹಬ್ಬದಂತೆ ಸಂಭ್ರಮಿಸುತ್ತಾರೆ.

ನೊಯ್ಡಾ ಮೂಲದ ‘ವಾರಿಯರ್ಸ್ ವಿತೌಟ್ ಕಾಸ್’ ಎಂಬ ಸ್ವಯಂಸೇವಾ ಸಂಸ್ಥೆಯು ದೆಹಲಿ ವಿಶ್ವವಿದ್ಯಾಲಯದ ಶಹೀದ್ ಭಗತ್ ಸಿಂಗ್ ಕಾಲೇಜಿನ ಅಧಿಕೃತ ಸಂಸ್ಥೆಯಾದ ‘ಗರ್ಲ್‌ಅಪ್ ಕ್ಲಬ್‌’ನ ಸಹಯೋಗದೊಂದಿಗೆ ಈ ಹೆಮ್ಮೆಯ ಮೆರವಣಿಗೆ ಆಯೋಜನೆ ಮಾಡಿತ್ತು. ಈ ಮೆರವಣಿಗೆಯಲ್ಲಿ ಎಲ್‌ಜಿಬಿಟಿಕ್ಯೂಪ್ಲಸ್ ಸಮುದಾಯದ ಸದಸ್ಯರು ಮಿತ್ರರಾಷ್ಟ್ರಗಳೊಂದಿಗೆ ಮಳೆಬಿಲ್ಲಿನ ಧ್ವಜ ಹಿಡಿದು ಸಂಭ್ರಮಿಸಿದರು. ಜೊತೆಗೆ ಪ್ರೀತಿಗಾಗಿ ಹಪಹಪಿಸುವವರು (ಲವ್ ಪರ್ಸಿವೆರ್ಸ್) ಎಂಬ ಫಲಕ ಹಿಡಿದಿದ್ದರು. ಈ ಸಮುದಾಯದ ಸದಸ್ಯೆಯಾಗಿರುವ ದ್ಯುತಿ ರಾಯ್ ಅವರು ಮೆರವಣಿಗೆಯಲ್ಲಿ, ತಮ್ಮ ಜೀವನದಲ್ಲಿ ಅಧಿಕಾರ ಪಡೆಯಲು ಅನುಭವಸಿದ ಕ್ಷಣಗಳನ್ನು ಕುರಿತು ಮಾತನಾಡಿದರು.

ಎಲ್‌ಜಿಬಿಟಿಕ್ಯೂಪ್ಲಸ್ ಸಮುದಾಯದವರ ಅಭಿಪ್ರಾಯ

“ಈ ಸಮುದಾಯದ ಕೆಲವರನ್ನು ನೋಡಿದಾಗ, ನನ್ನನ್ನು ಈ ಜಗತ್ತು ಒಪ್ಪಿಕೊಳ್ಳುವುದೆಂದು ಭಾವಿಸಿದೆ” ಎಂದು ಪಾಲಂ ಗ್ರಾಮದ ದೀಪಾಂಶ ಗೋಯಲ್ (22) ಹೇಳಿದರು ಎಂದು 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌' ವರದಿಯಲ್ಲಿ ಉಲ್ಲೇಖಿಸಲಾಗಿದೆ.

“ಸ್ನೇಹಿತರು ಮತ್ತು ಪೋಷಕರನ್ನು ನನ್ನನ್ನು ನಾನು ಇರುವ ಹಾಗೆಯೇ ಸ್ವೀಕರಿಸಿದ ವಿಷಯದಲ್ಲಿ ಅದೃಷ್ಟಶಾಲಿಯಾಗಿದ್ದೇನೆ. ನನ್ನಲ್ಲಿ ಆಗುತ್ತಿದ್ದ ಕೆಲವು ಜಂಜಾಟಗಳಿಂದ ಹೊರಬಂದ ಮೇಲೆ ನಾನು ಶಕ್ತಿಶಾಲಿ ಎಂದು ಭಾವಿಸಿದೆ. ಹಾಗಾಗಿ ನನ್ನನ್ನು ಒಪ್ಪಿಕೊಳ್ಳಲು ಸಹಾಯವಾಯಿತು” ಎಂದು ಮೆರವಣಿಗೆ ಉದ್ದೇಶ ಕುರಿತು ಸುಖದೇವ್ ವಿಹಾರ್‌ನ ಮಿತಾಲಿ ಗೋಯಲ್ (19)  ಮಾತನಾಡಿದ್ದಾರೆ.

“ನಾನು ನನ್ನಲ್ಲಿ ಆಗುತ್ತಿದ್ದ ಮಾನಸಿಕ ಮತ್ತು ದೈಹಿಕ ಬದಲಾವಣೆ ಬಗ್ಗೆ ಸಂಶೋಧನೆ ಆರಂಭಿಸಿದಾಗ, ಈ ಬದಲಾವಣೆ ಸಾಮಾನ್ಯ ಎಂದು ಅರಿತುಕೊಂಡೆ. ಜೊತೆಗೆ ನನ್ನನ್ನು ನಾನು ಒಪ್ಪಿಕೊಂಡೆ” ಎಂದು ಭಜನಪುರದ ಪಿಯೂಷ್ ಅಗರ್ವಾಲ್ (18)  ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್