
- ಕರ್ನಾಟಕದ ಭಟ್ಕಳ, ತುಮಕೂರಿನಲ್ಲಿ ಎನ್ಐಎ ಶೋಧ
- ಬಿಹಾರ, ಗುಜರಾತ್ ಸೇರಿ ಆರು ರಾಜ್ಯಗಳಲ್ಲಿ ಪರಿಶೀಲನೆ
ಐಸಿಸ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಭಾನುವಾರ ಕರ್ನಾಟಕ ಸೇರಿ ಆರು ರಾಜ್ಯಗಳ 13 ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ನಡೆಸುತ್ತಿದೆ.
ಮಧ್ಯಪ್ರದೇಶ, ಗುಜರಾತ್, ಬಿಹಾರ, ಕರ್ನಾಟಕ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದ 13 ಭಾಗಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ.
ತನಿಖಾ ಸಂಸ್ಥೆಯ ಮಧ್ಯಪ್ರದೇಶದ ಭೋಪಾಲ್, ರೈಸನ್ ಜಿಲ್ಲೆಗಳಲ್ಲಿ, ಗುಜರಾತ್ನ ಭರೂಚ್, ಸೂರತ್, ನವಸಾರಿ ಹಾಗೂ ಅಹಮದಾಬಾದ್ ಜಿಲ್ಲೆಗಳಲ್ಲಿ, ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ, ಕರ್ನಾಟಕದ ಭಟ್ಕಳ ಮತ್ತು ತುಮಕೂರು, ಮಹಾರಾಷ್ಟ್ರದ ಕೊಲ್ಲಾಪುರ ಮತ್ತು ನಾಂದೇಡ್ ಜಿಲ್ಲೆಗಳು ಹಾಗೂ ಉತ್ತರ ಪ್ರದೇಶದ ದೇವಬಂದ್ ಜಿಲ್ಲೆಗಳಲ್ಲಿ ಶೋಧ ನಡೆಸುತ್ತಿದೆ.
ಈ ಸುದ್ದಿ ಓದಿದ್ದೀರಾ?: ರಾಜಸ್ಥಾನ | ಅಕ್ರಮ ಸಂಬಂಧ ಶಂಕೆ; ಪತ್ನಿಯನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿದ ಪತಿ
ಜೂನ್ 25 ರಂದು ಎನ್ಐಎ ಐಪಿಸಿಯ ಸೆಕ್ಷನ್ 153 ಎ ಮತ್ತು 153 ಬಿ ಹಾಗೂ ಸೆಕ್ಷನ್ 18, 18 ಬಿ, 38, 39 ಮತ್ತು 40ರ ಯುಎ (ಪಿ) ಕಾಯಿದೆ ಅಡಿಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಶೋಧ ಕಾರ್ಯಾಚರಣೆ ವೇಳೆ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.