ಪಿಎಫ್‌ಐ ಕಚೇರಿ ಮೇಲೆ ಎನ್‌ಐಎ ದಾಳಿ: ಕರ್ನಾಟಕದ 20 ಮಂದಿ ಸೇರಿ 100ಕ್ಕೂ ಹೆಚ್ಚು ಬಂಧನ

Accational Photo
  • ಉತ್ತರ ಪ್ರದೇಶ, ಕೇರಳ, ಆಂಧ್ರಪ್ರದೇಶ ಸೇರಿದಂತೆ ಹತ್ತು ರಾಜ್ಯಗಳಲ್ಲಿ ದಾಳಿ
  • ದಾಳಿಯಲ್ಲಿ 100ಕ್ಕೂ ಹೆಚ್ಚು ಪಿಎಫ್‌ಐ ಮುಖಂಡರು, ಕಾರ್ಯಕರ್ತರ ಬಂಧನ

ಗುರುವಾರ(ಸೆ.22) ಬೆಳಿಗ್ಗೆ ಹಲವು ರಾಜ್ಯಗಳ ಪಾಪುಲರ್ ಫ್ರಂಟ್‌ ಆಫ್‌ ಇಂಡಿಯಾದ(ಪಿಎಫ್‌ಐ) ಕಚೇರಿಗಳು ಹಾಗೂ ಸಂಘಟನೆಯ ಸದಸ್ಯರ ನಿವಾಸಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಾಳಿ ನಡೆಸಿದೆ.‌

ಭಯೋತ್ಪಾದನಾ ನಿಗ್ರಹ ಸಂಸ್ಥೆಯಾದ ಎನ್‌ಐಎ ದಾಳಿಯಲ್ಲಿ ಕರ್ನಾಟಕದ 20 ಮಂದಿ, ಕೇರಳದ 22 ಮಂದಿ, ತಮಿಳುನಾಡಿನ 10 ಮಂದಿ, ಉತ್ತರಪ್ರದೇಶದ 8, ಆಂಧ್ರಪ್ರದೇಶದ 5, ಅಸ್ಸಾಂನ 9, ದೆಹಲಿಯ 3, ಮಧ್ಯಪ್ರದೇಶದ 4, ಪಾಂಡಿಚೆರಿಯ 3 ಮತ್ತು ರಾಜಸ್ತಾನದ 2 ಮಂದಿ ಸೇರಿದಂತೆ 100ಕ್ಕೂ ಹೆಚ್ಚು ಪಿಎಫ್‌ಐ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಎನ್‌ಐಎ, ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ರಾಜ್ಯ ಪೊಲೀಸರು ಜಂಟಿಯಾಗಿ ಈ ದಾಳಿ ನಡೆಸಿದ್ದಾರೆ.

ಭಯೋತ್ಪಾದಕ ಗುಂಪುಗಳಿಗೆ ನಿಧಿ ಸಂಗ್ರಹ, ಭಯೋತ್ಪಾದಕ ತರಬೇತಿ ಶಿಬಿರ ಆಯೋಜಿಸುವುದು ಮತ್ತಿತರ ವಿಧ್ವಂಸಕ ಕೃತ್ಯಗಳಲ್ಲಿ ಸಕ್ರಿಯವಾಗಿರುವವರ ಪತ್ತೆಗಾಗಿ ಈ ದಾಳಿ ನಡೆಸಲಾಗಿದ್ದು ಅನೇಕ ಕಡೆ ಇನ್ನೂ ಶೋಧ ಮುಂದುವರೆದಿದೆ. ಎನ್‌ ಐಎ ಅಧಿಕಾರಿಗಳು ನಡೆಸಿದ ಇದುವರೆಗಿನ ದೊಡ್ಡ ದಾಳಿ ಇದಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.   

ಪಿಎಫ್‌ಐನ ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಮುಖಂಡರ ನಿವಾಸಗಳ ಮೇಲೆ ದಾಳಿ ನಡೆಯುತ್ತಿದೆ. ರಾಜ್ಯ ಸಮಿತಿ ಕಚೇರಿ ಮೇಲೂ ದಾಳಿ ನಡೆಸಲಾಗುತ್ತಿದೆ. 

ಈ ಸುದ್ದಿ ಓದಿದ್ದೀರಾ? ಪಿಜಿ- ನೀಟ್ ಕೌನ್ಸಲಿಂಗ್‌ಗೆ ಚಾಲನೆ; ಆನ್‌ಲೈನ್ ಅರ್ಜಿಗೆ ಸೆಪ್ಟೆಂಬರ್ 23 ಕೊನೆ ದಿನ

ಪಿಎಫ್‌ಐ ಸಂಘಟನೆ ಈ ದಾಳಿಯನ್ನು ಖಂಡಿಸಿದೆ. “ಭಿನ್ನಾಭಿಪ್ರಾಯದ ಧ್ವನಿಗಳನ್ನು ಹತ್ತಿಕ್ಕಲು ಬಲಪಂಥೀಯ ಆಡಳಿತ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ವಿರುದ್ಧ ನಾವು ಪ್ರತಿಭಟಿಸುತ್ತೇವೆ” ಎಂದು ಪಿಎಫ್‌ಐ ಹೇಳಿಕೆ ನೀಡಿದೆ. 

ತೆಲಂಗಾಣ ಮತ್ತು ಆಂಧ್ರಪ್ರದೇಶದ 38 ಸ್ಥಳಗಳಲ್ಲಿ ಮಂಗಳವಾರ (ಸೆ.20) ಶೋಧ ನಡೆಸಿದ ನಂತರ ಎನ್‌ಐಎ ತನಿಖಾ ಸಂಸ್ಥೆಯು ನಾಲ್ವರು ಪಿಎಫ್‌ಐ ಕಾರ್ಯಕರ್ತರ ಮೇಲೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180