ಸಂತ್ರಸ್ತೆಯೊಂದಿಗೆ ವಿವಾಹ | 2 ವಾರಗಳ ಜಾಮೀನು ಮಂಜೂರು; ಅತ್ಯಾಚಾರದ ಸರಳ ಪ್ರಕರಣವಲ್ಲ ಎಂದ ಹೈಕೋರ್ಟ್‌

  • ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ ಆರೋಪಿ
  • ಇದು ಅತ್ಯಾಚಾರದ ಸರಳವಾದ ಪ್ರಕರಣವಲ್ಲ ಎಂದ ನ್ಯಾಯಮೂರ್ತಿಗಳು

ಸಂತ್ರಸ್ತೆಯನ್ನು ಮದುವೆಯಾಗುವ ಉದ್ದೇಶದಿಂದ ಅತ್ಯಾಚಾರ ಆರೋಪಿಗೆ ಉತ್ತರಾಖಂಡ ಹೈಕೋರ್ಟ್‌ ಎರಡು ವಾರಗಳ ಅವಧಿಗೆ ಅಲ್ಪಾವಧಿ ಜಾಮೀನು ನೀಡಿದೆ.

ಆರೋಪಿ, ಅರ್ಜಿದಾರರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವೀಂದ್ರ ಮೈಥಾನಿ ಅವರಿದ್ದ ಏಕ ಪೀಠವು, ಇದು ಅತ್ಯಾಚಾರದ ಸರಳವಾದ ಪ್ರಕರಣವಲ್ಲ. ಈ ಪ್ರಕರಣದಲ್ಲಿ ಇಬ್ಬರೂ ಒಮ್ಮತದಿಂದ ದೈಹಿಕ ಸಂಪರ್ಕ ಬೆಳೆಸಿದ್ದಾರೆ ಎಂದಿದ್ದಾರೆ.

Eedina App

“ಈ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಲಯವು ಆರೋಪಿಯ ವಿವಾಹವನ್ನು ಪ್ರೋತ್ಸಾಹಿಸದಿರಬಹುದು. ಆದರೆ, ಇದು ಅತ್ಯಾಚಾರ ಪ್ರಕರಣವಲ್ಲ. ಎಫ್‌ಐಆರ್‌ ಪ್ರಕಾರ, ಸಂತ್ರಸ್ತೆ ಮತ್ತು ಆರೋಪಿಗೆ ಮದುವೆ ನಿಶ್ಚಯವಾಗಿತ್ತು. ಇಬ್ಬರೂ ಸಮ್ಮತಿಯ ಮೂಲಕವೇ ದೈಹಿಕ ಸಂಪರ್ಕ ಬೆಳೆಸಿದ್ದರು. ಆದರೆ, ಸ್ವಲ್ಪ ಕಾಲದ ನಂತರ ಆರೋಪಿಯು ಸಂತ್ರಸ್ತೆಯನ್ನು ಮುದುವೆಯಾಗಲು ನಿರಾಕರಿಸಿದ್ದಾನೆ” ಎಂದು ಪ್ರಕರಣದ ಸಾಕ್ಷಿ ಮತ್ತು ಸಂದರ್ಭಗಳ ಬಗ್ಗೆ ನ್ಯಾಯಾಲಯವು ಗಮನಿಸಿತು.

ಈ ಸುದ್ದಿ ಓದಿದ್ದೀರಾ?: ಸುರತ್ಕಲ್ ಟೋಲ್‌ಗೇಟ್ | ಬಾಯಿ ಮಾತು, ಟ್ವೀಟ್, ಪೋಸ್ಟ್‌ಗಳನ್ನು ನಂಬಲ್ಲ, 'ಆರ್ಡರ್' ತೋರಿಸಿ: ಸಂಸದರಿಗೆ ಹೋರಾಟಗಾರರ ಖಡಕ್ ಸಂದೇಶ

AV Eye Hospital ad

“ಪ್ರಸ್ತುತ ಅರ್ಜಿದಾರ ಸಂತ್ರಸ್ತೆಯನ್ನು ಮದುವೆಯಾಗಲು ನಿರ್ಧರಿಸಿದ್ದಾನೆ. ಇಬ್ಬರೂ ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ದರಿಂದ, ಈ ಪ್ರಕರಣದ ಸತ್ಯ ಮತ್ತು ಸಂದರ್ಭಗಳನ್ನು ಪರಿಗಣಿಸಿದ ನ್ಯಾಯಾಲಯವು ಅರ್ಜಿದಾರರಿಗೆ 2 ವಾರಗಳ ಅವಧಿಗೆ ಅಲ್ಪಾವಧಿಯ ಜಾಮೀನು ನೀಡಿದೆ” ಎಂದು ಹೈಕೋರ್ಟ್ ಹೇಳಿದೆ.

ಸಂತ್ರಸ್ತೆ ನೀಡಿದ್ದ ದೂರಿನನ್ವಯ ಆರೋಪಿ ಸುರ್ಜಿತ್‌ ಕುಮಾರ್‌ ವಿರುದ್ಧ ಉತ್ತರಾಖಂಡದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 376ರ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಆರೋಪಿಯು ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು.

ಪ್ರಸ್ತುತ ಜಾಮೀನು ಕೋರಿ ಆರೋಪಿಯು ಉತ್ತರಾಖಂಡ ಹೈಕೋರ್ಟ್‌ ಮೆಟ್ಟಿಲೇರಿದ್ದ.  ತಾನು ಮತ್ತು ಸಂತ್ರಸ್ತೆ ವಿವಾಹವಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಪಾವಧಿ ಜಾಮೀನು ನೀಡಬೇಕೆಂದು ಮನವಿ ಮಾಡಿದ್ದ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app