ತಾಂತ್ರಿಕ ದೋಷದಿಂದ ಸಿಯುಇಟಿ ಪರೀಕ್ಷೆ ರದ್ದು ಮಾಡಿದ ಎನ್‌ಟಿಎ

  • ಪದವಿಪೂರ್ವ ಪ್ರವೇಶಕ್ಕಾಗಿ ನಡೆಯುವ ಸಿಯುಇಟಿ ಪರೀಕ್ಷೆ 
  • ನಿಗದಿಯಾಗಿರುವ ಪರೀಕ್ಷೆಗೆ ಪ್ರವೇಶ ಪಟ್ಟಿ ಸಿಗದೆ ಪರದಾಡುತ್ತಿರುವ ವಿದ್ಯಾರ್ಥಿಗಳು

ತಾಂತ್ರಿಕ ದೋಷಗಳಿಂದಾಗಿ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ಕೇಂದ್ರೀಯ ವಿಶ್ವವಿದ್ಯಾಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ)ಯ ಎರಡನೇ ಹಂತದ ಮೊದಲ ದಿನದ ಪರೀಕ್ಷೆ ಜುಲೈ 4ರಂದು ರದ್ದಾಗಿದೆ. ತಾಂತ್ರಿಕ ದೋಷದಿಂದಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನಾನುಕೂಲವಾಗಿದೆ. ಹಲವಾರು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ರದ್ದುಗೊಳಿಸುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯನ್ನು ಒತ್ತಾಯಿಸಿದೆ.

"ಮೊದಲ ಪಾಳಿಯ 20 ಕೇಂದ್ರಗಳಲ್ಲಿ ಮತ್ತು ಎರಡನೇ ಪಾಳಿಯ 30 ಕೇಂದ್ರಗಳಲ್ಲಿ ಪರೀಕ್ಷೆ ಮುಂದೂಡಲಾಗಿದೆ. ಈ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ ಹೊಸ ಪರೀಕ್ಷಾ ದಿನಾಂಕ ಘೋಷಣೆ ಮಾಡಿಲ್ಲ. ಜೊತೆಗೆ ಮುಂದಿನ ಪರೀಕ್ಷಾ ದಿನಾಂಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 'ವೆಬ್‌ಸೈಟ್‌'ಗೆ ಭೇಟಿ ನೀಡಬೇಕು" ಎಂದು " ಎಂದು ಎನ್‌ಟಿಎ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಕೆಲವು ಕೇಂದ್ರಗಳಲ್ಲಿನ ತಾಂತ್ರಿಕ ಸಮಸ್ಯೆ ಬಗ್ಗೆ ತಿಳಿದ ಎನ್‌ಟಿಎ, “ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ, ವೀಕ್ಷಕರು ಮತ್ತು ನಗರ ಸಮನ್ವಯಾಧಿಕಾರಿಗಳಿಂದ ವರದಿಗಳನ್ನು ಕೇಳಲಾಗಿದೆ. ಅವರ ಶಿಫಾರಸಿನ ಆಧಾರದ ಮೇಲೆ, ಪರೀಕ್ಷೆ ಮುಂದೂಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಹೇಳಿದೆ. 

ಈ ಸುದ್ದಿ ಓದಿದ್ದೀರಾ? ಬಿಸಿಯೂಟ ಯೋಜನೆಯಲ್ಲಿ ರಾಗಿ ಮುದ್ದೆ ಮತ್ತು ಜೋಳದ ರೊಟ್ಟಿ ಸೇರ್ಪಡೆ: ಶಿಕ್ಷಣ ಇಲಾಖೆ

ಭಾನುವಾರ ನಿಗದಿಯಾಗಿರುವ ಪರೀಕ್ಷೆಗೆ ಇನ್ನೂ ಪರೀಕ್ಷಾ ಕೇಂದ್ರದ ವಿವರವಾಗಲಿ, ಪ್ರವೇಶ ಪತ್ರಗಳಾಗಿ ದೊರೆತಿಲ್ಲ ಎಂದು ಅನೇಕ ವಿದ್ಯಾರ್ಥಿಗಳು ಸಾಮಾಜಿಕ ಮಧ್ಯಮಗಳಲ್ಲಿ ಆರೋಪಿಸಿದ್ದಾರೆ.

“ನಾಳೆ ನನ್ನ ಪರೀಕ್ಷೆ ಇದೆ. ಇಲ್ಲಿಯವರೆಗೆ ನನ್ನ ಪರೀಕ್ಷಾ ಕೇಂದ್ರ ಎಲ್ಲಿದೆ ಎಂದು ನನಗೆ ತಿಳಿದಿಲ್ಲ. ನಾನು ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿರುವೆ. ಅಲ್ಲಿಂದ ಎಲ್ಲಿಗೆ ಹೋಗಲೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ. ನಾನು ಪರೀಕ್ಷೆಗೆ ಹಾಜರಾಗಲು ಸಮಸ್ಯೆಯಾದರೆ, ಅದಕ್ಕೆ ಯಾರು ಹೊಣೆ” ಎಂದು ಶಿವಕುಮಾರ್ ಎನ್ನುವ ವಿದ್ಯಾರ್ಥಿ ಟ್ವೀಟ್ ಮಾಡಿದ್ದಾರೆ.

ಪ್ರವೇಶ ಪತ್ರ ಮತ್ತು ಪರೀಕ್ಷಾ ಕೇಂದ್ರಗಳ ಮಾಹಿತಿ ತಿಳಿಸುವಲ್ಲಿ ನಿರಂತರ ಸಮಸ್ಯೆಯಾಗುತ್ತಿರುವ ನಡುವೆ, ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ)-ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್ಇಟಿ) ಪರೀಕ್ಷೆಯನ್ನು ಸಹ ಎನ್‌ಟಿಎ ನಡೆಸುತ್ತಿದೆ.

ಇತ್ತೀಚೆಗೆ ಪದೇ ಪದೆ ಪರೀಕ್ಷೆ ರದ್ದು ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಟ್ವೀಟ್ ಮಾಡಿ, “ಪರೀಕ್ಷೆಗಳು ರದ್ದಾಗುತ್ತಲೇ ಇದ್ದು, ಪರೀಕ್ಷೆಗಳು ಸಂಪೂರ್ಣ ದುರುಪಯೋಗವಾಗಿವೆ. ಬಿಜೆಪಿ ವಿದ್ಯಾರ್ಥಿಗಳ ಬದುಕಿನೊಂದಿಗೆ ಆಟವಾಡುತ್ತಿದೆ. ಸಿಯುಇಟಿ ಸಂಪೂರ್ಣ ದುರಂತವಾಗಿ ಬದಲಾಗುತ್ತಿದೆ” ಎಂದು ಹೇಳಿರುವ ಬಗ್ಗೆ ‘ದಿ ಹಿಂದೂ’ ವರದಿ ಮಾಡಿದೆ.

"ಎನ್‌ಟಿಎ ತಕ್ಷಣವೇ ಇಂದು ರಾತ್ರಿ ಪ್ರವೇಶ ಪತ್ರಗಳನ್ನು ಅಪ್ಲೋಡ್‌ ಮಾಡಬಹುದು" ಎಂದು ಶಿಕ್ಷಣ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180