ಒಂದು ನಿಮಿಷದ ಓದು | ಆಗಸ್ಟ್ 15ರ ಒಳಗೆ ಬಿಬಿಎಂಪಿ ಶಾಲೆಗಳಿಗೆ ಸಮವಸ್ತ್ರ ವಿತರಣೆ

BBMP schools

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ಸಮವಸ್ತ್ರ ವಿತರಿಸುವ ಕಾರ್ಯವನ್ನು ಆರಂಭಿಸಿದೆ.

ಕೋವಿಡ್ ಕಾರಣದಿಂದಾಗಿ ಶಾಲಾ-ಕಾಲೇಜುಗಳು ತೆರೆಯದ ಕಾರಣ ಸಮವಸ್ತ್ರ ಹಂಚಿಕೆ ಸ್ಥಗಿತಗೊಂಡಿತ್ತು. ಆದರೆ ಪ್ರಸ್ತುತ ವರ್ಷ ಬಿಬಿಎಂಪಿಯ 50 ನರ್ಸರಿ ಶಾಲೆಗಳಿಗೆ ಸಮವಸ್ತ್ರ ನೀಡುವ ಮೂಲಕ ಈ ಯೋಜನೆಯನ್ನು ಪುನಃ ಪ್ರಾರಂಭಿಸಲಾಗಿದೆ. ಇನ್ನುಳಿದ ವಿದ್ಯಾಸಂಸ್ಥೆಗಳಿಗೆ ಶೀಘ್ರದಲ್ಲೇ ಸಮವಸ್ತ್ರ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಿದ್ಯಾಸಂಸ್ಥೆಗಳಲ್ಲಿ, 93 ನರ್ಸರಿ ಶಾಲೆಗಳ 4556 ವಿದ್ಯಾರ್ಥಿಗಳು, 16 ಪ್ರಾಥಮಿಕ ಶಾಲೆಗಳ 3900 ವಿದ್ಯಾರ್ಥಿಗಳು, 33 ಪ್ರೌಢಶಾಲೆಗಳ 7175 ವಿದ್ಯಾರ್ಥಿಗಳು ಮತ್ತು ಪದವಿ ಪೂರ್ವ ಕಾಲೇಜುಗಳ 6700 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಎರಡು ಪದವಿ ಕಾಲೇಜುಗಳು ಮಾತ್ರ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿವೆ.

ಈ ಸುದ್ದಿ ಓದಿದ್ದೀರಾ?: ಆಪ್ತರ ಹೆಸರಿನಲ್ಲಿ ಅಮೃತ್‌ ಪೌಲ್‌ ಬೇನಾಮಿ ಆಸ್ತಿ ಸಂಪಾದನೆ ಆರೋಪ: ಸಿಐಡಿ ದಾಳಿ

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಸಮವಸ್ತ್ರದ ಗುತ್ತಿಗೆ ನೀಡಿದ್ದು, 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸ್ವೆಟರ್ ನೀಡುವ ಯೋಜನೆಗೆ 2 ಕೋಟಿ ರೂ. ಮೀಸಲಿಡಲಾಗಿದೆ. ಒಟ್ಟು ಬಿಬಿಎಂಪಿ ವ್ಯಾಪ್ತಿಗೆ ಬರುವ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು 23,275ಕ್ಕೂ ಹೆಚ್ಚಾಗಿದ್ದು, ಆಗಸ್ಟ್ 15ರ ಒಳಗೆ ಎಲ್ಲರಿಗೂ ಸಮವಸ್ತ್ರ ತಲುಪುವಂತೆ ಮಾಡುವುದಾಗಿ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್