ಒಂದು ನಿಮಿಷದ ಓದು | ಅಗ್ನಿವೀರರ ನಿವೃತ್ತಿ ವಯಸ್ಸು 65ಕ್ಕೆ ವಿಸ್ತರಿಸಿ ಎಂದ ಮಮತಾ ಬ್ಯಾನರ್ಜಿ

ಅಗ್ನಿಪಥ್ ಯೋಜನೆಯಡಿ ನೇಮಕಗೊಂಡ ಸೈನಿಕರ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ವಿಸ್ತರಿಸುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರವನ್ನು ಒತ್ತಾಯಿಸಿದ್ದಾರೆ. ನಾಲ್ಕು ವರ್ಷಗಳ ಅವಧಿಯ ಕೊನೆಯಲ್ಲಿ ನಿವೃತ್ತಿಯಾದ ಸೈನಿಕರಿಗೆ ಅಭ್ರದತೆ ಕಾಡುತ್ತದೆ ಎಂದು ಹೇಳಿದ್ದಾರೆ.

2024ರ ಲೋಕಸಭೆ ಚುನಾವಣೆ ಗಮನದಲ್ಲಿರಿಸಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ಸೇನಾ ನೇಮಕಾತಿ ಯೋಜನೆ ಪ್ರಾರಂಭಿಸಿದೆ. ಬಿಜೆಪಿಗಿಂತ ಭಿನ್ನವಾಗಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವುದು ನನ್ನ ಧ್ಯೇಯ. ಅವರು ಜನರಿಗೆ ನಾಲ್ಕು ತಿಂಗಳು ತರಬೇತಿ ನೀಡುತ್ತಾರೆ ಮತ್ತು ನಾಲ್ಕು ವರ್ಷಗಳವರೆಗೆ ಮಾತ್ರ ನೇಮಿಸಿಕೊಳ್ಳುತ್ತಾರೆ. ನಾಲ್ಕು ವರ್ಷಗಳ ನಂತರ  ಸೈನಿಕರು ಏನು ಮಾಡಬೇಕು? ಅವರ ಭವಿಷ್ಯದ ಗತಿ ಏನು? ಈ ಯೋಜನೆ ಅಭದ್ರತೆಯಿಂದ ಕೂಡಿದೆ. ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ವಿಸ್ತರಿಸಬೇಕು” ಎಂದು ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ಅಗ್ನಿಪಥ್ ಯೋಜನೆಯು ಸಶಸ್ತ್ರ ಪಡೆಗೆ ಯುವಕರನ್ನು ಕೇವಲ ನಾಲ್ಕು ವರ್ಷಗಳವರೆಗೆ ನೇಮಕಾತಿ ಮಾಡಿಕೊಳ್ಳುತ್ತದೆ ಮತ್ತು ಅವರಲ್ಲಿ ಶೇ. 25ರಷ್ಟು ಸೈನಿಕರನ್ನು ಮಾತ್ರ ಉಳಿಸಿಕೊಳ್ಳುತ್ತದೆ. ಅವರನ್ನು ಮುಂದಿನ 15 ವರ್ಷಗಳವರೆಗೆ ಉಳಿಸಿಕೊಳ್ಳುವ ಅವಕಾಶ ಕಲ್ಪಿಸುತ್ತದೆ.

ಬಿಜೆಪಿ ತನ್ನದೇ ಆದ 'ಸಶಸ್ತ್ರ ಕೇಡರ್ ಬೇಸ್' ನಿರ್ಮಿಸಲು ಅಗ್ನಿಪಥ್ ಯೋಜನೆಯನ್ನು ಬಳಸಿಕೊಳ್ಳುತ್ತದೆ ಎಂದು ಬ್ಯಾನರ್ಜಿ ಈ ಹಿಂದೆ ಹೇಳಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್