ಒಂದು ನಿಮಿಷದ ಓದು| ಎಂ ಬಿ ಪಾಟೀಲ್ ಮನೆ‌ಯಲ್ಲಿ ಕಳವು ಮಾಡಿದ್ದ ಆರೋಪಿ ಒಡಿಶಾದಲ್ಲಿ ಬಂಧನ

  • ಡಾ ಎಂ ಬಿ ಪಾಟೀಲರ ಮನೆಯಲ್ಲಿ ಕೆಲಸಕ್ಕಿದ್ದವನಿಂದಲೇ ಕೃತ್ಯ
  • ಬಂಧಿತನಿಂದ 70 ಸಾವಿರ ನಗದು ಸೇರಿ ಬೆಲೆಬಾಳುವ ವಸ್ತು ವಶಕ್ಕೆ

ಮಾಜಿ ಸಚಿವ ಡಾ. ಎಂ ಬಿ ಪಾಟೀಲ ಅವರ ನಿವಾಸದಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಒಡಿಶಾದಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿಯನ್ನು ವಶಕ್ಕೆ ಪಡೆದಿರುವ ಬೆಂಗಳೂರಿನ ಸದಾಶಿವನಗರ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಡಾ ಎಂ ಬಿ ಪಾಟೀಲರ ಮನೆಯಲ್ಲೇ ಕೆಲಸ ಮಾಡುತ್ತಿದ್ದ ಜಯಂತ್‌ ದಾಸ್‌ ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 70 ಸಾವಿರ ರೂಪಾಯಿ ನಗದು, 50 ಸಾವಿರ ರೂಪಾಯಿ ಮೌಲ್ಯದ ಕೈ ಗಡಿಯಾರ, 10 ಸಾವಿರ ರೂಪಾಯಿ ಮೌಲ್ಯದ ಮೊಬೈಲ್‌ ವಶಕ್ಕೆ ಪಡೆಯಲಾಗಿದೆ. 

ಆರೋಪಿ ಜಯಂತ್‌, ಕಳೆದ ಐದು ವರ್ಷಗಳಿಂದ ಎಂ ಬಿ ಪಾಟೀಲ್‌ ಅವರ ಮನೆಯಲ್ಲಿ ಕೆಲಸಕ್ಕೆ ಇದ್ದ ಎನ್ನಲಾಗಿದೆ. 

ಈ ಸುದ್ದಿ ಓದಿದ್ದೀರಾ?: ಲಂಚ ಪ್ರಕರಣ| ಜಿಲ್ಲಾಧಿಕಾರಿ ಮಂಜುನಾಥ್‌ ಜಾಮೀನು ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಒಂದೂವರೆ ತಿಂಗಳ ಹಿಂದೆ ಮನೆಯ ಮಲಗುವ ಕೋಣೆಯಲ್ಲಿದ್ದ ವಿವಿಧ ಕಂಪನಿಯ 6 ವಾಚ್‌ಗಳು, ನೋಕಿಯಾ ಮೊಬೈಲ್‌ ಹಾಗೂ ವಿದೇಶಿ ಕರೆನ್ಸಿ ಕಳವಾಗಿತ್ತು. ಈ ಕುರಿತು ಎಂ ಬಿ ಪಾಟೀಲ್‌ ಅವರ ಮನೆಯ ಸಿಬ್ಬಂದಿ ದೂರು ದಾಖಲಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್