ವಿಮಾನದಲ್ಲಿ ಪ್ರಯಾಣಿಕರ ಅಶಿಸ್ತಿನ ವರ್ತನೆ; ಏರ್‌ ಇಂಡಿಯಾಗೆ ಮತ್ತೆ ₹10 ಲಕ್ಷ ದಂಡ

Tata Group to merge Air India with Vistara by 2024 as part of key deal
  • ಶೌಚಾಲಯದಲ್ಲಿ ಧೂಮಪಾನ, ಸಹ ಪ್ರಯಾಣಕರೊಬ್ಬರ ಮೇಲೆ ಮೂತ್ರ ಮಾಡಿದ ಪ್ರಕರಣ
  • ಮೂತ್ರ ವಿಸರ್ಜನೆ ಮಾಡಿದ ಪ್ರಕರಣದಲ್ಲಿ ಕಳೆದ ವಾರ ಏರ್‌ ಇಂಡಿಯಾಗೆ ₹30 ಲಕ್ಷ ದಂಡ 

ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ಯಾರಿಸ್- ನವದೆಹಲಿ ವಿಮಾನದಲ್ಲಿ ನಡೆದಿದ್ದ  ಪ್ರಯಾಣಿಕರ ಎರಡು ಅಶಿಸ್ತಿನ ವರ್ತನೆಗಳನ್ನು ವರದಿ ಮಾಡದ ಕಾರಣಕ್ಕಾಗಿ ಏರ್ ಇಂಡಿಯಾಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮಂಗಳವಾರ (ಜನವರಿ 24) ₹10 ಲಕ್ಷ ದಂಡ ವಿಧಿಸಿದೆ.

ವಿಮಾನಯಾನ ಸಂಸ್ಥೆಗಳ ನಿಯಂತ್ರಕ ಡಿಜಿಸಿಎ ಕಳೆದ ಒಂದು ವಾರದೊಳಗೆ ಪ್ರಯಾಣಿಕರ ಅಶಿಸ್ತಿನ ವರ್ತನೆಗೆ ಸಂಬಂಧಿಸಿದಂತೆ ಏರ್ ಇಂಡಿಯಾ ವಿರುದ್ಧ ಎರಡನೆ ಬಾರಿ ಕ್ರಮ ಕೈಗೊಂಡಿದೆ.

ಡಿಸೆಂಬರ್ 6, 2022ರಂದು ಪ್ಯಾರಿಸಿನಿಂದ ನವದೆಹಲಿಗೆ ಹೊರಟಿದ್ದ ಎಐ- 142 ವಿಮಾನದಲ್ಲಿ ಪ್ರಯಾಣಿಕರ ಅನುಚಿತ ವರ್ತನೆಯ ಘಟನೆಗಳು ಸಂಭವಿಸಿವೆ ಎಂದು ಡಿಜಿಸಿಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ? ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಗೋಹತ್ಯಾ ನಿಷೇಧವೇ ಪರಿಹಾರ : ಗುಜರಾತ್ ಸೆಷನ್ಸ್ ನ್ಯಾಯಾಧೀಶ

ಸಹ ಮಹಿಳಾ ಪ್ರಯಾಣಿಕರ ಮೇಲೆ ಪ್ರಯಾಣಿಕನೊಬ್ಬ ಮೂತ್ರ ವಿಸರ್ಜನೆ ಮಾಡಿದ್ದು ಹಾಗೂ ಕುಡುಕ ಪ್ರಯಾಣಿಕನೊಬ್ಬ ಶೌಚಾಲಯದಲ್ಲಿ ಧೂಮಪಾನ ಮಾಡಿದ್ದ ಘಟನೆಗಳು ಸಂಭವಿಸಿದ್ದವು ಎಂದು ಡಿಜಿಸಿಎ ಹೇಳಿದೆ.

ಈ ಎರಡು ಘಟನೆಗಳನ್ನು ಡಿಜಿಸಿಎಗೆ ವರದಿ ಮಾಡದ ಕಾರಣಕ್ಕಾಗಿ ಏರ್ ಇಂಡಿಯಾಗೆ ₹10 ಲಕ್ಷ ದಂಡ ವಿಧಿಸುವ ಮೂಲಕ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಕಳೆದ ಶುಕ್ರವಾರ ಮೂತ್ರ ವಿಸರ್ಜನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಸಿಎ ಏರ್‌ ಇಂಡಿಯಾಗೆ ₹30 ಲಕ್ಷ ದಂಡ ವಿಧಿಸಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app