10 ಸಾವಿರ ಮೇಲ್ಪಟ್ಟು ಎಟಿಎಂನಿಂದ ಹಣ ಪಡೆಯಲು ಒಟಿಪಿ ಕಡ್ಡಾಯಗೊಳಿಸಲು ಮುಂದಾದ ಎಸ್‌ಬಿಐ

  • ಎಟಿಎಂನಿಂದ ಹಣ ತೆಗೆಯಲು ಒಟಿಪಿ ಕಡ್ಡಾಯ
  • ಗ್ರಾಹಕರ ಹಿತದೃಷ್ಟಿಗೆ ಎಸ್‌ಬಿಐನಿಂದ ಹೊಸ ಸೇವೆ

ಎಟಿಎಂನಲ್ಲಿ ನಗದು ಪಡೆಯುವಲ್ಲಿ ಆಗುವ ವಂಚನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, ಒನ್‌ ಟೈಮ್‌ ಪಾಸ್‌ವರ್ಡ್‌ (ಒಟಿಪಿ) ಹಾಕಿದ ನಂತರ ಎಟಿಎಂನಿಂದ ಹಣ ಹಿಂಪಡೆಯುವ ಸೇವೆಯನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಆರಂಭಿಸಿದೆ. 

10 ಸಾವಿರ ಮತ್ತು ಅದಕ್ಕಿಂತಹ ಹೆಚ್ಚು ಹಣ ಹಿಂಪಡೆಯುವವರು ಇನ್ನು ಮುಂದೆ ಕಡ್ಡಾಯವಾಗಿ ಒಟಿಪಿ ನಮೂದಿಸಬೇಕು.

ಎಸ್‌ಬಿಐ ಪ್ರಕಾರ, ಗ್ರಾಹಕರು ಎಟಿಎಂಗಳಲ್ಲಿ ನಗದು ಹಿಂಪಡೆಯುವ ಸಮಯದಲ್ಲಿ ಒಟಿಪಿ ನಮೂದಿಸಬೇಕಾಗುತ್ತದೆ. ಇದು ಅನಧಿಕೃತ ವಹಿವಾಟುಗಳ ವಿರುದ್ಧ ರಕ್ಷಣೆಗಾಗಿ ಬಳಸುತ್ತಿರುವ ಕಾರ್ಯತಂತ್ರ.

ಈ ಸುದ್ದಿ ಓದಿದ್ದೀರಾ?: ಭಯೋತ್ಪಾದಕ ಕೃತ್ಯಕ್ಕೆ ಪ್ರೋತ್ಸಾಹ ಆರೋಪ; ನಾಲ್ವರನ್ನು ಗಲ್ಲಿಗೇರಿಸಿದ ಮ್ಯಾನ್ಮಾರ್ ನ್ಯಾಯಾಲಯ

ಗ್ರಾಹಕರು ಎಟಿಎಂನಿಂದ ಹಣ ಹಿಂಪಡೆಯುವಾಗ ಅವರ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಸಿಸ್ಟಮ್‌ ಜೆನರೇಟ್‌ ಮಾಡುವ ನಾಲ್ಕು ಅಂಕಿಯ ಒಟಿಪಿ ಕಳುಹಿಸಲಾಗುತ್ತದೆ. ಇದು ಕೇವಲ ಒಂದು ವಹಿವಾಟಿಗೆ ಮಾನ್ಯವಾಗಿರುತ್ತದೆ.

ಎಸ್‌ಬಿಐ ರೀತಿಯಲ್ಲಿ ಇನ್ನು ಹಲವು ಬ್ಯಾಂಕ್‌ಗಳು ಎಟಿಎಂನಿಂದ ನಗದು ಹಿಂಪಡೆಯಲು ಒಟಿಪಿ ಬಳಸುವ ವಿಧಾನಕ್ಕೆ ಬದಲಾಗುವ ಸಾಧ್ಯತೆ ಇದೆ. 

ಎಟಿಎಂ ವಂಚನೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಕಾಲ ಕಾಲಕ್ಕೆ ಜಾಗೃತಿ ಮೂಡಿಸುವಲ್ಲಿ ಎಸ್‌ಬಿಐ ನಿರತವಾಗಿದೆ. 

ಒಂದು ಲಕ್ಷದವರೆಗೆ ಮಾಸಿಕ ಠೇವಣಿ ಹೊಂದಿರುವ ಎಸ್‌ಬಿಐ ಬ್ಯಾಂಕ್‌ ಗ್ರಾಹಕರು ತಮ್ಮ ಎಟಿಎಂಗಳಲ್ಲಿ ಐದು ಬಾರಿ ಉಚಿತ ವಹಿವಾಟುಗಳನ್ನು ನಡೆಸಬಹುದಾಗಿದೆ. ಇತರ ಬ್ಯಾಂಕ್‌ಗಳು ನಗರ ಪ್ರದೇಶಗಳಲ್ಲಿ ಉಚಿತ ವಹಿವಾಟುಗಳ ಸಂಖ್ಯೆಯನ್ನು ಮೂರಕ್ಕೆ ಮಿತಿಗೊಳಿಸಿವೆ. ಉಚಿತ ಮಿತಿಯನ್ನು ಮೀರಿದ ವಹಿವಾಟುಗಳಿಗೆ ಬ್ಯಾಂಕ್ ವಹಿವಾಟಿನ ಪ್ರಕಾರ ಮತ್ತು ಎಟಿಎಂಗೆ ಅನುಗುಣವಾಗಿ ಶುಲ್ಕವನ್ನು ವಿಧಿಸಲಾಗುತ್ತದೆ.

ನಿಮಗೆ ಏನು ಅನ್ನಿಸ್ತು?
0 ವೋಟ್