ಪುಣೆ | ತಂದೆ ಮತ್ತು ಸಂಬಂಧಿಕರಿಂದಲೇ ಆರು ವರ್ಷಗಳಿಂದ ಅತ್ಯಾಚಾರ

  • ಕಾಲೇಜಿನಲ್ಲಿ ನಡೆದ ಲೈಂಗಿಕ ದೌರ್ಜನ್ಯ ವಿರೋಧಿ ಸಭೆಯಿಂದ ಪ್ರಕರಣ ಬಹಿರಂಗ
  • ತಂದೆಯ ಬಂಧನ, ಉಳಿದಿಬ್ಬರ ಬಂಧನಕ್ಕೆ ಮುಂದಾದ ಪೊಲೀಸ್‌ ಅಧಿಕಾರಿಗಳು

ಕಳೆದ ಆರು ವರ್ಷಗಳಿಂದ ತನ್ನ ತಂದೆ, ಚಿಕ್ಕಪ್ಪ ಹಾಗೂ ಅಜ್ಜ ತನ್ನ ಮೇಲೆ ಅನೇಕ ಬಾರಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 17 ವರ್ಷದ ಬಾಲಕಿಯು ಆರೋಪಿಸಿದ್ದಾಳೆ. ಈ ಕುರಿತು ತನಿಖೆ ಆರಂಭಿಸಿರುವುದಾಗಿ ಪುಣೆ ಪೊಲೀಸರು ತಿಳಿಸಿದ್ದಾರೆ.

ಈ ಆರೋಪ ಸಂಬಂಧ ಬಾಲಕಿಯ 49 ವರ್ಷದ ತಂದೆಯನ್ನು ಬುಧವಾರ ಬಂಧಿಸಿದ್ದು, ಶೀಘ್ರದಲ್ಲೇ ಆಕೆಯ ಚಿಕ್ಕಪ್ಪ ಮತ್ತು ಅಜ್ಜನನ್ನು ಬಂಧಿಸುವುದಾಗಿ ಹೇಳಿದ್ದಾರೆ. ಅಪ್ರಾಪ್ತೆಯು ತನ್ನ ಕಾಲೇಜಿನಲ್ಲಿ ನಡೆದ ಲೈಂಗಿಕ ದೌರ್ಜನ್ಯ ವಿರೋಧಿ ಸಮಿತಿಯ (ವಿಶಾಖಾ) ಮುಂದೆ ಆಕೆ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾಳೆ. ಈ ಪ್ರಕರಣ ಸಂಬಂಧ ಪುಣೆ ನಗರ ವ್ಯಾಪ್ತಿಯ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

Eedina App

“ಬಾಲಕಿಯ ಕುಟುಂಬವು ಉತ್ತರ ಪ್ರದೇಶದದಿಂದ ಪುಣೆಗೆ ಸ್ಥಳಾಂತರಗೊಂಡಿದೆ. ಹುಟ್ಟೂರಿನಲ್ಲಿಯೂ ದೌರ್ಜನ್ಯ ಎದುರಿಸಿದ್ದ ಬಾಲಕಿಯೂ ಇಲ್ಲಿಗೆ ವಲಸೆ ಬಂದ ನಂತರವೂ ಹಲವು ಬಾರಿ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ. ಬಾಲಕಿಯ ಕುಟುಂಬವು ಕೆಲವು ವರ್ಷಗಳ ಹಿಂದೆ ಪುಣೆಗೆ ವಲಸೆ ಬಂದಿತ್ತು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಅಪ್ರಮೇಯ | ರಾಜನ ಹಳೇ ಕತೆ ಮತ್ತು ನದಿ ದಂಡೆಯಾಚೆ ಸೂರ್ಯ ಬೆಳಗುತ್ತಿದ್ದ ಹೊಸ ಊರು (ಎಲ್ಲರ ಕನ್ನಡ*)

AV Eye Hospital ad

“ಬುಧವಾರ, ಬಾಲಕಿ ಓದುತ್ತಿದ್ದ ಕಾಲೇಜಿನಲ್ಲಿ ವಿಶಾಖಾ ಮಾರ್ಗಸೂಚಿಗಳ ಅಡಿಯಲ್ಲಿ ರಚಿಸಲಾದ ಸಮಿತಿಯ ಸಭೆ ನಡೆದಿತ್ತು. ಆ ಸಭೆಯ ನಂತರ ಬಾಲಕಿಯು, ಕಳೆದ ಆರು ವರ್ಷಗಳಿಂದ ತನ್ನ ತಂದೆ, ಅಜ್ಜ ಹಗೂ ಚಿಕ್ಕಪ್ಪನಿಂದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎದುರಿಸಿದ್ದಾರೆ ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾಳೆ. ಕೂಡಲೇ ಕಾಲೇಜು ಅಧಿಕಾರಿಗಳು ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣದ ದಾಖಲಾಗಿದೆ” ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.

“ಹುಡುಗಿಯ ಚಿಕ್ಕಪ್ಪ ಮತ್ತು ಅಜ್ಜ ಬಾಲಕಿ ಊರಿನಲ್ಲಿದ್ದಾಗ, ಎರಡು ವರ್ಷಗಳ ಕಾಲ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಪುಣೆಗೆ ತೆರಳಿದ ನಂತರ ಆಕೆ ತನ್ನ ತಂದೆಗೆ ದೌರ್ಜನ್ಯದ ಬಗ್ಗೆ ತಿಳಿಸಿದ್ದಾಳೆ. ಆದರೆ ತಂದೆಯೂ ಇತ್ತೀಚಿನವರೆಗೂ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ” ಎಂದು ಎಫ್‌ಐಆರ್‌ನಲ್ಲಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಪ್ರಸ್ತುತ ಬಾಲಕಿಗೆ ಆಪ್ತಸಮಾಲೋಚನೆ ನೀಡಲಾಗುತ್ತಿದೆ. ಈಗಾಗಲೇ ಆರೋಪಿಯೊಬ್ಬನನ್ನು ಬಂಧಿಸಲಾಗಿದ್ದು, ಬಾಲಕಿಯ ಹುಟ್ಟೂರಿನಲ್ಲಿರುವ ಬಾಲಕಿಯ ಚಿಕ್ಕಪ್ಪ ಮತ್ತು ಅಜ್ಜನನ್ನು ಶೀಘ್ರದಲ್ಲೇ ಬಂಧಿಸುತ್ತೇವೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app