ಮಹಾರಾಷ್ಟ್ರ | ಗಂಡು ಮಗುವಿಗಾಗಿ ಸಾರ್ವಜನಿಕರ ಮುಂದೆ ಬೆತ್ತಲೆಯಾಗಿ ಸ್ನಾನ ಮಾಡುವಂತೆ ಮಹಿಳೆಗೆ ಮನೆಯವರಿಂದಲೇ ಒತ್ತಾಯ

  • ಸಾರ್ವಜನಿಕರ ಎದುರು ಬೆತ್ತಲೆಯಾಗಿ ಸ್ನಾನ ಮಾಡಲು ಮಹಿಳೆಯನ್ನು ಒತ್ತಾಯಿಸಿದ ಪತಿ
  • ಗಂಡು ಮಗು ಹುಟ್ಟಲಿ ಎಂದು ʻಸಂಸ್ಕಾರʼದ ಹೆಸರಿನಲ್ಲಿ ಮಹಿಳೆಯ ಮೇಲೆ ದೌರ್ಜನ್ಯ

ಗಂಡು ಮಗು ಹುಟ್ಟಲಿ ಎಂದು ಸ್ಥಳೀಯ ಮಂತ್ರವಾದಿ ಸೂಚಿಸಿದ ʻಸಂಸ್ಕಾರʼದ ಭಾಗವಾಗಿ ಜನರ ಮುಂದೆ ಬೆತ್ತಲೆಯಾಗಿ ಸ್ನಾನ ಮಾಡುವಂತೆ ಆಕೆಯ ಪತಿ ಮತ್ತು ಅತ್ತೆ, ಮಾವ ಒತ್ತಾಯಿಸಿದಂತಹ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆಸಿದೆ.

ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಆಕೆಯ ಪತಿ, ಅತ್ತೆ, ಮಾವ ಹಾಗೂ ಮೌಲಾನಾ ಬಾಬಾ ಜಮಾದಾರ್‌ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 498 (ಪತಿ ಅಥವಾ ಅವನ ಸಂಬಂಧಿಕರು ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವುದು) ಮತ್ತು ಮೌಢ್ಯಾಚರಣೆ ನಿಷೇಧ ಕಾಯ್ದೆ 2013ರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಭಾರತಿ ವಿದ್ಯಾಪೀಠದ ಪೊಲೀಸ್‌ ಅಧಿಕಾರಿ ತಿಳಿಸಿರುವುದಾಗಿ 'ಶೀ ದ ಪೀಪಲ್‌' ಪತ್ರಿಕೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಈ ಸುದ್ದಿ ಓದಿದ್ದೀರಾ?: ಸುದ್ದಿ ವಿವರ | ಬಿಎಸ್‌ಎಫ್ ಸಹಕಾರದೊಂದಿಗೆ ರಾಜಸ್ಥಾನದಲ್ಲಿ ಶುರುವಾಗಲಿದೆ ಗಡಿ ಪ್ರವಾಸ ಯೋಜನೆ

"ದಂಪತಿಗಳಿಗೆ ಮಕ್ಕಳಿರಲಿಲ್ಲ. ಮಾಂತ್ರಿಕನ ಸಲಹೆಯ ಮೇರೆಗೆ ಮಹಿಳೆಯನ್ನು ರಾಯಗಡ ಜಿಲ್ಲೆಯ ಜಲಪಾತದ ಹತ್ತಿರ ಕರೆದೊಯ್ದು ಎಲ್ಲರ ಮುಂದೆ ಸ್ನಾನ ಮಾಡುವಂತೆ ಒತ್ತಾಯಿಸಲಾಗಿದೆ. ತನಿಖೆ ನಡೆಯುತ್ತಿದೆʼʼ ಎಂದು ಅವರು ವಿವರಿಸಿದರು.

ಮಹಿಳೆ ನೀಡಿರುವ ದೂರಿ ಪ್ರಕಾರ, ಗಂಡು ಮಗು ಹೆರಲಿಲ್ಲ ಎಂಬ ಕಾರಣಕ್ಕೆ ಹಾಗೂ ವರದಕ್ಷಿಣೆ ಕೇಳುವ ನೆಪವೊಡ್ಡಿ ಪತಿ ಮತ್ತು ಅತ್ತೆ-ಮಾವ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಅದಕ್ಕಾಗಿ ಹಲವಾರು ಬಾರಿ ಮಾಟ-ಮಂತ್ರ ಮಾಡಿಸಿದ್ದರು ಎಂದು ಮಹಿಳೆಯು ಆರೋಪಿಸಿದ್ದಾರೆ. ವ್ಯಾಪಾರ ಉದ್ದೇಶಕ್ಕಾಗಿ ತನ್ನ ಆಸ್ತಿಯ ಮೇಲೆ 75 ಲಕ್ಷ ರೂಪಾಯಿ ಸಾಲ ಪಡೆಯಲು ಪತಿ ತನ್ನ ಸಹಿಯನ್ನು ನಕಲಿ ಮಾಡಿದ್ದಾನೆ ಎಂದು ಮಹಿಳೆ ಹೇಳಿರುವುದಾಗಿ   ಪೊಲೀಸರು ತಿಳಿಸಿದರು.

“ಇತ್ತೀಚೆಗೆ ಸ್ಥಳೀಯ ಮಂತ್ರವಾದಿಗಳೊಬ್ಬರು ಮಹಿಳೆಯು ಸಾರ್ವಜನಿಕವಾಗಿ ಜಲಪಾತದ ಕೆಳಗೆ ಬೆತ್ತಲೆಯಾಗಿ ಸ್ನಾನ ಮಾಡಿ, ಕೆಲವು ಆಚರಣೆಗಳನ್ನು ಅನುಸರಿಸಿದರೆ ಗಂಡು ಮಗುವಿಗೆ ಜನ್ಮ ನೀಡುತ್ತಾರೆ ಎಂದು ಆಕೆಯ ಕುಟುಂಬದವರಿಗೆ ಭರವಸೆ ನೀಡಿದ್ದರು. ಅದೇ ರೀತಿಯಲ್ಲಿ ರಾಯಗಢದ ಬಳಿಯಿರುವ ಜಲಪಾತಕ್ಕೆ ಕರೆದೊಯ್ದು ಸಾರ್ವಜನಿಕರ ಮುಂದೆಯೇ ಬೆತ್ತಲೆಯಾಗಿ ಸ್ನಾನ ಮಾಡಲು ಹೇಳಿದ್ದಾರೆʼʼ ಎಂದು ಅವರು ಹೇಳಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್