
- ಪ್ರಕಾಶ್ ಸಿಂಗ್ ಬಾದಲ್ ಸರ್ಕಾರದ ಅವಧಿಯಲ್ಲಿ ಅಕ್ರಮ ನಡೆದಿರುವ ಆರೋಪ
- ಅತಿ ಹೆಚ್ಚು ಹಣ ವಿನಿಯೋಗ, ಬಿಎಸ್ಎಫ್ ಅನುಮತಿ ಇಲ್ಲದೆ ಭೂಮಿ ಖರೀದಿ ಅಸಾಧ್ಯ
ಪಂಜಾಬ್ನ ಅಮೃತಸರದಲ್ಲಿರುವ ಅಂತರರಾಷ್ಟ್ರೀಯ ಗಡಿ ಬಳಿ ಬಿತ್ತನೆ ಬೀಜ ಕೇಂದ್ರ ತೆರೆಯಲು 2008ರಲ್ಲಿ ಭೂಮಿ ಖರೀದಿಸಿದ್ದ ಸಂದರ್ಭದಲ್ಲಿ ನಡೆದಿರುವ ಅಕ್ರಮದ ಕುರಿತು ತನಿಖೆ ನಡೆಸುವುದಾಗಿ ಪಂಜಾಬ್ ಕೃಷಿ ಸಚಿವ ಕುಲದೀಪ್ ಸಿಂಗ್ ಧಲಿವಾಲ್ ಹೇಳಿದ್ದಾರೆ.
ಅಂದಿನ ಸರ್ಕಾರ ₹32 ಕೋಟಿಗೆ ಭೂಮಿ ಖರೀದಿಸಿತ್ತು. ಈ ಬಗ್ಗೆ ಮಾತನಾಡಿರುವ ಅವರು, "ರಾನಿಯಾ ಗ್ರಾಮದ ಗಡಿಯ ಸಮೀಪವಿರುವ 700 ಎಕರೆ ಭೂಮಿಯನ್ನು ಕೃಷಿ ಇಲಾಖೆಯು ಅತಿಹೆಚ್ಚಿನ ದರ ನೀಡಿ ಖರೀದಿಸಿ ನಂತರ ಅದನ್ನು ಬಳಸದೆ ಪಾಳು ಬಿಡಲಾಗಿದೆ" ಎಂದು ಆರೋಪಿಸಿದ್ದಾರೆ.
"2008ರಲ್ಲಿ ಅಸ್ತಿತ್ವದಲ್ಲಿದ್ದ ಪ್ರಕಾಶ್ ಸಿಂಗ್ ಬಾದಲ್ ಸರ್ಕಾರದ ಅವಧಿಯಲ್ಲಿ ಸುಚಾ ಸಿಂಗ್ ಲಾಂಗಾ ಅವರು ಕೃಷಿ ಸಚಿವ ಹಾಗೂ ಕಹಾನ್ ಸಿಂಗ್ ಪನ್ನು ಅವರು ಅಮೃತಸರದ ಜಿಲ್ಲಾಧಿಕಾರಿಯಾಗಿದ್ದರು. ಆ ವೇಳೆ ಸರ್ಕಾರವು ಎಕರೆಗೆ ₹4.5 ಲಕ್ಷದಂತೆ ಹಣ ನೀಡಿ ಖರೀದಿಸಿದೆ. ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಅನುಮತಿ ಇಲ್ಲದೆ ಈ ಭೂಮಿಯನ್ನು ಖರೀದಿಸಲಾಗುವುದಿಲ್ಲ. ಆದರೆ, ಯಾವ ಯೋಜನೆಯಡಿ ವಿಪರೀತ ಬೆಲೆ ನೀಡಿ ಈ ಭೂಮಿ ಖರೀದಿಸಲಾಗಿದೆ ಎಂಬುದನ್ನು ತನಿಖೆ ಮಾಡಲಾಗುವುದು" ಎಂದಿರುವ ಕೃಷಿ ಸಚಿವ ಕುಲದೀಪ್ ಸಿಂಗ್ ಧಲಿವಾಲ್, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
जनता के पैसों की इतनी बर्बादी! प्रकाश सिंह बादल की सरकार में सन 2008 बॉर्डर के कटीले तारों के पार 700 एकड़ जमीन और कई मशीन 32 करोड़ के महंगे दाम पर खरीदी और सड़ने के लिए छोड़ दिए, जिसका कोई इस्तेमाल नहीं किया गया..हम इसकी जांच कराएंगे यह सब किसको फायदा पहुंचाने के लिए किया गया pic.twitter.com/Gfpft01UdR
— Kuldeep Dhaliwal (@KuldeepSinghAAP) November 27, 2022
"ನೀರಾವರಿಗಾಗಿ 30 ಸಬ್ಮರ್ಸಿಬಲ್ ಕೊಳವೆ ಬಾವಿಗಳು, ವಿದ್ಯುತ್, ಟ್ರ್ಯಾಕ್ಟರ್ಗಳು, ಜನರೇಟರ್ಗಳು ಹಾಗೂ ಇತರ ಯಂತ್ರೋಪಕರಣಗಳು ಸೇರಿದಂತೆ ಉಪಕರಣಗಳನ್ನು ಖರೀದಿಗಾಗಿ ಸುಮಾರು ₹8 ಕೋಟಿ ವೆಚ್ಚ ಮಾಡಲಾಗಿದೆ. ಕೃಷಿ ಮಂತ್ರಿ, ಜಿಲ್ಲಾಧಿಕಾರಿಗಳೆಲ್ಲ ರೈತರಿಗೆ ಸೇರಿದ ಈ ಕೃಷಿ ಭೂಮಿಯನ್ನು ಹೇಗೆ ಖರೀದಿಸಿದರು ಎಂಬುದು ಅನುಮಾನ ಮೂಡಿಸುತ್ತಿದೆ" ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೊಹಾಲಿ | ಜಲ ವಿವಾದಗಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹ; ಡಿ.2ರಿಂದ ದೆಹಲಿ ಮಾದರಿ ರೈತ ಹೋರಾಟಕ್ಕೆ ಕರೆ
ಅಲ್ಲದೆ, "ಈ ಭೂಮಿಗೆ ಅತಿ ಹೆಚ್ಚು ಹಣ ಸುರಿದಿದ್ದು, ಸಾರ್ವಜನಿಕರ ಹಣ ದುರುಪಯೋಗವಾಗಿರುವ ಬಗ್ಗೆ ನನಗೆ ಬೇಸರವಾಗಿದೆ. ಇದರ ಸತ್ಯಾಸತ್ಯತೆ ತಿಳಿಯಲು ಈ ಭೂಮಿಯನ್ನು ಮಾರಾಟ ಮಾಡಿದ ರೈತರನ್ನು ಪತ್ತೆ ಹಚ್ಚಿ ವಿಚಾರಣೆಗೆ ಒಳಪಡಿಸಲಾಗುವುದು" ಎಂದಿದ್ದಾರೆ.