ರೈಲ್ವೆ ಅಪಘಾತ | ಕಳೆದ ಏಳು ವರ್ಷಗಳಲ್ಲಿ 5,210ಕ್ಕೂ ಅಧಿಕ ಮಂದಿ ಸಾವು

Train Suicide
  • ಕಳೆದ ಮೂರು ವರ್ಷಗಳಲ್ಲಿ ರೈಲಿಗೆ ಸಿಲುಕಿ 1,455 ಮಂದಿ ಆತ್ಮಹತ್ಯೆ
  • ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವವರ ಪೈಕಿ ಯುವಕರೇ ಅಧಿಕ

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ರೈಲಿಗೆ ಸಿಲುಕಿ 1,455 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ರೈಲ್ವೆ ಅಪಘಾತದಲ್ಲಿ 5,210ಕ್ಕೂ ಹೆಚ್ಚಿನ ಜನ ಮೃತಪಟ್ಟಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

2020ರಲ್ಲಿ 413 ಮಂದಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, 2021ರಲ್ಲಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವವರ ಪ್ರಮಾಣ 668ಕ್ಕೆ ಏರಿಕೆಯಾಗಿದೆ. ಕಳೆದ 6 ತಿಂಗಳಿನಲ್ಲಿ 374 ಮಂದಿ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪೈಕಿ 1,305 ಪುರುಷರು, 150 ಮಹಿಳೆಯರು ಮೃತಪಟ್ಟಿದ್ದಾರೆ. ಪ್ರತಿ ತಿಂಗಳು ಸುಮಾರು 55 ರಿಂದ 60 ಮಂದಿ ರೈಲು ಅಪಘಾತಕ್ಕೀಡಾಗಿ ಮೃತಪಡುತ್ತಿದ್ದಾರೆ. 

ಹಳಿ ದಾಟುವುದು, ಇಯರ್‌ ಫೋನ್‌ ಹಾಕಿಕೊಂಡು ಹಳಿ ಮೇಲೆ ಓಡಾಡುವುದು, ಖಾಲಿ ಇರುವ ರೈಲ್ವೆ ಹಳಿಗಳಲ್ಲಿ ನಿದ್ರೆ ಮಾಡುವುದು, ಹಳಿಗಳಲ್ಲಿ ವಾಯು ವಿಹಾರ ಮಾಡುವುದು, ರೈಲು ಬರುವ ವೇಳೆ ಸೆಲ್ಫಿ ತೆಗೆಯುವುದು.. ಹೀಗೆ ನಾನಾ ರೀತಿಯಲ್ಲಿ ಜನರು ಮೃತಪಟ್ಟಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಪಿಎಸ್‌ಐ ಅಕ್ರಮ | ಆರೋಪಿಗಳ ಬಂಧನಕ್ಕೂ ಮುನ್ನ ಅಣಕು ಪರೀಕ್ಷೆ

2017ರಲ್ಲಿ 654, 2018ರಲ್ಲಿ 487, 2019ರಲ್ಲಿ 614 ಹಾಗೂ 2020, 2021 ಹಾಗೂ 2022 ಜೂನ್‌ವರೆಗೆ 826ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 

ಖಿನ್ನತೆ, ಪ್ರೇಮ ವೈಫ‌ಲ್ಯ, ಸಾಲಬಾಧೆ, ಪತಿಯ ಕಿರುಕುಳ, ಪರೀಕ್ಷೆಯಲ್ಲಿ ನಪಾಸಾಗುವುದು, ವರದಕ್ಷಿಣೆ ಕಿರುಕುಳದ ಕಾರಣಕ್ಕಾಗಿಯೇ ಶೇಕಡಾ 90ರಷ್ಟು ಮಂದಿ ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ ಯುವಕರ ಸಂಖ್ಯೆಯೇ ಅಧಿಕ. ಆತ್ಮಹತ್ಯೆ ಮಾಡಿಕೊಳ್ಳಲು ಕಂಡುಕೊಂಡಿರುವ ವಿವಿಧ ಮಾರ್ಗಗಳಲ್ಲಿ ರೈಲಿಗೆ ತಲೆ ಕೊಡುವುದೂ ಒಂದು. ಇತ್ತೀಚೆಗೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವವರ ಪ್ರಮಾಣ ಹೆಚ್ಚುತ್ತಿದೆ. 

ಕಳೆದ ಐದು ವರ್ಷದಲ್ಲಿ 248 ರೈಲು ಅಪಘಾತ

ದೇಶದಲ್ಲಿ ಕಳೆದ ಐದು ವರ್ಷಗಲ್ಲಿ 248 ರೈಲು ಅಪಘಾತಗಳು ಸಂಭವಿಸಿದ್ದು, 122 ಜನರು ಮೃತಪಟ್ಟಿದ್ದಾರೆ. ಅಂದಾಜು 222.49 ಕೋಟಿ ರೂಪಾಯಿ ಆಸ್ತಿ ಹಾನಿಯಾಗಿದೆ ಎಂದು ಲೋಕಸಭೆಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದರು.

ಅಲ್ಲದೆ, ಇತ್ತೀಚಿನ ವರ್ಷಗಳಲ್ಲಿ ರೈಲ್ವೆ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿದೆ. 248 ಅಪಘಾತಗಳಲ್ಲಿ ಉತ್ತರ ವಿಭಾಗದ 37 ರೈಲುಗಳು ಅಪಘಾತಕ್ಕೀಡಾಗಿವೆ ಎಂದೂ ಅವರು ಹೇಳಿದರು.

ವರ್ಷ  ಅಪಘಾತಗಳು ಸಾವು ನಷ್ಟ (ಲಕ್ಷ ರೂ.ಗಳಲ್ಲಿ)
2017-18 73 58 3355.93 
2018-19 59 37 2,855.88
2019-20 55 5 2,698.70
2020-21 22 4 2,845.83
2021-22 35 17 7,958.24
2022-23 4 1 2,534.58
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.
ನಿಮಗೆ ಏನು ಅನ್ನಿಸ್ತು?
0 ವೋಟ್