ರಾಜಸ್ಥಾನ| ದಲಿತ ವಿದ್ಯಾರ್ಥಿಗೆ ಥಳಿಸಿ ಕೈ ಮುರಿದುಹಾಕಿದ ಶಿಕ್ಷಕ

  • ದಲಿತ ವಿದ್ಯಾರ್ಥಿಯ ಥಳಿಸಿದ್ದ ಶಿಕ್ಷಕನ ಬಂಧನ, ಅಮಾನತು
  • ಬುಡಕಟ್ಟು ಯುವಕರಿಗೆ ಬರೆ ಹಾಕಿದ ಅರಣ್ಯ ಇಲಾಖೆ ಸಿಬ್ಬಂದಿ

ರಾಜಸ್ಥಾನದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ. ಇತ್ತೀಚೆಗೆ ಜಲೋರ್ ಜಿಲ್ಲೆಯಲ್ಲಿ ನಡೆದಿದ್ದ ಇಂದ್ರ ಮೇಘವಾಲ್ ಹತ್ಯೆ ಇಡೀ ದೇಶದಲ್ಲಿ ಭಾರೀ ಖಂಡನೆಗೆ ಕಾರಣವಾಗಿದ್ದರೂ ದಲಿತರ ಮೇಲಿನ ದೌರ್ಜನ್ಯ ನಿಂತಿಲ್ಲ.

ಕಳೆದ ಒಂದು ವಾರದಲ್ಲಿ ರಾಜಸ್ಥಾನ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಮೂರು ನಾಲ್ಕು ದಲಿತ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿವೆ.

ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಇತ್ತೀಚೆಗೆ 14 ವರ್ಷದ ದಲಿತ ವಿದ್ಯಾರ್ಥಿಯನ್ನು ಥಳಿಸಿದ ಆರೋಪದ ಮೇಲೆ ಸರ್ಕಾರಿ ಶಾಲಾ ಶಿಕ್ಷಕನನ್ನು ಬಂಧಿಸಿ, ಅಮಾನತುಗೊಳಿಸಲಾಗಿದೆ. ದೌಸಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 5ನೇ ತರಗತಿಯ ದಲಿತ ವಿದ್ಯಾರ್ಥಿಯನ್ನು ಶಾಲಾ ಶಿಕ್ಷಕರು ಥಳಿಸಿದ್ದರು. ಈ ಸಂಬಂಧ ಇಬ್ಬರೂ ಶಿಕ್ಷಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಪಾಲಿ ಜಿಲ್ಲೆಯಲ್ಲಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕ ಭನ್ವರ್ ಸಿಂಗ್ ವಿರುದ್ಧ ದಲಿತ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದರು. ವಿದ್ಯಾರ್ಥಿಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಸಿಆರ್ಪಿಸಿ ಸೆಕ್ಷನ್ 151 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ| ಸಮವಸ್ತ್ರ ಧರಿಸದ ದಲಿತ ಬಾಲಕಿ ಮೇಲೆ ಹಲ್ಲೆ, ಶಾಲೆಯಿಂದ ಹೊರದಬ್ಬಿದ ಮಾಜಿ ಗ್ರಾಮ ಪ್ರಧಾನ್!

ದಲಿತ ವಿದ್ಯಾರ್ಥಿಯ ಕೈ ಮುರಿದ ಶಿಕ್ಷಕ:

ರಾಜಸ್ಥಾನದ ದೌಸಾದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕ ರಾಮೇಶ್ವರ್ ಗುರ್ಜರ್ ದಲಿತ ವಿದ್ಯಾರ್ಥಿಗೆ ಥಳಿಸಿ ಕೈ ಮುರಿದಿದ್ದಾನೆ. ರೋಹಿತ್ ಮತ್ತು ಅವನ ಸಹೋದರಿ ವರ್ಗಾವಣೆ ಪತ್ರ ತೆಗೆದುಕೊಂಡು ಅವರ ಶಾಲೆಯನ್ನು ಬದಲಾಯಿಸುವಂತೆ ಶಾಲೆಯು ಕೇಳಿದೆ ಎಂದು ಸಂತ್ರಸ್ತ ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.

ಬುಡಕಟ್ಟು ಯುವಕರಿಗೆ ಅರಣ್ಯ ಸಿಬ್ಬಂದಿ ಬರೆ: 

ಮಹಾರಾಷ್ಟ್ರ ರಾಜ್ಯದ ಅಮರಾವತಿಯ ಮೇಲಾಘಾಟ್ ಹುಲಿ ಸಂರಕ್ಷಿತ ಪ್ರದೇಶದ ಅಕೋಟ್ ವನ್ಯಜೀವಿ ವಿಭಾಗದ ಅರಣ್ಯದಲ್ಲಿ ಮೀನು ಹಿಡಿಯಲು ತೆರಳಿದ್ದ ಬುಡಕಟ್ಟು ಯುವಕರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಬ್ಬಿಣದ ರಾಡಿನಿಂದ ಬರೆ ಹಾಕಿದ್ದಾರೆ. 

ಅಂಕುಶ್ ಮಾವಸ್ಕರ್, ಆನಂದ್ ಕಾಸ್ಡೇಕರ್ ಮತ್ತು ಪಪ್ಪು ಚವ್ಹಾಣ್ ದೌರ್ಜನ್ಯಕ್ಕೆ ಒಳಗಾದವರು. ಮೀಸಲು ಪ್ರದೇಶದಲ್ಲಿ ಮೀನುಗಾರಿಕೆ ಅಕ್ರಮವಾಗಿದೆ. ಕಾನೂನುಬಾಹಿರ ಕೃತ್ಯಕ್ಕಾಗಿ ಅವರನ್ನು ಬಂಧಿಸಿದ ಅರಣ್ಯಾಧಿಕಾರಿಗಳು, ಬಿಸಿ ರಾಡುಗಳಿಂದ ತೊಡೆ ಮತ್ತು ಕೈ ಮೇಲೆ ಬರೆ ಎಳೆದಿದ್ದಾರೆ. 

“ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಮೆಲ್ಘಾಟ್ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮೀನುಗಾರಿಕೆಗೆ ತೆರಳಿದ್ದ ಮೂವರು ಬುಡಕಟ್ಟು ಯುವಕರನ್ನು ಅರಣ್ಯ ಸಿಬ್ಬಂದಿಗಳು ಕಬ್ಬಿಣದ ರಾಡ್‌ಗಳಿಂದ ಸುಟ್ಟಿದ್ದಾರೆ” ಎಂದು ದಿ ದಲಿತ್ ವಾಯ್ಸ್ ಮತ್ತು ಟ್ರೈಬಲ್ ಆರ್ಮಿ ಟ್ವೀಟ್ ಮಾಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್