
2019ರಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದ ಅಪರಾಧಿಗೆ ಚಂಡೀಗಢ ತ್ವರಿತ ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ ಆರೋಪಿಗೆ ನ್ಯಾಯಾಲಯವು ಕಠಿಣ ಶಿಕ್ಷೆಯೊಂದಿಗೆ ₹20,000 ದಂಡ ವಿಧಿಸಿದೆ.
ಮುಕ್ತ್ಸರ್ ಮೂಲದ ಆರೋಪಿ, ಸಂತ್ರಸ್ತ ಮಹಿಳೆಯೊಂದಿಗೆ ವಸತಿಗೃಹದಲ್ಲಿ ವಾಸಿಸುತ್ತಿದ್ದ. ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮದುವೆಯ ನೆಪದಲ್ಲಿ ಆಕೆಯೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸಿದ್ದ. ಸಂತ್ರಸ್ತೆ ಗರ್ಭಿಣಿಯಾದ ನಂತರ ಆಕೆಯಿಂದ ದೂರಾಗಿದ್ದ.
ಈ ಕುರಿತು ಯುವತಿಯು 2019ರ ಜುಲೈ 29ರಂದು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು.
ಆರೋಪಿಯ ವಿರುದ್ಧ ತಪ್ಪು ಆರೋಪ ಮಾಡಲಾಗುತ್ತಿದೆ ಎಂದು ಪ್ರತಿವಾದಿಯು ವಾದಿಸಿದ್ದರು. ಯುವತಿಯ ಪರ ವಾದಿಸಿದ ವಕೀಲರು ಸಂತ್ರಸ್ತೆಯ ವೈದ್ಯಕೀಯ ವರದಿ ವಿವಿಧ ಸಾಕ್ಷಿಗಳನ್ನು ನೀಡಿತು. ಆರೋಪಿಯು ನಡೆಸಿದ ಕೃತ್ಯ ಸಾಬೀತಾಗಿದ್ದು, ನ್ಯಾಯಾಲಯವು ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿತು.