ಒಂದು ನಿಮಿಷದ ಓದು | ಲಿಂಗತ್ವ ಅಲ್ಪಸಂಖ್ಯಾತರಿಗೆ ಪಡಿತರ ಚೀಟಿ: ಮಹಾರಾಷ್ಟ್ರ ಸರ್ಕಾರದ ಘೋಷಣೆ

ರಾಜ್ಯ ಏಡ್ಸ್ ನಿಯಂತ್ರಣ ಸಮಿತಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಹೆಸರನ್ನು ನೋಂದಾಯಿಸಿದರೆ, ಅದನ್ನು ಪಡಿತರ ಚೀಟಿಗಾಗಿ ಅವರ ಅರ್ಜಿಯನ್ನು ನಿವಾಸ ಪರಿಶೀಲನೆ ಮತ್ತು ಗುರುತಿನ ಪುರಾವೆಗಳಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದೆ.

ʻಟ್ರಾನ್ಸ್‌ಜೆಂಡರ್ʼ ಎಂದು ನಮೂದಿಸಿದ ಮತದಾರರ ಗುರುತಿನ ಚೀಟಿ ಹೊಂದಿದ್ದರೆ ಅವರನ್ನೂ ಪಡಿತರ ಚೀಟಿಗಾಗಿ ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಆದೇಶವು ತಿಳಿಸಿದೆ.

"2013ರ ಆದೇಶದ ಪ್ರಕಾರ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರು, ಲಿಖಿತ ಪುರಾವೆಗಳನ್ನು ಪಡೆಯುವಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಗಣಿಸಿ, ಗುರುತಿನ ಪುರಾವೆ ಮತ್ತು ವಸತಿ ಪುರಾವೆಗಳನ್ನು ಪಡೆಯುವಲ್ಲಿ ಸಡಿಲಿಕೆಯನ್ನು ನೀಡಲಾಗುತ್ತಿದೆ. ಈ ಸಮುದಾಯದವರಿಗೆ ಪಡಿತರ ಚೀಟಿ ನೀಡುವಂತೆ ಅಧಿಕಾರಿಗಳು ಹೇಳುವುದಿಲ್ಲʼʼ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.

ಹೆಚ್ಚುವರಿಯಾಗಿ, 2019ರ ಲಿಂಗತ್ವ ಅಲ್ಪಸಂಖ್ಯಾತರ ಆರ್ಡಿನೆನ್ಸ್‌ನ ವಿಭಾಗ 5ರ ಪ್ರಕಾರ ಮುಖ್ಯ ಸಮಾಜ ಕಲ್ಯಾಣ ಅಧಿಕಾರಿ ನೀಡಿದ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಪ್ರಮಾಣಪತ್ರವನ್ನು ಹೊಂದಿರುವ ವ್ಯಕ್ತಿಗಳು ಆ ದಾಖಲೆಯನ್ನು ಬಳಸಬಹುದು.

ಕರ್ನಾಟಕ ಸರ್ಕಾರವು ಈ ಹಿಂದೆ ರಾಜ್ಯದ ಸಶಸ್ತ್ರ ಸೇವೆಗಳಲ್ಲಿ  ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ಮೀಸಲಾತಿಯನ್ನು ಘೋಷಿಸಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180