ಒಂದು ನಿಮಿಷದ ಓದು | ಯುಜಿಸಿಇಟಿ 2022ರ ಪರಿಷ್ಕೃತ ಫಲಿತಾಂಶ ಅಕ್ಟೋಬರ್ 1ಕ್ಕೆ ಪ್ರಕಟ

2022ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (ಕೆಸಿಇಟಿ) ಪರಿಷ್ಕೃತ ಶ್ರೇಯಾಂಕ ಪಟ್ಟಿಯನ್ನು ಅಕ್ಟೋಬರ್ 1ಕ್ಕೆ ಪ್ರಕಟಿಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ತಿಳಿಸಿದೆ.

ಕರ್ನಾಟಕ ಹೈಕೋರ್ಟ್‌ನ ಆದೇಶದ ಮೇರೆಗೆ ಯುಜಿಸಿಇಟಿ ಪರಿಷ್ಕೃತ ಫಲಿತಾಂಶವನ್ನು ಪ್ರಕಟಿಸುವುದಾಗಿ ಕೆಇಎ ಹೇಳಿದೆ. 

ಈ ಸುದ್ದಿ ಓದಿದ್ದೀರಾ? ಸಿಇಟಿ ಪ್ರಕರಣ ಇತ್ಯರ್ಥ | ಶ್ರೇಯಾಂಕಕ್ಕೆ ಸರಾಸರಿ ಅಂಕ ಕಡಿತಗೊಳಿಸಿ ಶೇ.50:50 ಅಂಕ ಪರಿಗಣನೆಗೆ ಹೈಕೋರ್ಟ್ ಆದೇಶ

2021ರಲ್ಲಿ ಕೊರೊನಾ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸದ ಕಾರಣ ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿ ನೀಡಿದ್ದ, ಅಂಕಗಳ ಆಧಾರದ ಮೇಲೆ ದ್ವಿತೀಯ ಪಿಯುಸಿ ಫಲಿತಾಂಶ ನೀಡಲಾಗಿತ್ತು. ಹಾಗಾಗಿ ಪುನಃ ಪರೀಕ್ಷೆ ಬರೆದಿದ್ದ, ಪುನರಾವರ್ತಿತ ವಿದ್ಯಾರ್ಥಿಗಳ ಕೆಸಿಇಟಿ ಒಟ್ಟು ಪಡೆದ ಅಂಕದಲ್ಲಿ ಸರಾಸರಿ 6 ಅಂಕಗಳನ್ನು ಕಡಿತ ಮಾಡಿ ಪಿಯುಸಿ ಮತ್ತು ಸಿಇಟಿಯ ಅಂಕಗಳಲ್ಲಿ ಶೇ. 50:50ರಂತೆ ಪರಿಗಣಿಸಿ ಫಲಿತಾಂಶ ಪ್ರಕಟಿಸಲು ಹೈಕೋರ್ಟ್ ಆದೇಶ ನೀಡಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180