ಪಾತ್ರಾ ಚಾಲ್‌ ಹಗರಣ| ಜಾರಿ ನಿರ್ದೇಶನಾಲಯದಿಂದ ಸಂಜಯ್‌ ರಾವತ್‌ ಪತ್ನಿ ವರ್ಷಾ ವಿಚಾರಣೆ

Varsha Raut
  • ಬಂಧಿತ ಸಂಜಯ್‌ ರಾವತ್ ಆಗಸ್ಟ್‌ 8 ರವರೆಗೆ ಇಡಿ ವಶಕ್ಕೆ
  • ಅವ್ಯವಹಾರದಲ್ಲಿ ರಾವುತ್‌ ಕುಟುಂಬ ಭಾಗಿಯಾಗಿರುವ ಆರೋಪ

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ನಾಯಕ ಸಂಜಯ್‌ ರಾವತ್ ಅವರ ಪತ್ನಿ ವರ್ಷಾ ರಾವತ್‌ ಅವರು ಶನಿವಾರ (ಆಗಸ್ಟ್ 6) ಜಾರಿ ನಿರ್ದೇಶನಾಲಯ (ಇ.ಡಿ) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. 

ಪಾತ್ರಾ ಚಾಲ್ ಭೂಹಗರಣಕ್ಕೆ ಸಂಬಂಧಿಸಿ ವರ್ಷಾ ರಾವತ್ ಅವರ ಬ್ಯಾಂಕ್‌ ಖಾತೆಗಳಿಂದ ಹಣದ ವಹಿವಾಟು ನಡೆದಿರುವ ಬಗ್ಗೆ ಮಾಹಿತಿ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಆಗಸ್ಟ್‌ 3ರಂದು ವರ್ಷಾ ಅವರಿಗೆ ಸಮನ್ಸ್‌ ನೀಡಿತ್ತು. 

ಈ ಸುದ್ದಿ ಓದಿದ್ದೀರಾ? ಬಿಹಾರ| ಕಳ್ಳಭಟ್ಟಿ ದುರಂತ; 12 ಜನ ಸಾವು, ಐವರ ಬಂಧನ

ಪಾತ್ರಾ ಭೂ ಹಗರಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ನಡೆದಿರುವುದಾಗಿ ಹೇಳಲಾಗಿದೆ. ಈ ಪ್ರಕರಣದಲ್ಲಿ ಸಂಜಯ್‌ ರಾವತ್‌, ಅವರ ಪತ್ನಿ ವರ್ಷಾ ಮತ್ತು ಸ್ನೇಹಿತ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ. 

ಪ್ರಕರಣದಲ್ಲಿ ಈಗಾಗಲೇ ಬಂಧನದಲ್ಲಿರುವ ಸಂಜಯ್‌ ರಾವತ್‌ ಅವರನ್ನು ಆಗಸ್ಟ್‌ 8 ರವರೆಗೆ ಇಡಿ ವಶಕ್ಕೆ ನೀಡಲಾಗಿದೆ. 

ಮುಂಬೈನ ಹೌಸಿಂಗ್‌ ಡೆವಲಪ್‌ಮೆಂಟ್‌ ಯೋಜನೆಯಲ್ಲಿ ನಡೆದಿರುವ ಅವ್ಯವಹಾರದಿಂದ ಸಂಜಯ್‌ ರಾವತ್‌ ಹಾಗೂ ಅವರ ಕುಟುಂಬಕ್ಕೆ ₹ 1.06 ಕೋಟಿ ದೊರೆತಿದೆ ಎಂದು ಇ.ಡಿ ಆರೋಪಿಸಿತ್ತು. ಕಳೆದ ಜುಲೈ 31 ರಂದು ರಾವತ್‌ ಅವರ ಮನೆಯಲ್ಲಿ ಇಡಿ ಶೋಧ ನಡೆಸಿತ್ತು. ಈ ವೇಳೆ ದಾಖಲೆಯಿಲ್ಲದ ₹11.5 ಲಕ್ಷ ನಗದು ದೊರೆತಿತ್ತು. 

ನಿಮಗೆ ಏನು ಅನ್ನಿಸ್ತು?
0 ವೋಟ್