ಪಾತ್ರಾಚಲ್ ಭೂ ಹಗರಣ| ಶಿವಸೇನೆ ಸಂಸದ ಸಂಜಯ್‌ ರಾವತ್‌ಗೆ ನ್ಯಾಯಾಂಗ ಬಂಧನ ವಿಸ್ತರಣೆ

Sanjya Raut
  • ಆಗಸ್ಟ್ 22ರವರೆಗೆ ರಾವತ್‌ಗೆ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ
  • ಸಂಜಯ್‌ ರಾವತ್‌ಗೆ ಮನೆಯಿಂದಲೇ ಊಟ, ಔಷಧಿ ಸರಬರಾಜು

ಪಾತ್ರಾಚಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಶಿವಸೇನೆ ಸಂಸದ ಸಂಜಯ್‌ ರಾವತ್‌ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂಬೈನ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಸೋಮವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಆಗಸ್ಟ್ 22ರವರೆಗೂ ನ್ಯಾಯಾಂಗ ಬಂಧನದ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದೆ.

ಸಂಜಯ್‌ ರಾವತ್‌ ಅವರ ಆರೋಗ್ಯ ದೃಷ್ಟಿಯಿಂದ ನ್ಯಾಯಾಂಗ ಬಂಧನದಲ್ಲಿ ಇರುವವರೆಗೆ ಅವರಿಗೆ ಮನೆಯಲ್ಲಿಯೇ ತಯಾರಿಸಿದ ಊಟ, ಔಷಧಿಗಳನ್ನು ಸ್ವೀಕರಿಸಲು ನ್ಯಾಯಾಲಯ ಅನುಮತಿ ನೀಡಿದೆ. 

ಆಗಸ್ಟ್‌ 4ರಂದು ಸಂಜಯ್‌ ರಾವತ್‌ ಅವರ ಇಡಿ ಕಸ್ಟಡಿಯನ್ನು ಆಗಸ್ಟ್‌ 8ರವರೆಗೆ ವಿಧಿಸಿ ನ್ಯಾಯಾಲಯ ಆದೇಶಿಸಿತ್ತು. ಆದರೆ, ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಂಗ ಬಂಧನದ ಅವಧಿ ವಿಸ್ತರಿಸುವಂತೆ ಇಡಿ ಕೋರಿತ್ತು. 

ಈ ಸುದ್ದಿ ಓದಿದ್ದೀರಾ? : ಕಲ್ಲಿದ್ದಲು ಹಗರಣ| ಕೇಂದ್ರ ಸರ್ಕಾರದ ನಿವೃತ್ತ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿಗೆ ಜೈಲು ಶಿಕ್ಷೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಜಾರಿ ನಿರ್ದೇಶನಾಲಯವು ಸಂಜಯ್‌ ರಾವತ್‌ ಅವರ ಪತ್ನಿ ವರ್ಷ ರಾವತ್‌ ಅವರನ್ನು ಒಂಭತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಪಾತ್ರಾಚಲ್‌ ಭೂ ಹಗರಣಕ್ಕೆ ಸಂಬಂಧಿಸಿದಂತೆ ಆಗಸ್ಟ್‌ 1ರಂದು ಇಡಿ ಅಧಿಕಾರಿಗಳು ಸಂಜಯ್‌ ರಾವತ್‌ ಅವರನ್ನು ಬಂಧಿಸಿದರು. 

ವಸತಿ ಪುನರಾಭಿವೃದ್ಧಿ ಯೋಜನೆಯಲ್ಲಿ ರಾವತ್ ಮತ್ತು ಅವರ ಕುಟುಂಬ ಒಂದು ಕೋಟಿಗೂ ಅಧಿಕ ಹಣಕಾಸು ಅವ್ಯವಹಾರ ನಡೆಸಿದ್ದು, ಇದಕ್ಕಾಗಿ ಇನ್ನಷ್ಟು ದಿನಗಳ ಕಾಲ ವಶಕ್ಕೆ ಒಪ್ಪಿಸಬೇಕೆಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪಿಎಂಎಲ್ ಎ ವಿಶೇಷ ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್