ಇರಾನ್‌ ಹಿಜಾಬ್‌ ಆಂದೋಲನ | ʻಮಹಿಳೆ, ಬದುಕು, ಸ್ವಾತಂತ್ರ್ಯʼ ಗೀತೆಯನ್ನು ಇರಾನಿನ ಮಹಿಳೆಯರಿಗೆ ಅರ್ಪಿಸಿದ ಸೆವ್ಡಾಲಿಜಾ

  • ಇರಾನ್‌ ಹಿಜಾಬ್‌ ಆಂದೋಲನಕ್ಕೆ ಡಚ್-ಇರಾನಿಯನ್ ಗಾಯಕಿ ಸೆವ್ಡಾಲಿಜಾ ಬೆಂಬಲ
  • 'ಮಹಿಳೆ ಬದುಕು ಸ್ವಾತಂತ್ರ್ಯʼ ಗೀತೆ ರಚಿಸಿ, ಇರಾನಿನ ಮಹಿಳೆಯರಿಗೆ ಅರ್ಪಿಸಿದ ಗಾಯಕಿ

ಹಿಜಾಬ್‌ ವಿರೋಧಿ ಆಂದೋಲನ ಇರಾನ್‌ನಲ್ಲಿ ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಳ್ಳುತ್ತಿದೆ. ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದು, ಪ್ರಪಂಚದಾದ್ಯಂತ ಮಹಿಳೆಯರು ಈ ಹೋರಾಟಕ್ಕೆ ಬೆಂಬಲ ಸೂಚಿಸಿ, ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಮಹಿಳಾ ಸಚಿವರು, ರಾಜತಾಂತ್ರಿಕರು, ಗಾಯಕರು, ನಟಿಯರು ಹಾಗೂ ಜನಸಾಮಾನ್ಯರು ಈ ಹೋರಾಟಕ್ಕೆ ಬೆಂಬಲ ಸೂಚಿಸಿ ಕೂದಲು ಕತ್ತರಿಸಿ, ತಾವಿರುವಲ್ಲಿಯೇ ಪ್ರತಿಭಟಿಸುವ ಮೂಲಕ ಮಹಿಳಾ ಹಕ್ಕುಗಳನ್ನು ದಕ್ಕಿಸಿಕೊಳ್ಳಲು ಹೋರಾಡುತ್ತಲೇ ಇದ್ದಾರೆ. ಈ ಹೋರಾಟವನ್ನು ಬೆಂಬಲಿಸಿ ʻಬೆಲ್ಲಾ ಚಾವ್‌ʼ ಹಾಡನ್ನು ಹೋರಾಟಕ್ಕೆ ಹೊಂದುವಂತೆ ಬರೆದು ಹಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದರ ಬೆನ್ನಲ್ಲೇ ಡಚ್-ಇರಾನಿಯನ್ ಗಾಯಕಿ-ಗೀತೆ ರಚನೆಕಾರ್ತಿ ಸೆವ್ಡಾಲಿಜಾ ಅವರು ತಮ್ಮ ಇತ್ತೀಚಿನ ಹಾಡೊಂದನ್ನು ಇರಾನ್‌ನಲ್ಲಿರುವ ಎಲ್ಲ ಮಹಿಳೆಯರಿಗೆ ಅರ್ಪಿಸಿದ್ದಾರೆ.

ಟೆಹ್ರಾನ್ ಮೂಲದ ಗಾಯಕಿ ಸೆವ್ಡಾಲಿಜಾ ಅವರು ಇರಾನ್‌ನ ಮಹಿಳೆಯರಿಗೆ 'ಮಹಿಳೆ ಬದುಕು ಸ್ವಾತಂತ್ರ್ಯʼ ಹಾಡನ್ನು ಅರ್ಪಿಸಿ, ಹೋರಾಟಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಇರಾನ್‌ನಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಮಹಿಳೆಯರು ಎದುರಿಸುತ್ತಿರುವ ಪಿತೃಪ್ರಭುತ್ವದ ದಬ್ಬಾಳಿಕೆ ಮತ್ತು ಮಹಿಳಾ ವಿರೋಧಿ ಪರಿಸ್ಥಿತಿಯನ್ನು ಹದಗೆಡಿಸುವ ರಾಜಕೀಯದ ಬಗ್ಗೆ ಈ ಹಾಡಿನಲ್ಲಿದೆ.

Eedina App

ಈ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಳಿಸಿರುವ ಸೆವ್ಡಾಲಿಜಾ, ವಿಡಿಯೋದೊಂದಿಗೆ ಇರಾನಿನ ಮಹಿಳೆಯರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

AV Eye Hospital ad

“ಸ್ವಾತಂತ್ರ್ಯವಿಲ್ಲದ ಮಹಿಳೆ ಮಣ್ಣಿನೊಂದಿಗೆ ಇರುವ ಹೂವಿನಂತೆ. ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ನಮಗೆ ಸ್ವಾತಂತ್ರ್ಯ ಸಿಕ್ಕೇ ಸಿಗುತ್ತದೆ ಎಂದು ಆಶಿಸುತ್ತೇನೆ. ಎಡೆಬಿಡದ ಈ ಹೋರಾಟದಲ್ಲಿ ನಿರತರಾಗಿರುವ ಎಲ್ಲ ಮಹಿಳೆಯರಿಗೂ ಅನಂತ ಧನ್ಯವಾದಗಳು” ಎಂದು ಅವರು ಬರೆದುಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಭಾರತ್ ಜೋಡೋ ಯಾತ್ರೆ | ಉಳ್ಳೇರಹಳ್ಳಿ ದಲಿತ ಬಾಲಕನ ಪೋಷಕರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ

ಇರಾನ್‌ನಾದ್ಯಂತ ಮಹಿಳೆಯರು ಒಬ್ಬರಿಗೊಬ್ಬರ ಪರಸ್ಪರ ಜೊತೆಯಾಗಿ ಮಹಿಳಾ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವವರ ಘೋಷವಾಕ್ಯ 'ಮಹಿಳೆ ಬದುಕು ಸ್ವಾತಂತ್ರ್ಯ'. ಈ ಹೋರಾಟಕ್ಕೆ ಬಂಬಲ ಸೂಚಿಸುವ ನಿಟ್ಟಿನಲ್ಲಿ ಸೆವ್ಡಾಲಿಜಾ ಅದೇ ಘೋಷವಾಕ್ಯದ ಹಾಡನ್ನು ಹೊರತಂದಿದ್ದಾರೆ.

“ನಾನು ಪ್ರಪಂಚದಾದ್ಯಂತ ತುಳಿತಕ್ಕೊಳಗಾದ ಮಹಿಳೆಯರಿಗಾಗಿ ಹಾಡನ್ನು ಬರೆದಿದ್ದೇನೆ. ನಾನೂ ಇರಾನಿನ ಮಹಿಳೆ ಎಂಬುದಕ್ಕೆ ನನಗೆ ಹೆಮ್ಮೆ ಇದೆ. ಒಂದು ದಿನ ನಾವು ಸ್ವತಂತ್ರರಾಗುತ್ತೇವೆ ಎಂಬ ಭರವಸೆಯನ್ನು ನೀಡಲು ತಮ್ಮ ರಕ್ತ, ಕೂದಲು, ಹೃದಯ ಮತ್ತು ಮಿದುಳು ಎಲ್ಲವನ್ನೂ ಹೋರಾಟಕ್ಕೆ ಅರ್ಪಿಸಿರುವ ನನ್ನ ಸಹೋದರಿಯರ ಈ ಕೆಚ್ಚೆದೆಯ ಆಂದೋಲನವನ್ನು ನಾನು ಬೆಂಬಲಿಸುತ್ತೇನೆʼʼ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಿಜಾಬ್‌ ವಿರೋಧಿ ಆಂದೋಲನ ಆರಂಭವಾದದ್ದು ಹೇಗೆ?

ಹಿಜಾಬ್ ಸರಿಯಾಗಿ ಧರಿಸದ ಕಾರಣಕ್ಕೆ ಇರಾನಿನ ಕುರ್ದಿಸ್ ಪ್ರದೇಶದ ಸಾಕ್ವಜ್ ನಗರದ 22 ವರ್ಷದ ಮಹ್ಸಾ ಅಮೀನಿಯನ್ನು ಪೊಲೀಸರು ಬಂಧಿಸಿದ್ದರು. ನಂತರ ಪೊಲೀಸ್ ಕಸ್ಟಡಿಯಲ್ಲಿಯೇ ಅವರ ಹೊಡೆತದ ಕಾರಣ ಮೂರು ದಿನ ಕೋಮಾದಲ್ಲಿದ್ದು ದಿನಾಂಕ ಸೆಪ್ಟೆಂಬರ್‌ 13ರಂದು ಆಕೆ ಮೃತಪಟ್ಟಳು.

ಶತಮಾನಗಳಿಂದ ಇಸ್ಲಾಮಿಕ್‌ ಕಾನೂನು ಕಟ್ಟಳೆಗಳಿಂದ ನೊಂದಿರುವ ಇರಾನಿನ ಮಹಿಳೆಯರು ಈ ದೌರ್ಜನ್ಯದ ವಿರುದ್ಧ ಸಿಡಿದೆದ್ದಿದ್ದಾರೆ. ಕೇವಲ ಮಹಿಳೆಯರೇ ಅಲ್ಲ, ಬದಲಾಗಿ ಪುರುಷರೂ ಈ ಹೋರಾಟವನ್ನು ಬೆಂಬಲಿಸಿ ಬೀದಿಗಿಳಿಯುತ್ತಿದ್ದಾರೆ. ಇದರ ಪರಿಣಾಮವಾಗಿ ಸಾವಿರಾರು ಜನ ಬೀದಿಗಿಳಿದು ಹಿಜಾಬ್‌ಗಳನ್ನು ಸಾರ್ವಜನಿಕವಾಗಿ ಸುಡುವ ಮತ್ತು ತಮ್ಮ ಕೂದಲನ್ನು ಕತ್ತರಿಸಿಕೊಳ್ಳುವಂತಹ ಪ್ರತಿಭಟನೆಯನ್ನು ಮಾಡುತ್ತ ಸರ್ಕಾರದ ನಡೆಯನ್ನು ವಿರೋಧಿಸುತ್ತಿದ್ದಾರೆ.

ʻʻಚಿಕ್ಕ ವಯಸ್ಸಿನಲ್ಲಿ, ಅವರು ಮುಂದುವರಿಸುತ್ತಾರೆ, “ಹಿಂಸಾಚಾರ ಮತ್ತು ಬೆದರಿಕೆಯ ಮೂಲಕ ಮಹಿಳೆಯರನ್ನು ವಿಧೇಯತೆಗೆ ಒತ್ತಾಯಿಸುವ ಈ ವ್ಯವಸ್ಥಿತ ವಿಧಾನದ ಬಗ್ಗೆ ನನಗೆ ಅರಿವಾಗಿದೆ. ಇಂದು ಮಾತ್ರವಲ್ಲ ಎಂದೆಂದಿಗೂ ನಾವು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ನಿಲ್ಲಬೇಕುʼʼ ಎಂದು ಅವರು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app