ತಮಿಳುನಾಡು| ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಏಳು ಬಾಲಕಿಯರು ಮೃತ್ಯು

  •  ಗೆದ್ದಿಲಮ್ ನದಿಯ ಚೆಕ್ ಡ್ಯಾಂ ಬಳಿ ನಡೆದ ಘಟನೆ
  •  ಏಳು ಶವಗಳನ್ನು ಹೊರತೆಗೆದ ರಕ್ಷಣಾ ಸಿಬ್ಬಂದಿ

ತಮಿಳುನಾಡಿನ ಕಡಲೂರು ಜಿಲ್ಲೆಯ ನೆಲ್ಲಿಕುಪ್ಪಂ ಬಳಿಯಿರುವ ನದಿಯಲ್ಲಿ ಏಳು ಬಾಲಕಿಯರು ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ.

ಮೃತರನ್ನು ಎ ಮೋನಿಶಾ(16),  ಆರ್ ಪ್ರಿಯದರ್ಶಿನಿ(15), ಆಕೆಯ ಸಹೋದರಿ ಆರ್ ದಿವ್ಯ ದರ್ಶಿನಿ(10), ಎಂ ನವನೀತ(18), ಕೆ ಪ್ರಿಯಾ(18), ಎಸ್ ಸಂಗಾವಿ(16) ಮತ್ತು ಎಂ ಕುಮುದಾ (18) ಎಂದು ಗುರುತಿಸಲಾಗಿದೆ. 

ಈ ಸುದ್ದಿ ಓದಿದ್ದೀರಾ? ಸಮುದ್ರ ಮಟ್ಟದ ಏರಿಕೆಗೆ ಮೊದಲು ಕುಸಿತದಿಂದಲೇ ಮುಳುಗಲಿರುವ ಕರಾವಳಿ ನಗರಗಳು

ವರದಿಯ ಪ್ರಕಾರ ಹದಿಹರೆಯದ ಹುಡುಗಿಯರು ಭಾನುವಾರ ಮಧ್ಯಾಹ್ನ ಸುಮಾರು 12.45 ಸಮಯದಲ್ಲಿ ಗೆದ್ದಿಲಮ್ ನದಿಯ ಚೆಕ್ ಡ್ಯಾಂನಲ್ಲಿ ಮುಳುಗಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ನೆಲ್ಲಿಕುಪ್ಪಂ ಸಮೀಪದ ಎ ಕೂಚಿಪಾಳ್ಯಂ ಮತ್ತು ಅಯನ್ ಕುರುಂಜಿಪಾಡಿ ಪ್ರದೇಶದಿಂದ ಬಂದ  ಬಾಲಕಿಯರು ಸ್ನಾನ ಮಾಡಲು ನೀರಿಗೆ ಇಳಿದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಏಳು ಬಾಲಕಿಯರ ಶವಗಳನ್ನು ಹೊರತೆಗೆದಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್