ಶಿವಮೊಗ್ಗ | ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣ: ಆರೋಪಿ ಬಂಧನ

sunil
  • ಬಜರಂಗದಳದ ಕಾರ್ಯಕರ್ತ ಸುನಿಲ್‌ ಮೇಲೆ ಹಲ್ಲೆ ಆರೋಪ
  • ಡಿಚ್ಚಿ ಮುಬಾರಕ್‌ ಬಂಧಿಸಿದ ಭದ್ರಾವತಿ ಹಳೆ ನಗರ ಪೊಲೀಸರು

ನಿಷೇಧಾಜ್ಞೆಯ ನಡುವೆಯೇ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಬಜರಂಗದಳದ ಕಾರ್ಯಕರ್ತ ಸುನಿಲ್‌ ಎಂಬಾತನ ಮೇಲೆ ಹಲ್ಲೆ ನಡೆದಿದ್ದು, ಭದ್ರಾವತಿ ಹಳೆ ನಗರ ಠಾಣಾ ಪೊಲೀಸರು‌ ಆರೋಪಿ ಡಿಚ್ಚಿ ಮುಬಾರಕ್‌ನನ್ನು ಬಂಧಿಸಿದ್ದಾರೆ. 

ಸೋಮವಾರ (ಆಗಸ್ಟ್‌ 15) ಸಂಜೆ ಭದ್ರಾವತಿಯಲ್ಲಿ ಬಜರಂಗದಳ ಕಾರ್ಯಕರ್ತ ಸುನಿಲ್ ಮತ್ತು ಮುಬಾರಕ್ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಇದಕ್ಕೆ ಪ್ರತೀಕಾರವಾಗಿ ಮುಬಾರಕ್‌, ಸುನಿಲ್‌ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಗಾಯಾಳು ಸುನಿಲ್‌ಗೆ ಭದ್ರಾವತಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಆರೋಪಿ ಮುಬಾರಕ್‌ ಈ ಹಿಂದೆಯೂ ಹಲವರು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ನಾಲ್ಕು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದನಂತೆ. ಇದೀಗ ಮತ್ತೊಂದು ಪ್ರಕರಣದಲ್ಲಿ ಬಂಧಿಯಾಗಿ ಜೈಲು ಸೇರಿದ್ದಾನೆ. 

ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಪಾಲಿಕೆಯಿಂದ ನಗರದಾದ್ಯಂತ ಫ್ಲೆಕ್ಸ್‌ ತೆರವು ಕಾರ್ಯಾಚರಣೆ

ಸಾವರ್ಕರ್‌ ಮತ್ತು ಟಿಪ್ಪು ಬ್ಯಾನರ್‌ ವಿಚಾರವಾಗಿ ಆಗಸ್ಟ್‌ 15 ರಂದು ಶಿವಮೊಗ್ಗದಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು. ಅಲ್ಲದೆ, ಯುವಕರಿಬ್ಬರಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದರು. ಇದರಿಂದಾಗಿ ನಗರದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್