ಶಿವಮೊಗ್ಗ | ಚೂರಿ ಇರಿತ ಪ್ರಕರಣ ಸಂಬಂಧ ನಾಲ್ವರ ಬಂಧನ

  • ಪ್ರೇಮ್‌ಸಿಂಗ್‌ಗೆ ಚೂರಿ ಇರಿದು ತಲೆಮರೆಸಿಕೊಂಡಿದ್ದ ಆರೋಪಿಗಳು
  • ನಾಲ್ವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ವಶಕ್ಕೆ ಪಡೆದ ಪೊಲೀಸರು

ಶಿವಮೊಗ್ಗದಲ್ಲಿ ಪ್ರೇಮ್‌ ಸಿಂಗ್‌ಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. 

ಶಿವಮೊಗ್ಗದ ಜೆ ಸಿ ನಗರದ ಎರಡನೇ ಕ್ರಾಸ್‌ ನಿವಾಸಿ ನದೀಮ್‌ ಅಲಿಯಾಸ್‌ ನೌಶಾದ್‌ ಅಲಿ (25), ಬುದ್ಧ ನಗರದ ನಿವಾಸಿ ಅಬ್ದುಲ್ ರೆಹಮಾನ್ (25), ಆರ್‌ಎಂಎಲ್ ನಗರದ ತನ್ವೀರ್ ಅಹಮದ್ (22) ಹಾಗೂ ಪ್ರಮುಖ ಆರೋಪಿ ಮಾರ್ನಬೈಲಿನ ಚರ್ಬಿ ಅಲಿಯಾಸ್ ಜಬೀವುಲ್ಲಾ (30)ನನ್ನು ಬಂಧಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. 

ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣ: ಆರೋಪಿ ಬಂಧನ

ಆಗಸ್ಟ್ 15 ರಂದು ಗಾಂಧಿ ಬಜಾರಿನಲ್ಲಿ ಪ್ರೇಮ್‌ಸಿಂಗ್ ಎಂಬಾತನಿಗೆ ಚಾಕು ಇರಿದು ಆರೋಪಿಗಳು ಪರಾರಿಯಾಗಿದ್ದರು. ಇಂದು ಬೆಳಗಿನ ಜಾವ ಆರೋಪಿ ಇರುವ ಜಾಗದ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಚರ್ಬಿಯನ್ನು ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ಆರೋಪಿ ಪೊಲೀಸರ ಮೇಲೆಯೇ ಚಾಕುವಿನಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಆಗ, ವಿನೋಬ ನಗರ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ ಎಸ್ ಕುರಿ ಗುಂಡು ಹಾರಿಸಿದ್ದಾರೆ. ಚರ್ಬಿ ಬಲಗಾಲಿಗೆ ಗುಂಡು ತಗುಲಿದ್ದು, ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್