ಶಿವಮೊಗ್ಗ | ಸಾವರ್ಕರ್‌ ಬ್ಯಾನರ್‌ ವಿಚಾರವಾಗಿ ಗಲಾಟೆ, ಲಘು ಲಾಠಿ ಪ್ರಹಾರ

Shimoga
  • ಸಾವರ್ಕರ್‌ ಬ್ಯಾನರ್‌ ತೆರವುಗೊಳಿಸಿದ್ದಕ್ಕೆ ಗುಂಪುಗಳ ಮ‍ಧ್ಯೆ ಗಲಾಟೆ
  • ನಗರದಲ್ಲಿ ಇಂದು ಮತ್ತು ನಾಳೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ

ಶಿವಮೊಗ್ಗದಲ್ಲಿ ಸಾವರ್ಕರ್‌ ಬ್ಯಾನರ್‌ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಅಮೀರ್‌ ಅಹ್ಮದ್‌ ವೃತ್ತದಲ್ಲಿ ಗುಂಪೊಂದು ವಿ ಡಿ ಸಾವರ್ಕರ್‌ ಬ್ಯಾನರ್‌ ತೆರವುಗೊಳಿಸಿದ್ದಕ್ಕೆ ಮತ್ತೊಂದು ಗುಂಪು ಆಕ್ರೋಶ ಹೊರಹಾಕಿದೆ. 

ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದು, ಹಲವರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್‌, ಡಿವೈಎಸ್‌ಪಿ ಸೇರಿದಂತೆ ಹಲವು ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.‌ ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ ಇಂದು ಮತ್ತು ನಾಳೆ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.‌

ಈ ಸುದ್ದಿ ಓದಿದ್ದೀರಾ?: ಚನ್ನರಾಯಪಟ್ಟಣ ರೈತರ ಮೌನ ಪ್ರತಿಭಟನೆ ಹತ್ತಿಕ್ಕಿದ ಪೊಲೀಸರು | ‘ಭೂಸ್ವಾಧೀನ ಹೋರಾಟ ಸಮಿತಿ’ ಮುಖಂಡರ ಬಂಧನ

ಕಳೆದ ಎರಡು ದಿನಗಳ ಹಿಂದಷ್ಟೇ ಶಿವಮೊಗ್ಗದ ಮಾಲ್‌ವೊಂದರಲ್ಲಿ ವಿ ಡಿ ಸಾವರ್ಕರ್ ಅವರ ಭಾವಚಿತ್ರ ಅಳವಡಿಕೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಎಂ ಡಿ ಷರೀಫ್ ಅಲಿಯಾಸ್ ಆಸೀಫ್ ಅವರನ್ನು  ಪೊಲೀಸರು ಬಂಧಿಸಿ, ಆಗಸ್ಟ್ 26ರವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದರು. 

ನಿಮಗೆ ಏನು ಅನ್ನಿಸ್ತು?
0 ವೋಟ್