ಶಿವಮೊಗ್ಗ | ನಿಷೇಧಾಜ್ಞೆ ಜಾರಿ ನಡುವೆಯೇ ಯುವಕನಿಗೆ ಚೂರಿ ಇರಿತ

knife
  • 27 ವರ್ಷದ ಯುವಕನಿಗೆ ಚೂರಿ ಇರಿದ ದುಷ್ಕರ್ಮಿಗಳು
  • ಗಾಯಾಳುವಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ನಿಷೇಧಾಜ್ಞೆ ಜಾರಿ ನಡುವೆಯೇ ಶಿವಮೊಗ್ಗದ ಅಶೋಕ ನಗರದಲ್ಲಿ 27 ವರ್ಷದ ಯುವಕನಿಗೆ ಚೂರಿ ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. 

ಯುವಕ, ಗಾಂಧಿ ಬಜಾರ್‌ನಲ್ಲಿ ಅಂಗಡಿ ಬಾಗಿಲು ಹಾಕಿಕೊಂಡು ಮನೆಯತ್ತ ಹೊರಟಾಗ ಅಡ್ಡಗಟ್ಟಿದ ದುಷ್ಕರ್ಮಿಗಳು ಚೂರಿ ಇರಿದಿದ್ದಾರೆ ಎನ್ನಲಾಗಿದೆ. ಗಾಯಾಳು ಯುವಕನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

ಕೆಲ ಹೊತ್ತಿನ ಹಿಂದೆ ಶಿವಮೊಗ್ಗದಲ್ಲಿ ಸಾವರ್ಕರ್‌ ಬ್ಯಾನರ್‌ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಅಮೀರ್‌ ಅಹ್ಮದ್‌ ವೃತ್ತದಲ್ಲಿ ಗುಂಪೊಂದು ವಿ ಡಿ ಸಾವರ್ಕರ್‌ ಬ್ಯಾನರ್‌ ತೆರವುಗೊಳಿಸಿದ್ದಕ್ಕೆ ಮತ್ತೊಂದು ಗುಂಪು ಆಕ್ರೋಶ ಹೊರ ಹಾಕಿತ್ತು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದು, ಹಲವರನ್ನು ವಶಕ್ಕೆ ಪಡೆದಿದ್ದರು. ಸ್ಥಳದಲ್ಲಿ ಡಿವೈಎಸ್‌ಪಿ, ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್‌ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿದ್ದರು.

ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಸಾವರ್ಕರ್‌ ಬ್ಯಾನರ್‌ ವಿಚಾರವಾಗಿ ಗಲಾಟೆ, ಲಘು ಲಾಠಿ ಪ್ರಹಾರ

ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ ಇಂದು ಮತ್ತು ನಾಳೆ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.‌

ನಿಮಗೆ ಏನು ಅನ್ನಿಸ್ತು?
0 ವೋಟ್